ಚಿತ್ರದುರ್ಗ ಜಿಲ್ಲೆಯ ಜಮೀನೊಂದರಲ್ಲಿ ಬಿತ್ತನೆಗಾಗಿ ಹದ ಮಾಡಿಕೊಂಡಿರುವ ಭೂಮಿ. 
ಚಿತ್ರದುರ್ಗ

ಜಿಲ್ಲಾದ್ಯಂತ ಬರ ಕೃಷಿ ಚಟುವಟಿಕೆಗೆ ಗರ

ಪ್ರಮುಖ ಮುಖ್ಯಾಂಶಗಳು

  • ವರುಣನ ಅವಕೃಪೆಯಿಂದ ರೈತ ಸಮೂಹ ಕಂಗಾಲು
  • ಹುಯ್ಯೋ ಹುಯ್ಯೋ ಮಳೆರಾಯ ಜಮೀನುಗಳಲ್ಲಿ ನೀರಿಲ್ಲ
  • ಕೃಷಿ ಚಟುವಟಿಕೆ ಸ್ತಬ್ಧ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ಹುಯ್ಯೋ ಹುಯ್ಯೋ ಮಳೆರಾ ಯ...ಎನ್ನುವ ಕೂಗು ವ್ಯಾಪಕವಾಗಿದೆ.
ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂದೆರಡು ಅಡಿ ಭೂಮಿ ಹಸಿಯಾಗುವಷ್ಟು ಮಳೆಯಾಗಿಲ್ಲ. ಇದರಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಮಾಡಿದವರಿಗೂ ಪ್ರಯೋಜನವಿಲ್ಲದಂತಾಗಿದೆ.
ಕಳೆದೊAದು ವಾರದಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದೆ. ಆದರೆ, ಮಳೆ ಮಾತ್ರ ಸುರಿಯುತ್ತಿಲ್ಲ. ಕೆಲವೆಡೆ ಆಗುತ್ತಿರುವ ಸೋನೆ ಮಳೆ ಕೃಷಿಗೆ ನೆರವಾಗುತ್ತಿಲ್ಲ. ಹೀಗಾಗಿ ಶೇ.೮೨ರಷ್ಟು ಕೃಷಿಕರು ಬಿತ್ತನೆಯನ್ನೇ ಮಾಡಿಲ್ಲ.
ಶೇಂಗಾ, ರಾಗಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆ: ಜಿಲ್ಲೆಯಲ್ಲಿ ಬರದ ಛಾಯೆ ಇರುವ ಕಾರಣ ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಭಾಗದ ಪ್ರಮುಖ ಬೆಳೆಗಳಾದ ರಾಗಿ, ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಬಿತ್ತನೆ ಸಾಧ್ಯವಾಗಿಲ್ಲ. ಮುಂಗಾರಿನಲ್ಲಿ ೩.೩೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು.
ಜುಲೈ ೧೬ರವರೆಗೆ ೫೯,೫೫೫ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶ ಜಿಲ್ಲೆಯಲ್ಲಿ ಶೇ. ೭೫ಕ್ಕಿಂತ ಹೆಚ್ಚಿದೆ. ಆಗಸ್ಟ್ ೨೦ ರವರೆಗೂ ಬಿತ್ತನೆಗೆ ಸಮಯಾವಕಾಶವಿದೆ. ಮಳೆಯಾಗದ ಕಾರಣ ಗುರಿ ಸಾಧನೆ ಪೂರ್ಣವಾಗುವ ಸಾಧ್ಯತೆ ಕಡಿಮೆ.
ಜಿಲ್ಲೆಯಲ್ಲಿ ಜೂನ್ ಆರಂಭದಿAದ ಜುಲೈ ೨೦ ರವರೆಗೆ ೮೫.೫ ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಶೇ. ೬೯ ರಷ್ಟು ಮಳೆ ಕೊರತೆಯಾಗಿದೆ. ಶೇಂಗಾ, ರಾಗಿ ಇನ್ನಿತರ ಪ್ರಮುಖ ಬೆಳೆಗಳ ಬಿತ್ತನೆ ಸಾಧ್ಯವಾಗಿಲ್ಲ. ಕೃಷಿಗಾಗಿ ಮಾಡಿದ ಸಾಲ ತೀರುವಳಿ, ಜೀವನ ನಿರ್ವಹಣೆಯ ಚಿಂತೆ ರೈತರನ್ನು ಕಾಡತೊಡಗಿದೆ.
