ಜಿಲ್ಲಾ ಚುನಾವಣಾಽಕಾರಿ ಡಿಸಿ ಟಿ. ವೆಂಕಟೇಶ್
- ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
- ಭಾರತ ಚುನಾವಣಾ ಆಯೋಗ
- ಗಣತಿ ನಮೂನೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)೨೦೨೬ರ ಅಂಗವಾಗಿ ಹಮ್ಮಿಕೊಳ್ಳಲಾಗಿ ರುವ ಮನೆ, ಮನೆ ಭೇಟಿಯಲ್ಲಿ ಈವರೆಗೆ ಜಿಲ್ಲಾದ್ಯಂತ ೧೩,೯೬,೦೨೦(ಶೇ.೯೬.೯೧)ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಮೂಲಕ ರಾಜ್ಯದಲ್ಲೇ ಚಿತ್ರದುರ್ಗ ಮೊದಲ ಸ್ಥಾನದಲ್ಲಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಜೂನ್ ೩೦ರಿಂದ ಪ್ರಾರಂಭವಾಗಿರುವ ಈ ಮನೆ, ಮನೆ ಭೇಟಿ ಕಾ ರ್ಯಕ್ರಮ ಜುಲೈ ೨೯ ರವರೆಗೆ ನಡೆಯಲಿದೆ. ಜಿಲ್ಲೆಯ ಎಲ್ಲ ಮತಗಟ್ಟೆ ಮಟ್ಟದ ಅಽಕಾರಿಗಳು ಸಾರ್ವಜನಿಕರ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ.
೨೦೨೬ರ ಜೂನ್೧೬ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೧೪,೪೦,೫೩೪ ಮತದಾರರಿದ್ದಾರೆ. ಒಟ್ಟು ೧,೬೬೧ ಭಾಗ ಗಳಲ್ಲಿ ಈ ಪ್ರಕ್ರಿಯೆ ಜರಗುತ್ತಿದೆ. ಜುಲೈ ೬ರ ಅಂತ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳ ಪ್ರಗತಿ ವಿವರ ಇಂತಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ೨,೫೧,೬೮೫ ಮತದಾರರಿದ್ದು, ೨,೪೫,೨೫೧ಗಣತಿ ನಮೂನೆಗಳನ್ನು ವಿತರಿಸಲಾ ಗಿದೆ. ಈ ಪೈಕಿ ೫೧,೬೬೧ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ೮೬ ಮರಣ, ೧೦೭ ಶಾಶ್ವತ ವಲಸೆ, ೧೮ ಡಬಲ್ ಎಂಟ್ರಿ ಹಾಗೂ ನಾಲ್ವರು ಗೈರುಹಾಜರಿ ಪ್ರಕರಣಗಳಿವೆ.
ಕ್ರಮವಾಗಿ ಚಳ್ಳಕೆರೆ-೨,೨೫,೬೧೯-೨,೨೩,೨೩೪-೩೪,೦೧೪-೧೦೬-೮೬-೪೦-೩. ಚಿತ್ರದುರ್ಗ-೨,೬೯,೩೩೨-೨, ೬೩, ೪೪೬-೩೩,೦೫೮ -೧೦೧-೭೧-೨೩-೩. ಹಿರಿಯೂರು-೨,೫೧,೪೮೨-೨,೪೬,೧೨೫-೪೦,೨೬೪-೧೯೦-೧೧೯-೫೮-೬. ಹೊಸದುರ್ಗ-೨,೦೩,೪೮೧-೧,೯೨,೫೫೨-೨೯,೪೦೧-೨೦೨-೯೫-೪೪-೪ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ೨,೩೮,೯೩೫ ಮತದಾರರ ಪೈಕಿ ೨,೨೫,೪೧೨ ನಮೂನೆಗಳನ್ನು ವಿತರಿಸಲಾಗಿದೆ.
೩೪,೯೧೩ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ, ೨೦೨ ಮರಣ, ೧೩೫ ಶಾಶ್ವತ, ೧೫ ಡಬಲ್ ಎಂಟ್ರಿ, ೨ ಗೈರು ಹಾಜರಿ ಪ್ರಕರಣಗಳಿವೆ ಎಂದು ಜಿಲ್ಲಾ ಚುನಾವಣಾಽಕಾರಿ ಡಿಸಿ ಟಿ. ವೆಂಕಟೇಶ್ ತಿಳಿಸಿದ್ದಾರೆ.