ಚಿತ್ರದುರ್ಗ ತಾಲೂಕು ಪಂಡರಹಳ್ಳಿ ಯರೇಓಣಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಶರತ್, ಸೊಸೈಟಿ ಮಂಜಣ್ಣ, ರವಿಕುಮಾರ್, ಬಸವರಾಜ್ ಇತರರು ಇದ್ದರು. 
ಚಿತ್ರದುರ್ಗ

ಅಂತರ್ಜಲ ಹೆಚ್ಚಳ ಯೋಜನೆಗಳ ಅನುಷ್ಠಾನಕ್ಕೆ ಒತ್ತು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿಕೆ
  • ಪಂಡರಹಳ್ಳಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
  • ಸಿಸಿ ರಸ್ತೆ ನಿರ್ಮಾಣ ಕಾಮಗಾರಿ
ಚಿತ್ರದುರ್ಗ:ರೈತರ ಬದುಕು ಹಸನಾದರೆ ನಾಡು ನೆಮ್ಮದಿಯಾಗಿ ಇರುತ್ತದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಚಿತ್ರದುರ್ಗ ತಾಲೂಕು ಪಂಡರಹಳ್ಳಿಯಲ್ಲಿ ಶುಕ್ರವಾರ ಯರೇಓಣಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಭಿವÊದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಚೆಕ್‌ಡ್ಯಾಂ ಕಾಮಗಾರಿಗಳು ಪ್ರಗತಿಯಲ್ಲಿವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅಡಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೆಳೆಗೆ ಅನುಕೂಲ ವಾಗುವಂತೆ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ರೈತರಿಗೆ ಸ ರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮೀಣ ಪ್ರದೇಶದ ಬಂಡಿ ರಸ್ತೆಗಳಿಂದ ರೈತರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಐಡಿಎಲ್ ವಿಶೇಷ ಅನುದಾನ ದಡಿ ಬಂಡಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಿದೆ ಎಂದರು.
ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಇಂಜಿನಿಯರ್ ಶರತ್, ಗ್ರಾಮಸ್ಥರಾದ ಸೊಸೈಟಿ ಮಂಜಣ್ಣ, ರವಿಕುಮಾರ್, ಬಸವರಾಜ್, ಮೌನೇಶ್, ವೆಂಕಟೇಶ್, ಸುನಿಲ್, ಈರಪ್ಪ, ಶ್ರೀನಿವಾಸ್, ರಾಜಪ್ಪ, ರಾಮಣ್ಣ, ತಿಪ್ಪೇಸ್ವಾಮಿ, ಶಿವಪ್ಪ, ಈಶಪ್ಪ, ನಾಗರಾಜ್, ತಿಪ್ಪೇಸ್ವಾಮಿ, ತಿಮ್ಮೇಶ್, ಲೋಕೇಶ್ ಇತರರು ಇದ್ದರು.