ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ೧೨ ವರ್ಷ ಯಶಸ್ವಿ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದ ಚಂದ್ರವಳ್ಳಿ ಮೈದಾನದಲ್ಲಿ ಸ್ಚಚ್ಛತಾ ಕಾರ್ಯ ನಡೆಸಿದರು. ಡಾ. ಸಿದ್ದಾರ್ಥ ಗುಂಡಾರ್ಫಿ, ಮಾಧುರಿ ಗಿರೀಶ್, ವೆಂಕಟೇಶ್‌ಯಾದವ್, ಮೋಹನ್‌ಕುಮಾರ್, ಜಿ.ಎನ್. ಲಿಂಗರಾಜು, ಎಸ್. ಬಸವೇಶ್, ಲೀಲಾ ಶಶಿಧರ್, ಅಣ್ಣಪ್ಪ, ರೇಖಾ ಇತರರು ಇದ್ದರು.
- ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಫಿ ಅಭಿಮತ
- ಕಾರ್ಯಕರ್ತರಿಂದ ಚಂದ್ರವಳ್ಳಿ ಮೈದಾನದಲ್ಲಿ ಶ್ರಮದಾನ
- ಪ್ರಧಾನಿ ನರೇಂದ್ರ ಮೋದಿ ಅವರ ೧೨ ವರ್ಷ ಯಶಸ್ವಿ ಆಡಳಿತ
ಚಿತ್ರದುರ್ಗ: ಪ್ಲಾಸ್ಟಿಕ್ ಮಣ್ಣಿನಲ್ಲಿ ಬೆರೆತು ವಿಷಕಾರಿಯಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಫಿ ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ೧೨ ವರ್ಷ ಯಶಸ್ವಿ ಆಡಳಿತದ ಹಿನ್ನೆಲೆ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ನಗರ ಮಂಡಲ ಕಾರ್ಯಕರ್ತರು ಪೌರ ಕಾರ್ಮಿಕರ ಸಹಕಾರದೊಂದಿಗೆ ನಗರದ ಚಂದ್ರವಳ್ಳಿ ಬಳಿ ಗುರುವಾರ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಹಾಗೂ ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಪರಿಸರದ ಮೇಲೆ ದಷ್ಪರಿಣಾಮ ಬೀರುತ್ತಿದೆ. ನಾಗರಿಕರು, ಮನೆ, ಅಂಗಡಿ ಮುಂಗಟ್ಟುಗಳ ಹಸಿ, ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಗರಸಭೆ ಸ್ವಚ್ಛತಾ ವಾಹಿನಿಗಳಿಗೆ ಕೊಡಬೇಕು. ಇದರಿಂದ ನಗರದ ಸ್ವಚ್ಛತೆ ಕಾಪಾಡಬಹುದು ಎಂದರು.
ಪರಿಸರ ಸಂರಕ್ಷಣೆ ಮೂಲಕ ಭವಿಷ್ಯದ ಪೀಳಿಗೆ ಬಗ್ಗೆ ಎಚ್ಚರ ವಹಿಸಬೇಕಿದೆ. ಪರಿಸರ ರಕ್ಷಣೆ ಎಂಬುದು ಸರ್ಕಾರ, ಕಾನೂನು, ಸಂಘ ಸಂಸ್ಥೆಗಳಿಗೆ ಸೀಮಿತವಲ್ಲ. ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಮನುಷ್ಯನ ಅತೀ ಬುದ್ಧಿವಂತಿಕೆಯಿAದ ಭೂಮಿ, ನೀರು, ವಾಯು ಕಲುಷಿತಗೊಂಡಿದೆ. ಪರಿಸರ ಮಾಲಿನ್ಯ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ.
ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಪ್ರಜ್ಞಾಪೂರ್ವಕವಾಗಿ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.
ಚAದ್ರವಳ್ಳಿ ಮೈದಾನದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಯಿತು.
ಮಾಧುರಿ ಗಿರೀಶ್, ವೆಂಕಟೇಶ್‌ಯಾದವ್, ಮೋಹನ್ ಕುಮಾರ್, ಜಿ.ಎನ್. ಲಿಂಗರಾಜು, ಎಸ್. ಬಸವೇಶ್, ಲೀಲಾ ಶಶಿಧರ್, ಅಣ್ಣಪ್ಪ, ರೇಖಾ, ಮಹಾಂತೇಶ್, ಪಲ್ಲವಿ ಪ್ರಸನ್ನ, ನಾಗರಾಜ್, ವಿರೂಪಾಕ್ಷಿ, ಸುಮಾ,ನಾಗರಾಜ್‌ಬೇದ್ರೆ, ಎಚ್.ಎನ್.ಲೋಕೇಶ್, ಡಾ. ವಸಂತಾಚಾರ್, ಡಿ.ಸಿ. ಸಂಜಯ್, ಅರುಣ್, ಯಶು ,ಪ್ರದೀಪ್, ನಾಗರಾಜಪ್ಪ ಮತ್ತಿತರ ಪಕ್ಷದ ಪ್ರಮುಖರು, ಕಾರ್ಯ ಕರ್ತರು ಭಾಗವಹಿಸಿದ್ದರು.
