ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಚಿತ್ರ -- 
ಚಿತ್ರದುರ್ಗ

ದುರ್ಗದ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣಕ್ಕೆ ಗ್ರಹಣ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕೆಲಸ ನಿಲ್ಲಿಸಿರುವ ಗುತ್ತಿಗೆದಾರ
  • ೪೫ ಕೋಟಿ ರೂ.ವೆಚ್ಚದ ಯೋಜನೆ
  • ತಾಂತ್ರಿಕ ಕಾರಣಕ್ಕೆ ಅಡಚಣೆ
ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ
ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಜಿಲ್ಲೆ ಜನರ ನಿರೀಕ್ಷೆ ಇನ್ನೂ ಈಡೇರಿಲ್ಲ. ಬಿಡಿ ರಸ್ತೆ ನಿಗಮದ ಡಿಪೋ ಬಳಿ ಅಂದಾಜು ಆರೂವರೆ ಎಕರೆ ಪ್ರದೇಶದಲ್ಲಿ ಹೈಟೆಕ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮೂರು ವ ರ್ಷ ಸಮೀಪಿಸುತ್ತಿದ್ದರೂ ಈವರೆಗೆ ನಿರ್ಮಾಣದಲ್ಲಿ ಪ್ರಗತಿ ಕಾಣದಿರುವುದು ನಿಗಮ ಹಾಗೂ ರಾಜ್ಯಸರ್ಕಾರದ ನಿರ್ಲಕ್ಷ÷್ಯಕ್ಕೆ ಕನ್ನಡಿ ಹಿಡಿ ದಂತಾಗಿದೆ.
ಹೊಳಲ್ಕೆರೆ ಶಾಸಕ ಹಾಗೂ ರಾಜ್ಯರಸ್ತೆ ಸಾರಿಗೆ ನಿಗಮದ ಹಿಂದಿನ ಅಧ್ಯಕ್ಷ ಡಾ.ಎಂ.ಚAದ್ರಪ್ಪ ಅವರು ೪೫ ಕೋಟಿ ರೂ.ವೆಚ್ಚದ ಹೊಸ ನಿಲ್ದಾಣಕ್ಕೆ ೨೦೨೩ ಮಾರ್ಚ್ ೨೪ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಸಂದರ್ಭದಲ್ಲೇ ನಿಗಮದಿಂದ ಕೈಗೊಂಡಿದ್ದ ನೂರಾರು ಕೋ ಟಿ ರೂ.ವೆಚ್ಚದ ದಾವಣಗೆರೆ ಹಾಗೂ ತುಮಕೂರು ನಿಲ್ದಾಣಗಳು ಪೂರ್ಣಗೊಂಡಿದ್ದರೂ ಚಿತ್ರದುರ್ಗಕ್ಕೆ ಈ ಭಾಗ್ಯ ಕೂಡಿ ಬಂದಿಲ್ಲ.
ದಿನದ ೨೪ ಗಂಟೆಯೂ ನಿಗಮದ ಬಸ್‌ಗಳ ಸಂಚಾರವಿರುವ ರಾಜ್ಯದ ಕೆಲವು ನಿಲ್ದಾಣಗಳಲ್ಲಿ ಚಿತ್ರದುರ್ಗವೂ ಒಂದು.ಇಲ್ಲಿಗೆ ನಿತ್ಯ ೧೨೬೯ ನಿಗಮದ ಬಸ್‌ಗಳು ಬಂದು ಹೋಗುತ್ತವೆಯಾದರೂ ಸುಸಜ್ಜಿತ ನಿಲ್ದಾಣಕ್ಕೆ ಸಂಬAಽಸಿದವರು ಮನಸ್ಸು ಮಾಡಿಲ್ಲ.ಅಽಕಾರಿಗಳ ಇಚ್ಛಾ ಶಕ್ತಿಯ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣುವಂತೆ ನಿಲ್ದಾಣದ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಮೂಲಗಳ ಪ್ರಕಾರ ನಿಲ್ದಾಣಕ್ಕೆ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ೧೦ ಕೋಟಿ ರೂ. ಹಾಗೂ ನಿಗಮದಿಂದ ೫ ಕೋಟಿ ರೂ.ಬಿಡುಗಡೆಯಾಗಿದ್ದನ್ನು ಹೊರತುಪಡಿಸಿ ಉಳಿದಂತೆ ನಿಗದಿತ ಅಂದಾಜು ವೆಚ್ಚಕ್ಕೆ ಪೂರಕವಾಗಿ ಅನುದಾನವೂ ಬಿಡುಗಡೆ ಆಗಿಲ್ಲ. ನಿರ್ಮಾಣದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಆರಂಭಿಕ ಕೆಲಸದ ಬಳಿಕ ತಲೆ ಹಾಕಿಲ್ಲವಂತೆ.