ಬೆಳೆವಾರು ಗುರಿ ಸಾಧನೆ
ಪ್ರಮುಖ ಬೆಳೆ, ಗುರಿ, ಈವರೆಗೆ ಆಗಿರುವ ಬಿತ್ತನೆ (ಹೆಕ್ಟೇರ್‌ಗಳಲ್ಲಿ)
ರಾಗಿ - ೫೦,೦೦೦ - ೧,೯೬೩
ಮೆಕ್ಕೆಜೋಳ- ೧,೧೧,೨೧೦ - ೨೧,೭೭೬
ಸಿರಿಧಾನ್ಯ - ೨೦,೫೭೫ - ೭,೫೯೪
ತೊಗರಿ - ೨೦,೦೦೦ - ೫,೮೩೮
ಶೇಂಗಾ - ೯೯,೭೫೦ - ೮,೦೮೮
ಸೂರ್ಯಕಾಂತಿ -೧೦,೩೪೦ - ೪,೩೧೦
ಹತ್ತಿ - ೧೩,೯೦೦- ೮,೫೮೨
ತಾಲೂಕುವಾರು ಜುಲೈನಲ್ಲಿ ಸುರಿದ ಮಳೆ ಮಾಹಿತಿ
ತಾಲೂಕು, ವಾಡಿಕೆ ಮಳೆ(ಮಿ.ಮೀ.ಗಳಲ್ಲಿ) ಸುರಿದ ಮಳೆ, ಶೇಕಡಾ ಕೊರತೆ
ಚಳ್ಳಕೆರೆ - ೨೧.೫ -೬.೪ -೭೦.
ಚಿತ್ರದುರ್ಗ -೪೦.೭ -೨೫.೦ -೩೯.
ಹಿರಿಯೂರು -೩೧.೮ -೪.೬ -೩೬.
ಹೊಸದುರ್ಗ -೪೨.೨ -೯.೪ -೩೯.
ಹೊಳಲ್ಕೆರೆ -೫೪.೮ -೨೫.೦ -೫೪.
ಮೊಳಕಾಲ್ಮೂರು -೩೦.೩ -೧೦.೭ -೨೧.
ಒಟ್ಟು -೩೩.೭ -೧೨.೪ -೬೩.
-----------------------------
ಹೊಳಲ್ಕೆರೆ ತಾಲೂಕಿನಲ್ಲಿ ಶೇ. ೭.೦೯ ಬಿತ್ತನೆ
ತಾಲೂಕು - ಏಕದಳ- ದ್ವಿದಳ- ಎಣ್ಣೆಕಾಳು- ವಾಣಿಜ್ಯ ಬೆಳೆ ಒಟ್ಟು ಪ್ರಗತಿ ಸಾಧನೆ ಶೇಕಡಾವಾರು(ಹೆಕ್ಟೇರ್‌ಗಳಲ್ಲಿ)
ಚಳ್ಳಕೆರೆ -೨,೫೮೦ -೪,೧೧೮- ೫,೧೯೫ -೨೩೫ -೧೨,೧೨೮ -೧೨.೩೦.
ಚಿತ್ರದುರ್ಗ -೧೪,೪೫೬ -೧,೩೭೭ -೪,೮೨೦ -೨೧೧ -೨೦,೮೬೪ -೩೧.೭೭.
ಹಿರಿಯೂರು-೧,೩೮೧ -೩೭೩- ೧,೫೦೦ -೭೦೦ -೩,೯೫೪ - ೧೦.೧೫.
ಹೊಳಲ್ಕೆರೆ -೩,೪೩೭ -೧೭೫ -೨೨- ೨೮ -೩,೬೬೨ -೭.೦೯
ಹೊಸದುರ್ಗ- ೯,೩೫೪ -೬೧೮ -೭೮೭ -೬೮೦ -೧೧,೪೩೯ -೨೧.೫೯.
ಮೊಳಕಾಲ್ಮೂರು- ೨೪೦ -೨೮೦- ೨೬೦ - ೬,೭೨೮ -೭,೫೦೮ -೨೩.೯೧.
"

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಸ್ತಬ್ಧಗೊಂಡಿದೆ. ಉತ್ತಮ ಮಳೆಯಾಗುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಒಟ್ಟಾರೆ ಜಿಲ್ಲೆಯ ಅನ್ನದಾತರ ಸ್ಥಿತಿ ಹೇಳತೀರದಾಗಿದೆ. ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕಿದೆ.

— ಧನಂಜಯ ಹಂಪಯ್ಯನಮಾಳಿಗೆ, ರೈತಸಂಘದ ಜಿಲ್ಲಾಧ್ಯಕ್ಷ

"

ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಲಕ್ಷಾಂತರ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಲು ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡಬೇಕು.

— ಈ.ಎನ್. ಲಕ್ಷಿ÷್ಮÃಕಾಂತ, ರೈತ ಮುಖಂಡ