ಸಮಾಜ ಕಲ್ಯಾಣ ಇಲಾಖೆಯಿಂದ ಚಿತ್ರದುರ್ಗ ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ವಸತಿ ನಿಲಯಗಳ ಕಾಮಗಾರಿ. 
ಚಿತ್ರದುರ್ಗ

ಹಾಸ್ಟೆಲ್ ಪ್ರವೇಶಾತಿ ಬೇಡಿಕೆ ಸಲ್ಲಿಸುವ ಕಡೆ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಅತ್ಯಾಧುನಿಕ ೧೨ ನೂತನ ವಸತಿ ನಿಲಯ ನಿರ್ಮಾಣ
  • ೯೩ ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ
  • ಮೂಲ ಸೌಕರ್ಯಕ್ಕೆ ಸಕ ಇಲಾಖೆ ಆದ್ಯತೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಅತ್ಯಾಧುನಿಕ ಹಲವು ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ ಕೆಲವು ಉದ್ಘಾಟನೆ ಗೊಂಡಿವೆ.
ಇಲಾಖೆ ವ್ಯಾಪ್ತಿಯಡಿ ಮೆಟ್ರಿಕ್ ನಂತರ ೪೧, ಮೆಟ್ರಿಕ್ ಪೂರ್ವ ೫೨ ಸೇರಿ ಒಟ್ಟು ೯೩ ವಿದ್ಯಾರ್ಥಿ ನಿಲಯಗಳಲ್ಲಿ ಸದ್ಯ ೧೦,೩೦೦ ವಿದ್ಯಾರ್ಥಿಗಳಿದ್ದಾರೆ. ಆದರೆ, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಕೊಪ್ಪಳ ಸೇರಿ ವಿವಿಧೆಡೆಯಿಂದಲೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವ ಕಾರಣ ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಸಂಖ್ಯೆ ಹೆಚ್ಚಳ ಪರಿಗಣಿಸಿ ವಸತಿ ಸೌಲಭ್ಯ ಕಲ್ಪಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ (ಕೆಎಂಇಆರ್‌ಸಿ) ೮ ವಸತಿ ನಿಲಯಗಳ ನಿರ್ಮಾಣಕ್ಕೆ ೪೫ ಕೋಟಿ ರೂ. ಅನುದಾನ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆ ನಿರ್ಮಾಣದ ಜವಾಬ್ದಾರಿ ವಹಿಸಿದೆ.
ಭರಮಸಾಗರ, ಹೊಸದುರ್ಗ, ಚಿತ್ರದುರ್ಗದಲ್ಲಿ ಬಾಲಕರ, ಬಾಲಕಿಯರ ಪ್ರತ್ಯೇಕವಾಗಿ ತಲಾ ೧, ತಾಲೂಕಿನ ಅಳಗವಾಡಿ ಸಮೀಪ, ಹಿರಿಯೂರು ತಾಲೂಕಿನ ಹರಿಯಬ್ಬೆ, ಕೆ.ಎಂ. ಕೊಟ್ಟಿಗೆ ತಲಾ ೧ ಬಾಲಕರ ಸೇರಿ ಒಟ್ಟು ೮ ವಿದ್ಯಾರ್ಥಿನಿಲಯಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಮುಕ್ತಾಯದ ಹಂತ ತಲುಪಿವೆ.
ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಪಿ-ಟಿಎಸ್ಪಿಯ ೨೮ ಕೋಟಿ ರೂ. ಅನುದಾನದಲ್ಲಿ ಜಿಪಂ ಕಚೇರಿ ಸಮೀಪ ಮೆ ಟ್ರಿಕ್ ನಂತರದ ಬಾಲಕರ ೨, ಬಾಲಕಿಯರ ೧, ಮಾಳಪ್ಪನಹಟ್ಟಿ ಸಮೀಪ ೧ ಸೇರಿ ಒಟ್ಟು ೪ ಕಟ್ಟಡಗಳ ಕಾಮಗಾರಿಯನ್ನು ಕ್ರೆÊಸ್ ವತಿಯಿಂದ ನಿರ್ಮಿಸಲಾಗುತ್ತಿದೆ.
