ಚಿತ್ರದುರ್ಗದ ತೀಕ್ಷ÷್ಣ ಅಂಧರ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಂಗೀತ, ವಾಧ್ಯೋಪಕರಣಗಳ ವಿತರಣೆ ಕರ‍್ಯಕ್ರಮದಲ್ಲಿ ಎಂಎಲ್‌ಸಿ ಕೆ.ಎಸ್.ನವೀನ್, ಬಿ.ಕೆ.ಹನುಮಂತಪ್ಪ, ಕೆ.ಎಸ್.ಕೌಸಲ್ಯಾ, ಕೆ.ಎಸ್.ಕಾರ್ತಿಕ್, ಎಚ್.ಪರಮೇಶ್ವರಪ್ಪ ಇತರರು ಇದ್ದರು. 
ಚಿತ್ರದುರ್ಗ

ಅಂಗವಿಕಲರ ಸ್ವಾವಲಂಬಿ ಜೀವನಕ್ಕೆ ನೆರವಾಗುವುದು ಸಮಾಜದ ಕರ್ತವ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲ ಮಕ್ಕಳಲ್ಲಿ ಆತ್ಮ ವಿಶ್ವಾಸ
  • ಅಂಧ ಮಕ್ಕಳ ಪುನಶ್ಚೇತನ ವಸತಿಯುತ ಶಾಲೆ
  • ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
ಚಿತ್ರದುರ್ಗ: ಅಂಗವಿಕಲ ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ತುಂಬುವ ಮೂಲಕ ಅವರ ಸ್ವಾವಲಂಬಿ ಜೀವನಕ್ಕೆ ಅನುಕೂಲ ಮಾಡಿ ಕೊಡುವುದು ಪ್ರತಿ ನಾಗರಿಕರ ಜವಾಬ್ದಾರಿ ಹಾಗೂ ಸಮಾಜದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ಚಿತ್ರದುರ್ಗ ತಾಲೂಕು ನಿವÊತ್ತ ನೌಕರರ ಸಂಘ ಹಾಗೂ ಚಿತ್ರದುರ್ಗ ತಾಲೂಕು ನಿವÊತ್ತ ನೌಕರರ ಮನರಂಜನಾ ಮತ್ತು ಸಾಂ ಸ್ಕೃತಿಕ ಸಂಘದಿAದ ನಗರದ ಮಾಳಪ್ಪನಹಟ್ಟಿ ರಸ್ತೆ ತೀಕ್ಷ÷್ಣ ಅಂಧ ಮಕ್ಕಳ ಪುನಶ್ಚೇತನ ವಸತಿಯುತ ಶಾಲೆಗೆ ಸಂಗೀತ, ವಾಧ್ಯೋಪ ಕರಣ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಅವರ ಬದುಕಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ವಾದ್ಯೋ ಪಕರಣಗಳನ್ನು ಕೊಡಲಾಗಿದೆ. ನಿವÊತ್ತ ನೌಕರರು ವೈಯಕ್ತಿಕ ಜೀವನಕ್ಕೆ ಸೀಮಿತವಾಗದೆ, ಸಂಘಟಿತರಾಗಿ ಸಮಾಜಮುಖಿ ಕರ‍್ಯಗಳಲ್ಲಿ ತೊಡಗಿರುವುದು ಶ್ಲಾ ಘನೀಯ.
ಅಂಧರಾಗಿದ್ದರೂ ಅಸಾಧಾರಣ ಗಾಯನ ಹಾಗೂ ಸಂಗೀತ ಸಾಧನೆಯಿಂದ ಜಗತ್ತಿಗೇ ಮಾದರಿಯಾದ ಪಂಡಿತ ಪುಟ್ಟರಾಜ ಗವಾಯಿಗಳನ್ನು ಉದಾಹರಿಸಿದ ಅವರು, ಕಲೆ ಯಾರದ್ದೂ ವೈಯಕ್ತಿಕ ಸ್ವತ್ತಲ್ಲ. ಮಕ್ಕಳಿಗೆ ನಿತ್ಯ ನಿಯಮಿತವಾಗಿ ಸಂಗೀತ ಶಿಕ್ಷಕರ ಮೂಲಕ ತರಬೇತಿ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆ ಅನಾವರಣಗೊಳಿಸ ಬೇಕೆಂದರು.
ಅಧ್ಯಕ್ಷ ಬಿ.ಕೆ.ಹನುಮಂತಪ್ಪ ಮಾತನಾಡಿ, ಮುಂದೆಯೂ ನಮ್ಮ ಸಂಘಟನೆಗಳಿAದ ಇಂತಹ ಹಲವು ಸಾಮಾಜಿಕ ಸೇವೆಗಳಲ್ಲಿ ನಿರಂತರವಾಗಿ ಮುಂದುವರಿಸಲಾಗುವುದು ಎಂದರು.
ತೀಕ್ಷ÷್ಣ ಅಂಧ ಮಕ್ಕಳ ಪುನಶ್ಚೇತನ ಸಂಸ್ಥೆ ಅಧ್ಯಕ್ಷೆ ಕೆ.ಎಸ್.ಕೌಸಲ್ಯಾ ಕಾರ‍್ಯದರ್ಶಿ ಕೆ.ಎಸ್.ಕಾರ್ತಿಕ್, ಸಂಘಗಳ ಪದಾಽಕಾರಿ ಗಳಾದ ಎಚ್.ಪರಮೇಶ್ವರಪ್ಪ, ಪಿ.ಎಸ್.ಶಿವಕುಮಾರ್,ಎ.ಜಿ. ದೇವೇಂ ದ್ರಪ್ಪ, ಎಸ್. ಹಾಲಾನಾಯ್ಕ್ , ನಿರ್ದೆಶಕರಾದ ಇ.ನಾಗ ರಾಜ್, ಟಿ.ಉಮಾಶಂಕರ್, ಮಾದಯ್ಯ, ಪ್ರೇಮಾರಾಜಾರಾಮ್, ಚಿನ್ನಪ್ಪ ಕÊಷ್ಣಮೂರ್ತಿ, ಜಿ. ವಿ.ನಾಗರಾಜ್, ಕೆ.ನಾಗರಾಜ್, ಸ ಲಹಾ ಸಮಿತಿ ಸದಸ್ಯರಾದ ವಿ.ಬಿ.ತಿಮ್ಮಾರೆಡ್ಡಿ, ಬಿಎಸ್.ಚಂದ್ರಶೇಖರಪ್ಪ, ಎಂ.ಶ್ರೀನಿವಾಸ್ ಮೂರ್ತಿ, ಕೆ.ರವಿಶಂಕರ್ ಇತರರು ಇದ್ದರು.