ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
- ೨೬ ರಂದು ಹಿರಿಯೂರಲ್ಲಿ ಸುಧಾಕರ್ ನುಡಿ-ನಮನ
- ಉಪ ಚುನಾವಣೆ ಅಭ್ಯರ್ಥಿ ಕುರಿತು ಅಭಿಪ್ರಾಯ ಆಲಿಕೆ
- ಐಬಿಯಲ್ಲಿ ಪ್ರಮುಖರೊಂದಿಗೆ ಇನ್‌ಕ್ಯಾಮರಾ ಮೀಟಿಂಗ್
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದಲ್ಲಿ ಆವರಿಸಿರುವ ಬರ ಭೀತಿಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಯ ೯ ಜಿಲ್ಲೆಗಳ ಬರ ಪರಿಸ್ಥಿತಿಗೆ ಸಂಬAಽಸಿದAತೆ ಚಿತ್ರದುರ್ಗದಲ್ಲಿ ಡಿ.೨೫ರಂದು ಪರಿಶೀಲನಾ ಸಭೆ ನಡೆಸಲು ಉದ್ದೇ ಶಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಡಿಸಿಎಂ ಡಾ.ಜಿ.ಪರಮೇಶ್ವರ್, ಚಿತ್ರದುರ್ಗ ಜಿ ಲ್ಲೆಯ ಕಾಂಗ್ರೆಸ್ ಶಾಸಕರು, ನಿಗಮ ಮಂಡಳಿ, ಪ್ರಾಽಕಾರ, ಆಯೋಗ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರನ್ನು ಒಳಗೊಂಡ ೫೦ ನಿಮಿಷಗಳಿಗೂ ಅಽಕ ಕಾಲ ಅಽಕಾರಿಗಳನ್ನೂ ಹೊರಗಿಟ್ಟು ಇನ್‌ಕ್ಯಾಮರಾ ಮೀಟಿಂಗ್ ನಡೆಸಿದರು.
ಕಂದಾಯ ಸಚಿವರು, ರಾಜ್ಯಸರ್ಕಾರ ಮುಖ್ಯಕರ‍್ಯದರ್ಶಿ ಹಾಗೂ ಬೆಂಗಳೂರು ಡಿವಿಜನ್ ವ್ಯಾಪ್ತಿ ಜಿಲ್ಲೆಗಳ ಶಾಸಕರು, ವಿಧಾನ ಪರಿ ಷತ್ ಸದಸ್ಯರು, ಸಂಸದರು, ಆರ್‌ಸಿ, ಜಿಲ್ಲಾಽಕಾರಿಗಳು, ಜಿಪಂ ಸಿಇಒಗಳು, ಪೊಲೀಸ್ ಮತ್ತಿತರ ಇಲಾಖೆಗಳ ಹಿರಿಯ ಅಽಕಾರಿಗಳು ಬರ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭೆ ನಡೆಸಲು ಸೂಕ್ತ ಸ್ಥಳ ನಿಗದಿಪಡಿಸುವಂತೆ ಡಿಸಿ ಟಿ.ವೆಂಕಟೇಶ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಮುರುಘಾಮಠದ ಅನು ಭವ ಮಂಟಪ ಅಥವಾ ವಿಶಾಲ ಮೈದಾನದಲ್ಲಿ ಜರ್ಮನ್ ಟೆಂಟ್‌ನೊAದಿಗೆ ಬೃಹತ್ ಪೆಂಡಾಲ್ ನಿರ್ಮಿಸಿ, ಸಭೆ ನಡೆಸಲು ಉದ್ದೇಶಿಸಲಾಗಿದೆ.
ಈ ಮೀಟಿಂಗ್ ಮುನ್ನ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆ ಆಯೋಜಿಸುವ ಕುರಿತಂತೆ ಡಿಸಿಎಂ ಜತೆ ಚರ್ಚಿಸಿ, ಸ್ಥಳ,ದಿನಾಂಕ ತಿಳಿಸುವುದಾಗಿ ಹೇಳಿದ್ದರು.
ಅಂದಿನ ಈ ಸಭೆ ಬಳಿಕ ಸಿಎಂ ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜು.೨೬ ರಂದು ಹಿರಿಯೂರಲ್ಲಿ ಜಿ ಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ಅವರ ನುಡಿ-ನಮನ ಕರ‍್ಯಕ್ರಮವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲು ಪಕ್ಷದ ಪ್ರ ಮುಖರಿಗೆ ಸೂಚನೆ ಕೊಟ್ಟಿದ್ದಾರೆ.
ಶಾಸಕರು, ಸಚಿವರೂ ಆಗಿ ಜಿಲ್ಲೆಗೆ, ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿರುವ ಸುಧಾಕರ್ ಅವರ ನುಡಿನಮನ ಅತ್ಯಂತ ಯಶಸ್ವಿಯಾಗ ಬೇಕು. ಕೆಪಿಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬಹುತೇಕ ಈ ಕರ‍್ಯಕ್ರಮ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ರಣಕಹಳೆ ಮೊಳಗಿಸುವ ಸಾಧ್ಯತೆ ಹೆಚ್ಚಾಗಿದೆ. ಉಪ ಚುನಾವಣೆ ಎದುರಾಗುವುದರೊಳಗೆ ಎಸ್‌ಐಆರ್ ಪೂರ್ಣಗೊಳ್ಳಲಿದೆ. ಈ ಕರ‍್ಯಕ್ರಮದ ಯಶಸ್ವಿಗೆ ಜವಾಬ್ದಾರಿಯಿಂದ ಎಲ್ಲರೂ ಕರ‍್ಯನಿರ್ವಹಿಸಬೇಕೆಂದು ಪ್ರಮುಖರಿಗೆ ಸೂಚಿಸಿದ್ದಾರೆಂದು ಗೊತ್ತಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕೆಂಬ ಕುರಿತು ಸಿಎಂ ಈ ವೇಳೆ ಚರ್ಚಿಸಿದ್ದಾರೆ. ಆಗ ಪಕ್ಷದ ಜಿಲ್ಲಾ ಪ್ರಮುಖರೊಬ್ಬರು, ಆಕಾಂಕ್ಷಿ ಗಳಿAದ ಪಕ್ಷದ ನಿರ್ದಿಷ್ಟ ನಮೂನೆಯಲ್ಲಿ ಅರ್ಜಿ ಆಹ್ವಾನಿಸಬೇಕು. ಬಳಿಕ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. ಇದಕ್ಕೆ ಸಿಎಂ ಸಹಮತ ಸೂಚಿಸಿದರೆಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಮಾಜಿ ಸಂಸದ ಬಿ.ಎನ್. ಚಂದ್ರ ಪ್ಪ,ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್,ರಾಜ್ಯದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಯೋಗೇಶ್‌ಬಾಬು, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಕರ‍್ಯಾಧ್ಯಕ್ಷ ಹಾಲೇಶಪ್ಪ ಇತರರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.