ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ 
ಚಿತ್ರದುರ್ಗ

ಪಿಎಂ ಕಿಸಾನ್‌ ಯೋಜನೆಗೆ ಇಕೆವೈಸಿ ಕಡ್ಡಾಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ೧,೫೧,೬೯೩ -Àಲಾನುಭವಿಗಳು
  • ೧,೫೧,೪೯೮ ರೈತರ ಇಕೆವೈಸಿ ಬಾಕಿ
  • ಒಟಿಪಿ ಆಧಾರಿತ ಇಕೆವೈಸಿಗೆ ಕಡಿವಾಣ

ಚಿತ್ರದುರ್ಗ:

ಪಿಎಂ ಕಿಸಾನ್ ಯೋಜನೆಯಡಿ ನಕಲಿ -Àಲಾನುಭವಿಗಳನ್ನು ತಡೆದು, ಪಾರದರ್ಶಕವಾಗಿ ಹಣ ಜಮೆ ಮಾಡಲು ಹಾಗೂ ಮುಂದಿನ ಕಂತಿನ ಹಣ ವಿತರಿಸಲು ಕೇಂದ್ರ ಸರ್ಕಾರ ಬಯೋಮೆಟ್ರಿಕ್, -ೆÃಸ್ ಆಧಾರಿತ ಇಕೆವೈಸಿ ಕಡ್ಡಾಯ ಗೊಳಿಸಿದೆ.

ಇಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತಿನ ಹಣದಿಂದ ವಂಚಿತರಾಗಬೇಕಾಗುತ್ತದೆ. ಯೋಜನೆಯ ೨೪ನೇ ಕಂತು ಸೆಪ್ಟೆಂ ಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಯೋಜನೆಯಡಿ ಪ್ರತಿ ೪ ತಿಂಗಳಿಗೊಮ್ಮೆ ೨೦೦೦ ರೂ. ಗಳಂತೆ ವಾರ್ಷಿಕ ೩ ಕಂತುಗಳಲ್ಲಿ ೬೦೦೦ ರೂ. ಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಆಧಾರ್ ಕಾರ್ಡನ್ನು ಎನ್‌ಪಿಸಿಐ ಖಾತೆಗೆ ಲಿಂಕ್ ಮಾಡಿಸಿದ್ದರೂ ಈ ಸಲ ಪ್ರತಿ -Àಲಾನುಭವಿ ಬಯೋಮೆಟ್ರಿಕ್ ಅಥವಾ -ÉÃಸ್ ಆಧಾರಿತ ಇಕೆವೈಸಿ ಮಾಡಿಸಬೇಕು. ಈ ಮೂಲಕ ಮÊತರನ್ನು ಕೈಬಿಟ್ಟು ಅರ್ಹರ ಪತ್ತೆಗೆ ಸರ್ಕಾರ ಮುಂದಾಗಿದೆ. ಒಟಿಪಿ ಆಧಾರಿತ ಇಕೆವೈಸಿಗೆ ಕಡಿವಾಣ ಹಾಕಿದೆ.
ಜಿಲ್ಲೆಯಲ್ಲಿ ೧,೫೧,೬೯೩ -Àಲಾನುಭವಿಗಳಿದ್ದಾರೆ. ಇವರ ಪೈಕಿ ೧,೫೧,೪೯೮ ರೈತರ ಇಕೆವೈಸಿ ಬಾಕಿ ಉಳಿದಿದೆ. ಚಿತ್ರದುರ್ಗ ತಾಲೂಕು-೩೧,೭೩೬, ಚಳ್ಳಕೆರೆ-೩೩,೮೪೬, ಹಿರಿಯೂರು-೨೪,೮೭೫, ಹೊಳಲ್ಕೆರೆ -೨೫,೮೯೫ ಹೊಸದುರ್ಗ- ೨೪,೦೨೩ ಹಾಗೂ ಮೊಳಕಾಲ್ಮೂರು ತಾಲೂಕು ೧೧,೧೨೩ -Àಲಾನುಭವಿಗಳ ಇಕೆವೈಸಿ ಬಾಕಿ ಇದೆ.
ರೈತರು ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬಯೋ ಮೆಟ್ರಿ ಕ್ ನೀಡಿ ಇಕೆವೈಸಿ ಪೂರ್ಣಗೊಳಿಸಬಹುದು.ಫೇಸ್‌ಆಧಾರಿತ ಇಕೆವೈಸಿಗೆ ವಿಲೇಜ್ ನೋಡಲ್ ಆಫೀಸರ್‌ಗಳಾದ ಕೃಷಿ ಸಖಿ, ಪ ಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.
ಪಿಎA ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರು ಸ್ವತಃ ಇಕೆವೈಸಿ ಮಾಡಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.