ಕುಡಿವ ನೀರು ಸರಬರಾಜು, ಕಸ ವಿಲೇವಾರಿ ಸಮೀಕ್ಷೆ ಕುರಿತಂತೆ ಚಿತ್ರದುರ್ಗದಲ್ಲಿ ಗುರುವಾರ ಪಿಡಿಒಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಿಇಒ ಡಾ.ಎಸ್. ಆಕಾಶ್, ಎಂ. ಬಾಬು, ಅಮರ್‌ನಾಥ್‌ಜೈನ್ ಇತರರು ಇದ್ದರು. 
ಚಿತ್ರದುರ್ಗ

೨೨ರಿಂದ ಕುಡಿಯವ ನೀರು ಸರಬರಾಜು, ಕಸ ವಿಲೇವಾರಿ ಸಮೀಕ್ಷೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ವಾಸ್ತವತೆ ಅರಿಯಲು ಸರ್ವೆ
  • ಪೋಟೊ ಅಫ್‌ಲೋಡ್‌ಗೆ ಜಿಪಿಎಸ್ ಲೋಕೇಶನ್ ಕಡ್ಡಾಯ
  • ಜಿಪಂ ಸಿಇಒ ಡಾ.ಎಸ್.ಆಕಾಶ್ ತಾಕೀತು
ಚಿತ್ರದುರ್ಗ: ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಪಂಗಳ ಹಳ್ಳಿಗಳಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಘನ, ದ್ರವ ತ್ಯಾಜ್ಯ ನಿರ್ವಹಣೆ ವಾಸ್ತವ ಸ್ಥಿತಿ ಅರಿಯಲು ಜೂ.೨೨ರಿಂದ ಸಮೀಕ್ಷೆ ನಡೆಸಲಾಗುವುದು ಎಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಈ ಸಮೀಕ್ಷೆಗಳ ಕುರಿತಂತೆ ಪಿಡಿಒಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾ ತನಾಡಿ, ಕಸ ವಿಲೇವಾರಿ ಸಮೀಕ್ಷೆಯನ್ನು ಎನ್‌ಆರ್‌ಎಲ್‌ಎಂನ ಎಂಬಿಕೆಗಳು ಹಾಗೂ ಕುಡಿಯುವ ನೀರಿನ ಸಮೀಕ್ಷೆಯನ್ನು ನರೇಗಾ, ನೀರು ಸರಬರಾಜು ಇಲಾಖೆ ಇಂಜಿನಿಯರ್‌ಗಳು ಹಾಗೂ ಗ್ರಾಪಂ ಸಿಬ್ಬಂದಿ ಜಂಟಿಯಾಗಿ ಕೈಗೊಳ್ಳಲಿದ್ದಾರೆ.
ಈ ೨ ಸಮೀಕ್ಷೆಗಳ ಯಶಸ್ಸಿಗೆ ಪಿಡಿಒಗಳು ಖುದ್ದು ಮೇಲ್ವಿಚಾರಣೆ ನಡೆಸಬೇಕು. ಇಡೀ ಪ್ರಕ್ರಿಯೆಯನ್ನು ತಾಪಂ ಇಒಗಳು, ಗ್ರಾ ಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳು ಸೂಕ್ಷ÷್ಮವಾಗಿ ಗಮನಿಸಬೇಕು ಎಂದರು.
ಜಿಲ್ಲೆಯ ಹಲವು ಗ್ರಾಪಂಗಳಲ್ಲಿ ಕಸ ಸಂಗ್ರಹಿಸುವ ವಾಹನಗಳು ದುರಸ್ತಿಯಲ್ಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಮಾರ್ಚ್ನಲ್ಲಿ ದಾಖಲೆ ಪ್ರಮಾಣದ ತೆರಿಗೆ ವಸೂಲಾಗಿದೆ. ಹಳೇ ಬಾಕಿ ತೀರಿಸುವುದಕ್ಕಿಂತಲೂ ವಾಹನಗಳ ದುರಸ್ತಿಗೆ ಮೊದಲ ಆದ್ಯತೆ ನೀಡಬೇಕು.

ಈ ವಾರಾಂತ್ಯದೊಳಗೆ ಜಿಲ್ಲೆಯ ಎಲ್ಲ ಕಸ ವಿಲೇವಾರಿ ವಾಹನಗಳು ಕಡ್ಡಾಯವಾಗಿ ದುರಸ್ತಿ ಆಗಿರಬೇಕು. ಯಾವುದೇ ವಾಹನ ಗಳ ತೂಕ ಪರೀಕ್ಷಿಸುವಾಗ ಚಾಲಕನನ್ನು ಕೆಳಗಿಳಿಸಿ, ಖಾಲಿ ವಾಹನದ ತೂಕವನ್ನು ಕಡ್ಡಾಯವಾಗಿ ಜಿಪಿಎಸ್ ಪೋಟೊ ಸಮೇತ ಅಪ್‌ಲೋಡ್ ಮಾಡಬೇಕು. ಇನ್ನು ಮುಂದೆ ಸಮೀಕ್ಷೆ ಸೇರಿ ಯಾವುದೇ ಪೋಟೋಗಳನ್ನು ಕಳುಹಿಸುವಾಗ ಜಿಪಿಎಸ್ ಲೋಕೇಶ ನ್ ಕಡ್ಡಾಯ ಎಂದರು.