ಇನ್ನು ಸ್ವಂತ ಕಟ್ಟಡದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೂ ಕೆಎಂಇಆರ್‌ಸಿ ವತಿಯಿಂದ ೯೩ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲಾಖೆಯಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ವಿದ್ಯಾರ್ಥಿ ನಿಲ ಯಗಳಿಗೆ ಇದಕ್ಕೂ ಹಿಂದೆ ಅಂದಾಜು ೫೭.೮೦ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ೯ ಹೊಸ ಕಟ್ಟಡಗಳ ಕಾಮಗಾರಿ ಪೂರ್ಣ ಗೊಂಡಿವೆ. ಅದರಲ್ಲಿ ಚಿತ್ರದುರ್ಗ ತಾಲೂಕಿನ ಭರಮಸಾಗರ, ಮದಕರಿಪುರ, ಕವಾಡಿಗರಹಟ್ಟಿ, ಹೊಸದುರ್ಗದಲ್ಲಿ ೩, ಮೊಳ ಕಾಲ್ಮೂರಿನ ಕೋನಸಾಗರ, ಹೊಳಲ್ಕೆರೆ ಪಟ್ಟಣ, ಚಳ್ಳಕೆರೆ ನಗರವೂ ಒಳಗೊಂಡಿದೆ.
ಸದ್ಯಕ್ಕೆ ಮೂಲ ಸೌಕರ್ಯ ಕೊರತೆಯಿಲ್ಲ
ಇಲಾಖೆ ನಡೆಸುವ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ಬಳಿಕ ಮೂಲ ಸೌಕರ್ಯಗಳ ಕೊರತೆ ಸದ್ಯಕ್ಕೆ ಕಂಡು ಬಂದಿಲ್ಲ. ರಾಜ್ಯದ ವಿವಿಧೆಡೆಗಳಿಂದ ನರ್ಸಿಂಗ್ ಸೇರಿ ಉನ್ನತ ವ್ಯಾಸಂಗಕ್ಕೆ ಬರುವÀ ವಿದ್ಯಾರ್ಥಿಗಳಿಗೆ ಜಿ¯್ಲÉಯ ಬಹುತೇಕ ಸರ್ಕಾರಿ ವಸತಿ ನಿಲಯಗಳೇ ಆಶ್ರಯ ತಾಣಗಳಾಗಿವೆ.
ಮುಂದಿನ ೬ ತಿಂಗಳಲ್ಲಿ ಮೇಲ್ದರ್ಜೆಗೆ
ಮುಂದಿನ ೬ ತಿಂಗಳಲ್ಲಿ ಮತ್ತಷ್ಟು ಸೌಲಭ್ಯಗಳ ಸಮೇತ ಹಾಸ್ಟೆಲ್‌ಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿವೆ. ಕೊಠಡಿ, ಸ್ನಾನ, ಶೌಚಗೃಹಗಳನ್ನು ಸಕಾಲಕ್ಕೆ ಸ್ವಚ್ಛಗೊಳಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ. ಹೆಣ್ಣುಮಕ್ಕಳ ಸುರಕ್ಷತಾ ದೃಷ್ಟಿಯಿಂದ ವಾರ್ಡನ್, ವಾಚ್ ಮ್ಯಾನ್ ಸಮೇತ ಮಹಿಳಾ ಸಿಬ್ಬಂದಿ ಲಭ್ಯವಿz್ದÁರೆ.
-Àಲಿತಾಂಶ ಹೆಚ್ಚಳಕ್ಕೆ ಯೋಜನೆ
ಕ್ರೆÊಸ್ ವ್ಯಾಪ್ತಿಯ ಸಮಾಜ ಕಲ್ಯಾಣ ಇಲಾಖೆಯಡಿ ೧೫ ಶಾಲೆ, ೧ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ದ್ವಿತೀಯ ಪಿಯುಸಿ ವಿ ಜ್ಞಾನ ವಿಭಾಗದ ೩೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಶೇ. ೭೮ರಷ್ಟು, ಇನ್ನೂ ಎಸ್ಸೆಸ್ಸೆಲ್ಸಿ ಯಲ್ಲೂ ಶೇ. ೯೦ರಷ್ಟು -Àಲಿತಾಂಶ ಲಭಿಸಿದೆ. ದೇವರಾಜು ಅಕಾಡೆಮಿ, ವೈನವಿ ಅಕಾಡೆಮಿಯ ಪ್ರಾಧ್ಯಾಪಕರ ವಿಶೇಷ ತರಬೇತಿ ಯಿಂದಾಗಿ ಹಿಂದಿಗಿAತ ಶೇ.೨೦ ರಿಂದ ೩೦ರಷ್ಟು -Àಲಿತಾಂಶ ಹೆಚ್ಚಾಗಿದೆ. ಹಿಂದಿನAತೆ ಈ ಬಾರಿಯೂ ಸಂಸದರು, ಶಾಸಕರು, ಡಿಸಿ, ಜಿಪಂ ಸಿಇಒ ಅವರ ಗಮನ ಸೆಳೆದು ಹೆಚ್ಚಿನ -Àಲಿತಾಂಶ ತರಲು ಇಲಾಖೆ ಅಽಕಾರಿಗಳು ಯೋಜನೆ ಹಾಕಿಕೊಂಡಿದ್ದಾ ರೆAಬ ಮಾಹಿತಿ ಇದೆ.