ಅಮ್ಮನ ಹೆಸರಲ್ಲಿ ಒಂದು ಸಸಿ ನೆಟ್ಟು ಪೋಷಿಸಿ
ಚಿತ್ರದುರ್ಗ: ಪರಿಸರ ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ನಾವು ಅತ್ಯುತ್ತಮ ಕೊಡುಗೆ ಕೊಡಬೇಕಿದೆ ಎಂದು ಚಿತ್ರದುರ್ಗ ತಾಲೂಕು ಕೂನಬೇವು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಹನುಮಂತಪ್ಪ ಹೇಳಿದರು.
ಗ್ರಾಪಂನಿAದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯ ಕ್ರಮದಲ್ಲಿ ಮಾತನಾಡಿ, ಜಾಗತಿಕ ತಾಪಮಾನದಂತಹ ಜ್ವಲಂತ ಸಮಸ್ಯೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸುವುದೊಂದೇ ಏಕೈಕ ಪರಿಹಾರವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿ ವಿದ್ಯಾರ್ಥಿ ಅಮ್ಮನ ಹೆಸರಿನಲ್ಲಿ ಒಂದು ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪಿಡಿಒ ಧನಂಜಯ ರೆಡ್ಡಿ ಮಾತನಾಡಿ, ಉತ್ತಮ ಪರಿಸರದಿಂದ ಮಾತ್ರ ಒಳ್ಳೆಯ ಆರೋಗ್ಯ ಪಡೆಯಲು ಸಾಧ್ಯ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೆಂಚಪ್ಪ, ಶಿಕ್ಷಕರಾದ ಕೃಷ್ಣ, ಮಾರುತಿ ಪ್ರಸಾದ್, ಷರೀಫ್, ಓಬಣ್ಣ ಇತರರು ಇದ್ದರು.
ಮುರುಘಾಮಠದಿಂದ ಪರಿಸರದೆಡೆ ಜಾಗೃತಿ
ಚಿತ್ರದುರ್ಗ: ಸಸಿ ನೆಡುವ ಸಪ್ತಾಹದ ಮೂಲಕ ಮುರುಘಾ ಮಠ ಜನಸಾಮಾನ್ಯರಲ್ಲಿ ಪರಿಸರದ ಬಗ್ಗೆ ಜಾಗÊತಿ ಮೂಡಿಸುತ್ತಿದೆ ಎಂದು ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಸಾಯಿ ಲೇಔಟ್ ಕಾವಾಡಿಗರ ಹಟ್ಟಿ ಬಳಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀಮಠ ಆಯೋಜಿಸಿದ್ದ ಸಸಿ ನೆಡುವ ಆರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನಾ ಸಂಘ ಸಂಸ್ಥೆಗಳು, ಶಾಲಾ, ಕಾಲೇಜುಗಳು, ಅರಣ್ಯ ಇಲಾಖೆ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ ಎಂದರು.
ಮಾದಕನಾಯಕನಹಳ್ಳಿ ಪಟೇಲ್ ಬಸಣ್ಣ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಎಸ್.ಎಂ. ಮÊತ್ಯುಂಜಯ ಸ್ವಾಮಿ ಅವರು ಪಂಚಭೂತ ಗಳು ಮತ್ತು ಪರಿಸರ ಕುರಿತು ಮಾತನಾಡಿ, ಪ್ರಕÊತಿಯಿಂದ ನಾವು, ನಮ್ಮಿಂದ ಪ್ರಕÊತಿ ಇಲ್ಲ ಎಂಬ ಪ್ರಜ್ಞೆ ನಮಗಿರಬೇಕು. ಸುಖದ ಜೀವನಕ್ಕೆ ದಿನ ದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಸಾಮಾಜಿಕ ಅರಣ್ಯ ವಿಭಾಗದ ಎಸಿಎಫ್ ಮಹಾಂತೇಶ್ ಎಸ್.ನ್ಯಾಮತಿ ಅವ ರು ಮಾತನಾಡಿದರು. ರಾಜೇಶ್, ಕೆ.ಬಿ. ಸುರೇಶ್, ಹನುಮಂತಪ್ಪ, ಡಾ.ರಘುನಾಥರೆಡ್ಡಿ, ಡಾ.ಎಲ್. ಈಶ್ವರಪ್ಪ, ಟಿ. ಆಶಾರಾಣಿ,ನಾಗರಾಜ ಸಂಗA, ಗಾಯತ್ರಿ ಶಿವರಾಂ, ಬಸವರಾಜಕಟ್ಟಿ, ಟಿ.ಪಿ. ಜ್ಞಾನಮೂರ್ತಿ, ನಂದೀಶ್, ಎಸ್.ಎಂ. ಕೊಟ್ರೇಶಪ್ಪ ಇತರರು ಇದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ, ನಾಗನಾಯ್ಕ ನಿರೂಪಿಸಿದರು.