ಜಿಲ್ಲೆಯಲ್ಲಿ ನೀರು ಮತ್ತು ಸ್ವಚ್ಛತೆ ಕೊರತೆ ನೀಗಿಸಲು ಕೆಎಂಇಆರ್‌ಸಿ ಅಡಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ದುರ ಸ್ತಿಯಲ್ಲಿರುವ ೨೦೦ ಒಎಚ್‌ಟಿಗಳ ತಕ್ಷಣ ದುರಸ್ತಿ ಹಾಗೂ ಕುಸಿಯುವ ಹಂತದಲ್ಲಿರುವ ೧೦೦ ಟ್ಯಾಂಕ್‌ಗಳನ್ನು ತೆರವುಗೊಳಿಸು ವುದು.
ನೀರಿನ ನಿಖರ ಬಳಕೆ ಅಳೆಯಲು ಎಲ್ಲ ಒಎಚ್‌ಟಿಗಳಿಗೆ ಬಲ್ಕ್ -ೆÆ್ಲÃ ಮೀಟರ್ ಅಳವಡಿಸುವುದು. ಚರಂಡಿ ನೀರು ಹೊರ ಹೋ ಗುವ ಜಾಗಗಳಲ್ಲಿ ಇನ್‌ಲೈನ್ ಟ್ರೀಟ್‌ಮೆಂಟ್ ಅಥವಾ ಸೋಕ್‌ಪಿಟ್ ನಿರ್ಮಿಸುವುದು ಮತ್ತು ಕಸ ವಿಲೇವಾರಿ ಘಟಕಗಳಿಗೆ ಕಾಂ ಪೌAಡ್, ಸೂಕ್ತ ರಸ್ತೆ ಸಂಪರ್ಕ, ವಿದ್ಯುತ್, ಶೌಚಗೃಹ ಹಾಗೂ ಬೋರ್‌ವೆಲ್ ಸೌಕರ್ಯ ಕಲ್ಪಿಸಬಹುದಾಗಿದೆ ಎಂದರು.
ಸAಪನ್ಮೂಲ ವ್ಯಕ್ತಿ ಸಿಡಿಡಿ ಎನ್‌ಜಿಒ ಸಂಸ್ಥೆಯ ಕಣ್ಣನ್ ತರಬೇತಿ ನೀಡಿದರು. ಜಿಪಂ ಡಿಎಸ್ ಎಂ. ಬಾಬು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್ ಜೈನ್, ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜು ನಾಥ್ ನಾಡರ್, ಜಿಲ್ಲಾ ಸಮಾಲೋಚಕರಾದ ಕಿರಣ್‌ಪಾಟೀಲ್, ಚಂದ್ರಕಾAತ್, ಯಲ್ಲಪ್ಪ, ಗೀತಾಲಕ್ಷಿ÷್ಮÃ ಮತ್ತಿತರರು ಇದ್ದರು.
ಕೋಟ್ಯಂತರ ರೂ.ವೆಚ್ಚ
ಕಳೆದ ೧೦ ವರ್ಷಗಳಲ್ಲಿ ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಖರ್ಚಾಗಿದೆ. ಇದರ ಸತಲ ಜನರಿಗೆ ಸಿಗಬೇಕಾದರೆ ಸದ್ಯದ ವಾಸ್ತವ ಸ್ಥಿತಿ ಅರಿಯುವುದು ಮುಖ್ಯ. ಆದ್ದರಿಂದ ಸಮೀಕ್ಷೆಯನ್ನು ಎಲ್ಲ ಅಽಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಇಒ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೊರತೆ ಲೆಕ್ಕಕ್ಕಾಗಿ ಸರ್ವೆ
ಅತ್ಯಂತ ಕಡಿಮೆ ಮಳೆ ಬೀಳುವ ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲ. ಇಂಥÀ ಪರಿಸ್ಥಿತಿಯಲ್ಲಿ ಕೋಟ್ಯಂತರ ರೂ.ವೆಚ್ಚದ ಜೆಜೆಎಂ ಯಶಸ್ಸಿಗೆ ನೀರಿನ ಸಮೀಕ್ಷೆ ಅಗತ್ಯವಿದೆ. ಜೆಜೆಎಂ ಅಡಿ ಪ್ರತಿ ವ್ಯಕ್ತಿಗೆ ದಿನಕ್ಕೆ ೫೫ ಲೀಟರ್ ನೀರು ಕೊಡು ವ ಗುರಿ ಇದೆ. ಪಂಚಾಯಿತಿ ಒಟ್ಟು ಜನಸಂಖ್ಯೆ, ಓವರ್ ಹೆಡ್ ಟ್ಯಾಂಕ್ ಸಾಮರ್ಥ್ಯ ಆಧರಿಸಿ ಪ್ರಸ್ತುತ ಎಷ್ಟು ನೀರು ಸರಬರಾಜಾ ಗುತ್ತಿದೆ, ೫೫ ಲೀಟರ್‌ಗೆ ಇನ್ನು ಎಷ್ಟು ಕೊರತೆ ಇದೆ ಎಂಬುದನ್ನು ಲೆಕ್ಕ ಹಾಕುವ ಸಮೀಕ್ಷೆ ಇದಾಗಿದೆ ಎಂದು ಸಿಇಒ ಹೇಳಿದರು.