ಪ್ರಮುಖ ಮುಖ್ಯಾಂಶಗಳು
ಹೊಳಲ್ಕೆರೆ:ಇನ್ನು 50ವರ್ಷಗಳ ಕಾಲದಿನಕ್ಕೆ 10 ಗಂಟೆವಿದ್ಯುತ್ ನೀಡುತ್ತೇವೆ.ರೈತರು ಅಡಿಕೆಗಿಡಗಳನ್ನು ಬೆಳೆಸಿದರೆ ಮುಂದಿನಜೀವನ ಸುಖಕರವಾಗಿರುತ್ತದೆ ಎಂದುಶಾಸಕ ಡಾ. ಎಂ.ಚಂದ್ರಪ್ಪತಿಳಿಸಿದರು.
ಅವರುಹಿರೇಎಮ್ಮಿಗನೂರು ಗ್ರಾಮದಲ್ಲಿಪ್ರಾಥಮಿಕ ಶಾಲೆಯ ₹35ಲಕ್ಷ ವೆಚ್ಚದಎರಡು ನೂತನ ಕೊಠಡಿಗಳಿಗೆ ಶನಿವಾರಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.earth worship
ಮುಖ್ಯಮಂತ್ರಿಯಾಗಿದ್ದಬಿ.ಎಸ್.ಯಡಿಯೂರಪ್ಪನವರಅವಧಿಯಲ್ಲಿ 43ಕೆರೆಗಳಿಗೆನೀರು ನೀಡಲು ಶ್ರಮಿಸಲಾಯಿತು.ಸಿರಿಗೆರೆ ಗುರುಗಳಒತ್ತಡಕ್ಕೆ ಮಣಿದ ಫಲವಾಗಿ ತುಂಗಭದ್ರಾಡ್ಯಾಂನಿಂದ ಕೆರೆಗಳಿಗೆ ನೀರುಬಂದಿದೆ. ಇದರಿಂದರೈತರಿಗೆ ಅನುಕೂಲವಾಗಿದೆ.
ಚಿಕ್ಕಜಾಜೂರಿನಕೋಟೆಹಾಳ್ ಬಳಿ ₹500ಕೋಟಿ ವೆಚ್ಚದಲ್ಲಿಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ.13 ಎಕರೆ ಜಾಗದಲ್ಲಿಈ ಯೋಜನೆ ನಡೆಯುತ್ತಿದೆ.ಇಲ್ಲಿಗೆ ಜೋಗ್ಫಾಲ್ಸ್‌ನಿಂದ ನೇರವಾಗಿ ವಿದ್ಯುತ್ಬರಲಿದೆ. ಇದರಿಂದರೈತರಿಗೆ ವಿದ್ಯುತ್ ಸಮಸ್ಯೆಕಾಡುವುದಿಲ್ಲ ಎಂದು ಶಾಸಕರುಭರವಸೆ ನೀಡಿದರು.
ಮಾನವೀಯತೆಗೆಆದ್ಯತೆ
ಚುನಾವಣೆಯಲ್ಲಿಓಟು ಹಾಕುವುದು ಮುಖ್ಯವಲ್ಲ.ರಾಜಕೀಯದಲ್ಲಿಮಾನವೀಯತೆ ಮತ್ತು ಮನುಷ್ಯತ್ವವಿರಬೇಕು.ಅಧಿಕಾರ ಶಾಶ್ವತವಲ್ಲ.ಇರುವಷ್ಟು ದಿನಹತ್ತಾರು ಜನಕ್ಕೆ ಒಳ್ಳೆಯದುಮಾಡಬೇಕು. ಈಆಲೋಚನೆಯೊಂದಿಗೆ ಕ್ಷೇತ್ರದಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ.ಶಾಲೆಗೆ ₹50ಲಕ್ಷ ನೀಡಿದ್ದೇನೆ.ಚೌಡೇಶ್ವರಿದೇವಸ್ಥಾನದ ಗೋಪುರಕ್ಕೆ ₹10ಲಕ್ಷ ಕೊಟ್ಟಿದ್ದೇನೆ.ಎಲ್ಲಾ ಕಡೆಗುಣಮಟ್ಟದ ಸಿ.ಸಿ.ರಸ್ತೆಗಳು ಆಗಿವೆಎಂದು ತಮ್ಮ ಅಭಿವೃದ್ಧಿ ಕೆಲಸಗಳನ್ನುವಿವರಿಸಿದರು.
ಈಸಂದರ್ಭದಲ್ಲಿ ಗ್ರಾಮ ಪಂಚಾಯಿತಿಅಧ್ಯಕ್ಷ ಪ್ರಕಾಶ್,ಜಿಲ್ಲಾ ಪಂಚಾಯಿತಿಮಾಜಿ ಸದಸ್ಯ ತಿಪ್ಪೇಸ್ವಾಮಿ,ಎಸ್.ಡಿ.ಎಂ.ಸಿ.ಅಧ್ಯಕ್ಷ ಬಸಣ್ಣಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.