- ಕೇಂದ್ರ ಆರೋಗ್ಯ ಸಚಿವ ಜಗತ್‌ಪ್ರಕಾಶ್ ನಡ್ಡಾ
- ಕ್ಯಾನ್ಸರ್ ಪತ್ತೆ ಪ್ರಮಾಣ
- ರಾಷ್ಟಿçÃಯ ಅಸಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಯಾನ್ಸರ್ ಪತ್ತೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜಗತ್‌ಪ್ರಕಾಶ್ ನಡ್ಡಾ ಹೇಳಿದ್ದಾರೆ.
ಸಂಸತ್ತಿನಲ್ಲಿ ಕರ್ನಾಟಕ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ರೋಗ ಪತ್ತೆ, ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬAಽಸಿದAತೆ ಸಂಸದ ಗೋವಿಂದ ಎಂ. ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಐದು ವರ್ಷಗಳ ಅವಽ ಜಿಲ್ಲೆಯಲ್ಲಿ ಈ ರೋಗ ತಪಾಸಣೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡುತ್ತಿರುವುದರಿಂದ ಯಶಸ್ವಿ ಚಿಕಿತ್ಸೆ ಸಾಧ್ಯವಾಗುತ್ತಿದೆ ಎಂದರು.
ರಾಷ್ಟಿçÃಯ ಅಸಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿ ೩೦ ವರ್ಷ ವಯೋಮಿತಿ ಮೀರಿದ ನಾಗರಿಕರಿಗೆ ಬಾಯಿ, ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ರೋಗಗಳ ತಪಾಸಣೆ ವ್ಯಾಪಕವಾಗಿ ನಡೆಸಲಾಗಿದೆ. ದೇಶಾದ್ಯಂತ ೭೭೦ ಜಿಲ್ಲಾ ಎನ್‌ಸಿಡಿ ಕ್ಲಿನಿಕ್‌ಗಳು ಸ್ಥಾಪನೆಯಾಗಿವೆ. ೩೬೪ ಜಿಲ್ಲಾ ಡೇ ಕೇರ್ ಕ್ಯಾನ್ಸರ್ ರೋಗ ಕೇಂದ್ರಗಳು ಕಾರ್ಯಾರಂಭವಾಗಿವೆ. ೨೦೨೫-೨೬ನೇ ಸಾಲಿಗೆ ೨೯೭ಹೊಸ ಕೇಂದ್ರಗಳಿಗೆ ಅನುಮೋದನೆ ದೊರಕಿದೆ.
ಕರ್ನಾಟಕದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ರಾಜ್ಯ ಮಟ್ಟದ ಕ್ಯಾನ್ಸರ್ ಚಿಕಿತ್ಸೆ ಸಂಸ್ಥೆಯಾಗಿದೆ. ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ತೃತೀಯ ಹಂತದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿದೆ. ರಾಜ್ಯದಲ್ಲಿ ೧೬ ಜಿಲ್ಲಾ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಎನ್‌ಸಿಡಿ ಕ್ಲಿನಿಕ್, ಡೇ ಕೇರ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಕೀಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ೨೩ ರೋಗಿಗಳು ೬೮ ಕೀಮೋಥೆರಪಿಗೆ ಒಳಗಾಗಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್ಗಳ ಕೊರತೆ ಗಮನಿಸಲಾಗಿದೆ. ಸಮಸ್ಯೆ ನಿವಾರಣೆಗೆ ತೃತೀಯ ಹಂತದ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ರೋಗ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರವು, ರಾಜ್ಯಕ್ಕೆ ಗಮನಾರ್ಹ ಪ್ರಮಾಣದ ಅನುದಾನ ಒದಗಿಸಿದೆ. ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಅನುದಾನ ಹಂಚಿಕೆ ಹಾಗೂ ಅದರ ಪರಿಣಾಮಕಾರಿ ಬಳಕೆ ಆಗಿದೆ. ರಾಜ್ಯಸರ್ಕಾರ ಗೃಹ ಆರೋಗ್ಯ ಯೋಜನೆಯಡಿ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.