ತರೀಕೆರೆ ತಾಲೂಕು ಲಕ್ಕವಳ್ಳಿ ಬಳಿ ನಿರ್ಮಿಸುತ್ತಿರುವ ಹೊಸದುರ್ಗ ಎಂವಿಎಸ್‌ನ ಜಾಕ್‌ವೆಲ್ ಕಾಮಗಾರಿ ಸ್ಥಳವನ್ನು ಚಿತ್ರದುರ್ಗ, ಚಿಕ್ಕ ಮಗಳೂರು ಜಿಲ್ಲೆಯ ಹಿರಿಯ ಅಽಕಾರಿಗಳು ಮಂಗಳವಾರ ಜಂಟಿ ಪರಿಶೀಲನೆ ನಡೆಸಿದರು. ಜಿಲ್ಲಾಽಕಾರಿಗಳಾದ ಟಿ. ವೆಂಕಟೇಶ್, ಎನ್.ಎಂ. ನಾಗರಾಜ್, ಸಿಇಒಗಳಾದ ಎಚ್.ಎಸ್. ಕೀರ್ತನಾ, ಡಾ.ಎಸ್. ಆಕಾಶ್, ಇಇ ಅಮರನಾಥ್ ಜೈನ್ ಮತ್ತಿತರ ಅಽಕಾರಿಗಳು ಇದ್ದಾರೆ.
- ೨ ಜಿಲ್ಲೆಗಳ ಅಽಕಾರಿಗಳಿಂದ ಜಂಟಿ ಪರಿಶೀಲನೆ
- ಮಳೆಗಾಲದೊಳಗೆ ವಾಟರ್ ಸಪ್ಲೆÊ ಟಾರ್ಗೆಟ್
- ಬಹುಗ್ರಾಮ ಯೋಜನೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಭದ್ರಾ ಜಲಾಶಯದಿಂದ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಅಜ್ಜಂಪುರ ತಾಲೂಕುಗಳ ಸಹಿತ ಎರಡು ಪಟ್ಣಣಗಳು, ೫೧೮ ಗ್ರಾಮಗಳ ೬,೧೫,೮೯೦ ಜನರಿಗೆ ಶುದ್ಧ ಕುಡಿವ ನೀರು ಪೂರೈಸುವ ಬಹುಗ್ರಾಮ(ಎಂವಿಎಸ್)ಯೋಜನೆ ಡಜನ್ ಸಮಸ್ಯೆಗಳ ಭಾರದಿಂದ ಬಳಲುತ್ತಿದೆ.
ಅಂದಾಜು ೭೦೦ ಕೋಟಿ ರೂ. ವೆಚ್ಚದ ಹೊಸದುರ್ಗ ಎಂವಿಎಸ್ ಹಂತ-೧, ತರೀಕೆರೆ-ಅಜ್ಜಂಪುರ ಎನ್‌ರೂಟ್ ಎಂವಿಎಸ್ ಹಾಗೂ ಹೊಸದುರ್ಗ ಹಂತ-೨ನೆಯ ಎವಿಎಂಸ್ ಅನುಷ್ಠಾನ ವಿಳಂಬವಾಗುತ್ತಿದೆ.
ಹೊಸದುರ್ಗ ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಯೋಜನೆಗೆ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆ ಅಽಕಾರಿಗಳು ಮಂಗಳವಾರ ಜಂಟಿ ಸ್ಥಳ ಪರಿಶೀಲನೆ ಮತ್ತು ಸಭೆ ನಡೆಸಿದ್ದಾರೆ.
ಮಳೆಗಾಲ ಆರಂಭವಾಗುವುದರೊಳಗೆ ಯೋಜನೆಯಡಿ ನೀರು ಪೂರೈಸಬೇಕೆಂಬ ಗುರಿ ಚಿತ್ರದುರ್ಗ ಜಿಲ್ಲೆ ಅಽಕಾರಿಗಳದ್ದಾಗಿದೆ. ೨೦೫೦ರ ಜನಸಂಖ್ಯೆಗೆ ಅನುಗುಣವಾಗಿ ಈ ಯೋಜನೆಗೆ ಭದ್ರಾ ಜಲಾಶಯದಿಂದ ೬೮ಎಂಎಲ್‌ಡಿ ನೀರು ಮಂಜೂರಾಗಿದೆ.
