ಚಿತ್ರದುರ್ಗದಲ್ಲಿ ಸ್ಥಾಪಿಸಿರುವ ಎಡ್‌ಲ್ಯಾಬ್‌ನ್ನು ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮಂಗಳವಾರ ಉದ್ಘಾಟಿಸಿದರು. ಡಿಸಿ ಟಿ. ವೆಂಕಟೇಶ್, ಸಿಇಒ ಡಾ.ಎಸ್. ಆಕಾಶ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಇದ್ದರು.
- ಸಚಿವ ಸುಧಾಕರ್, ಶಾಸಕ ವೀರೇಂದ್ರಪಪ್ಪಿ ಅವರಿಂದ ಉದ್ಘಾಟನೆ
- `ಗಣಿತ ಗಣಕ',`ಓದು ಕರ್ನಾಟಕ'ದಲ್ಲಿ ಚಿತ್ರದುರ್ಗ ಅಗ್ರ
- sslc,puc
ಚಿತ್ರದುರ್ಗ: ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸ್ಥಾಪಿಸಿರುವ `ಎಡ್ ಲ್ಯಾಬ್' ನ್ನು ನಗರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹಾಗೂ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಉದ್ಘಾಟಿಸಿ ದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಎಸ್. ಆಕಾಶ್ ಮಾತನಾಡಿ, ಅಂದಾಜು ೧೮ ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಈ ಲ್ಯಾಬ್‌ನಿಂದ ಆಶಾದಾಯಕ ಬದಲಾವಣೆ ನಿರೀಕ್ಷಿಸಲಾಗಿದೆ ಎಂದರು.
ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳಲ್ಲಿ ಚಿತ್ರದುರ್ಗ ೨೩ನೇ ಸ್ಥಾನದಲ್ಲಿದೆ. ಪ್ರಥಮ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯ ೬-೮ನೇ ತರಗತಿ ಮಕ್ಕಳಲ್ಲಿ ಕೇವಲ ೪೮.೮ ರಷ್ಟು ಮಕ್ಕಳಿಗೆ ೨ನೇ ತರಗತಿ ಪಠ್ಯ ಓದಲು ಬರುತ್ತಿದೆ. ಶೇ. ೩೬.೫ ಮಕ್ಕಳಿಗೆ ಮಾತ್ರ ಎರಡಂಕಿ ಗಣಿತದ ಜ್ಞಾನವಿರುವುದು ಗೊತ್ತಾಗಿದೆ. ಈ ಶೋಚನೀಯ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಈ ಲ್ಯಾಬ್‌ನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.
ಶಿಕ್ಷಕರ ಸಮಯ ಬಳಕೆ ಸರ್ವೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಒಬ್ಬ ಶಿಕ್ಷಕ ವಾರ್ಷಿಕ ೨೦೦ ರಿಂದ ೨೫೦ ತರಗ ತಿಗಳನ್ನು ತೆಗೆದುಕೊಳ್ಳುವ ಅವಽಯನ್ನು ಡೇಟಾ ಎಂಟ್ರಿ ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ವ್ಯಯಿಸುತ್ತಿದ್ದಾನೆ. ಈ ಹಿನ್ನೆಲೆ ಯಲ್ಲಿ ಈಗ ಶಾಲಾ ಮಟ್ಟದಲ್ಲಿ ಬೋಧಕೇತರ ಕಾರ್ಯಗಳ ಹೊರೆ ಕಡಿತಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಳೆದ ಆಗಸ್ಟ್ನಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ -Àಲಿತಾಂಶ ಸುಧಾರಣೆಗೆ ಎಡ್ ಲ್ಯಾಬ್‌ನಲ್ಲಿ ಹಲವು ತಂತ್ರಗಾರಿಕೆ ಗಳಿAದಾ ಗಿ`ಗಣಿತ ಗಣಕ' ಮತ್ತು 'ಓದು ಕರ್ನಾಟಕ' ಕಾರ್ಯಕ್ರಮಗಳಲ್ಲಿ ಜಿಲ್ಲೆ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ. ಎರಡಂಕಿ ಭಾಗಾಕಾರ ಸಮಸ್ಯೆ ಬಿಡಿಸುವ ಮಕ್ಕಳ ಪ್ರಮಾಣ ಶೇ.೨ರಿಂದ ಶೇ.೨೨ಕ್ಕೆ ಏರಿಕೆಯಾಗಿದೆ. ಓದು ಕರ್ನಾಟಕದಿಂದಾಗಿ ಶೇ.೩೪ ಮಕ್ಕಳು ಸರಳ ಪಠ್ಯ ಓದಲು ಹಾಗೂ ಶೇ.೬೬ ಮಕ್ಕಳು ಮೂರಂಕಿ ಸಂಖ್ಯೆ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗಿನ ಮಕ್ಕಳು, ಶಿಕ್ಷಕರು, ಉಪನ್ಯಾಸಕರಿಗೆ ಎಡ್ ಲ್ಯಾಬ್ ಮೂಲಕ ಪರಿಣಾಮಕಾರಿ ತರಬೇತಿ ನೀಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಶೈಕ್ಷಣಿಕ ಸ್ಥಾನ ಮೇಲ್ದರ್ಜೆಗೇರುವ ನಿರೀಕ್ಷೆ ಇದೆ ಎಂದು ಆಕಾಶ್ ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾಽಕಾರಿ ಟಿ. ವೆಂಕಟೇಶ್, ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ತಹಸೀಲ್ದಾರ್ ಗೋವಿಂದರಾಜ್ ಇತರರು ಇದ್ದರು.