ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಯಾದವಕೃಷ್ಣ, ನವೀನ್ ಚಾಲುಕ್ಯ, ಡಾ. ಅಶ್ವಿನಿ ಇತರರು ಇದ್ದರು.
- ಆರ್‌ಎಸ್‌ಎಸ್ ಸಹ ಪ್ರಮುಖ್ ಯಾದವಕÊಷ್ಣ ಅಭಿಮತ
- ದುರ್ಗದಲ್ಲಿ ಹಿಂದು ಸಂಗಮ ಕಾರ್ಯಕ್ರಮ
- ಶೋಭಾಯಾತ್ರೆ
ಚಿತ್ರದುರ್ಗ: ಭಾರತದ ಶ್ರೇಷ್ಠ ಸಂಸ್ಕೃತಿಯಿAದಾಗಿ ದೇಶಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನೆಲ್ಲೆಡೆ ಗೌರವ ದೊರೆಯುತ್ತಿದೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಮುಖ್ ಯಾದವ ಕೃಷ್ಣ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ನಗರದ ಆನೆ ಬಾಗಿಲ ಬಳಿ ಶನಿವಾರ ಸಂಜೆ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯ ಕ್ರಮದಲ್ಲಿ ಮಾತನಾಡಿ, ನೂರು ವರ್ಷಗಳ ನಮ್ಮ ಪೂರ್ವಜರಿಗೆ ನಾವು ಹಿಂದೂ ಎಂಬುದೇ ಮರೆತು ಹೋಗಿತ್ತು. ಆಗ ಉದಯಿ ಸಿದ ಆರ್‌ಎಸ್‌ಎಸ್‌ನಿಂದಾಗಿ ನಾನು ಹಿಂದೂ ಎಂದು ಹೇಳಲು ಹೆಮ್ಮೆ ಪಡುವಂತಾಗಿದೆ. ಈಗ ಹಿಂದೂ ಎಂಬುದು ಅಭಿಮಾನದ ಸಂಕೇತವಾಗಿದೆ ಎಂದರು.
ಅನೇಕ ದಾಳಿಗಳಾದರೂ ಹಿಂದೂ ಸಂಸ್ಕೃತಿ ಅಳಿದಿಲ್ಲ. ಇದನ್ನು ಉಳಿಸಿದ ಕೀರ್ತಿ ನಮ್ಮ ತಾಯಂದಿರಿಗೆ ಸಲ್ಲುತ್ತದೆ. ಇನ್ನೂ ಸಾ ವಿರಾರು ವರ್ಷಗಳು ಕಳೆದರೂ ನಮ್ಮ ಸಂಸ್ಕೃತಿ ಇರುತ್ತದೆ. ಮಂದಿರಗಳನ್ನು ಕಳೆದುಕೊಂಡೆವು ಆದರೆ ರಾಮ, ಕೃಷ್ಣನನ್ನು ಕಳೆದುಕೊಳ್ಳಲಿಲ್ಲ. ಇಡೀ ಜಗತ್ತು ಹಿಂದೂಗಳ ಕಡೆ ನೋಡುತ್ತಿದೆ. ನಾವು ಜಗತ್ತಿಗೆ ಯೋಗವನ್ನು ಕೋಟಿದ್ದೇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ವಿಶ್ವಕ್ಕೆ ಆದರ್ಶವಾಗಿರುವ ಭಾರತ ತ್ಯಾಗದ ಸಂಕೇತವಾಗಿದೆ. ಶಸö ಹಿಡಿದು ಯಾರ ಮೇಲೂ ನಾವು ದಬ್ಬಾಳಿಕೆ ಮಾಡಿಲ್ಲ. ಶಾಸö ಹಿಡಿದು ವಿದೇಶಿಗರನ್ನು ಗೆದ್ದಿದ್ದೇವೆ. ಇದಕ್ಕೆ ಸ್ವಾಮಿ ವಿವೇಕಾನಂದರೇ ಉದಾಹರಣೆ. ನಮ್ಮದು ಶಾಂತಿ, ನೆಮ್ಮದಿಯ ದೇಶ. ಆದರೆ, ಇತ್ತೀಚೆಗೆ ನಮ್ಮನ್ನು ಕೆಣಕುತ್ತಿದ್ದಾರೆ. ದೇಶಕ್ಕೆ ಒಂದೇ ಕಾನೂನು ಜಾರಿಯಾಗಬೇಕು ಎಂದರು.
ಡಾ.ಅಶ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ್, ಲೀಲಾಧರ್‌ಠಾಕೂರ್, ನಾಗರಾಜ್ ಬೇದ್ರೆ, ಓಂಕಾರ್, ಜಿತೇಂದ್ರ ಹುಲಿಕುಂಟೆ, ಬಸಮ್ಮ ಇದ್ದರು.
ಮಕ್ಕಳಿಗೆ ರಾಷ್ಟç ನಾಯಕರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ನಗರದ ವಿವಿಧೆಡೆ ಶೋಭಾಯಾತ್ರೆ ನಡೆಯಿತು.