ಕೆಲಸ ನಿಲ್ಲಿಸಿರುವ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆನ್ನಗಿದ್ದರೂ,ನಿಯಮಾನುಸಾರ ಬದಲಿ ವ್ಯವಸ್ಥೆ ಮಾಡದೆ ಕಾಲಹರಣ ವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಸೆಲ್ಲಾರ್,ನೆಲ,ಮೊದಲ ಹಾಗೂ ಎರಡನೇ ಮಹಡಿಯ ಈ ಹೊಸ ಕಟ್ಟಡದಿಂದ ನಿಗಮಕ್ಕೆ ಆದಾಯ ಬರುವಂತೆ ಪ್ಲ್ಯಾನ್ ಮಾಡಲಾಗಿದೆ.
ಸೆಲ್ಲಾರ್‌ನಲ್ಲಿ ಇವಿ ಚಾರ್ಜಿಂಗ್ ಜತೆಗೆ ಪಾರ್ಕಿಂಗ್ ಸೌಲಭ್ಯ,ನಿಗಮದ ಎಲೆಕ್ಟçಆನಿಕ್ ಬಸ್‌ಗಳ ಜಾರ್ಜಿಂಗ್ ಜತೆ ಕಾರು,ಮೋಟಾರು ದ್ವಿಚಕ್ರ ಮೊದಲಾದ ಖಾಸಗಿ ಇವಿ ವಾಹನಗಳಿಗೆ ಜಾರ್ಜಿಂಗ್‌ಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ನೆಲಮಹಡಿಯಲ್ಲಿ ಬಸ್‌ಗಳ ನಿಲು ಗ ಡೆ,ಹೋಟೆಲ್ ಮೊದಲಾದ ಮೂಲ ಸೌಕರ್ಯ. ಮೊದಲ ಮಹಡಿಯಲ್ಲಿ ಕಮರ್ಷಿಯಲ್ ಕಾ ಂಪ್ಲೆಕ್ಸ್ ಹಾಗೂ ಎರಡನೇ ಮಹಡಿಯ ಲ್ಲಿ ನಿಗಮದ ವಿಭಾಗೀಯ ಕಚೇರಿಗೆ ಸ್ಥಳಾವಕಾಶ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಸಂಚಾರ ದಟ್ಟಣೆಗೆ ಬೀಳಲಿದೆ ಕಡಿವಾಣ
ರಾ.ಹೆ.೪೮ಕ್ಕೆ ಹೊಂದಿಕೊAಡAತೆ ನಿರ್ಮಾಣವಾಗಲಿರುವ ಈ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ನಗರದ ಸಂ ಚಾರ ದಟ್ಟಣೆಗೂ ಕಡಿವಾಣ ಬಿಳಲಿದೆ. ಬೆಂಗಳೂರು,ಬೆಳಗಾವಿ,ಬಳ್ಳಾರಿ ಕಡೆಯಿಂದ ಬರುವಂಥ ಬಸ್ಸುಗಳ ನಿಲ್ದಾಣಕ್ಕೆ ಬಂದು ಅಲ್ಲಿಂದ ಲೇ ತೆರಳುವುದರಿಂದ ನಗರದೊಳಗೆ ನಿಗಮದ ಬಸ್‌ಗಳ ಸಂಚಾರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ.

ನಿಲ್ದಾಣ ಚಿಕ್ಕದು
ಈಗಿರುವ ನಿಲ್ದಾಣ ಚಿಕ್ಕದಾಗಿದ್ದು,ನಿಗಮದ ವಾಹನಗಳ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೂ ಜಾಗ ಸಾಲದಾಗುತ್ತಿದ್ದು,ನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬAಽ ಸಿದವರು ಗಮನ ಹರಿಸ ಬೇಕಿದೆ.
"

ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ನಿಲ್ದಾಣ ನಿರ್ಮಾಣದ ಒಟ್ಟಾರೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಕೋರಿ ಸಂಪುಟಕ್ಕೆ ಕಳಿಸಲಾಗುವುದು. ಸದ್ಯದಲ್ಲೇ ಕಾಮಗಾರಿ ಮುಂದುವರಿಸಲು ಕ್ರಮ ತೆಗೆದುಕೊಳ್ಳಲಾಗುವುದು.