ಹೊಸದುರ್ಗ ಮೊದಲ ಹಂತ ಹಾಗೂ ತರೀಕೆರೆ, ಅಜ್ಜಂಪುರ ಎನ್‌ರೂಟ್ ಎಂವಿಎಸ್ ಸ್ಕೀಂ ಎರಡು ವರ್ಷಗಳಲ್ಲಿ ಹಾಗೂ ಹೊಸ ದುರ್ಗ ೨ನೇ ಹಂತ ಹೆಚ್ಚು ಕಡಿಮೆ ಹತ್ತನ್ನೊಂದು ತಿಂಗಳ ಹಿಂದೆ ಪೂರ್ಣಗೊಳ್ಳಬೇಕಿತ್ತು.
ಆದರೆ, ಪೈಪ್‌ಲೈನ್ ಕೆಲಸ, ವಿದ್ಯುತ್ ಪೂರೈಕೆ ಮತ್ತಿತರ ಸಮಸ್ಯೆಗಳಿಂದ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಈಗ್ಗೆ ಒಂದು ತಿಂಗಳ ಹಿಂದೆ ಚಿತ್ರದುರ್ಗ ಜಿಪಂ ಸಿಇಒ ಡಾ.ಎಸ್. ಆಕಾಶ್ ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿದ್ದರು.
ಫೆ.೧೦ ರಂದು ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ ಅಽಕಾರಿಗಳು ಜಂಟಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಡಿಸಿ ಟಿ. ವೆಂಕ ಟೇಶ್, ಜಿಪಂ ಸಿಇಒ ಡಾ. ಎಸ್. ಆಕಾಶ್, ಚಿಕ್ಕಮಗಳೂರು ಡಿಸಿ ಎನ್.ಎಂ. ನಾಗರಾಜ್, ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಹಾಗೂ ಕೆಪಿಟಿಸಿಎಲ್, ಮೆಸ್ಕಾಂ, ಲೋಕೋಪಯೋಗಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಽಕಾರಿಗಳು ಹಾಗೂ ಹಿರಿಯ ಪೊಲೀಸ್ ಅಽಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಚಿಕ್ಕಮಗಳೂರಿನ ಹುಣಸನಹಳ್ಳಿ ವಿದ್ಯುತ್ ಸಂಪರ್ಕಕ್ಕೆ ಸಂಬAಽಸಿದ ಒಂದು ಹಾಗೂ ಲಕ್ಕವಳ್ಳಿ, ಹಲಸೂರು, ಸೋಮಾಪುರ ಗೇಟ್,ಬಾವಿಕೆರೆ, ಸವೇಮರಡಿ ಕಾವಲ್ ಮತ್ತು ಮಕ್ಕೇನಹಳ್ಳಿಯಲ್ಲಿ ಪೈಪ್‌ಲೈನ್ ವರ್ಕ್ಗೆ ಸಂಬAಽಸಿದ ಹನ್ನೊಂದು ಸಮಸ್ಯೆ ಗಳನ್ನು ನಿವಾರಿಸಬೇಕೆಂಬ ಚಿತ್ರದುರ್ಗ ಜಿಲ್ಲೆ ಅಽಕಾರಿಗಳ ಪ್ರತಿಪಾದನೆಗೆ ಚಿಕ್ಕಮಗಳೂರು ಅಽಕಾರಿಗಳು ಸಹಕರಿಸುವ ಭರ ವಸೆ ಕೊಟ್ಟಿದ್ದಾರೆ.
ಹೆಸರು - ಗ್ರಾಮಗಳ ಸಂಖ್ಯೆ- ನೀರು ಹಂಚಿಕೆ(ಎAಎಲ್‌ಡಿ)- ಫಲಾನುಭವಿಗಳ ಸಂಖ್ಯೆ(೨೦೫೦ಕ್ಕೆ)
ಹೊಸದುರ್ಗ ತಾಲೂಕು - ೩೪೬ ೪೦.೭೪- ೩,೮೩,೪೫೫
ಹೊಸದುರ್ಗ ಪಟ್ಟಣ ೧೬.೨೬ - ೯೬,೩೭೭
ತರೀಕೆರೆ ತಾಲೂಕು -೭೦ ೨.೯೫ - ೪೨,೯೦೯
ಅಜ್ಜಂಪುರA ತಾಲೂಕು- ೧೦೨ ೫.೨೭ -೭೬,೬೮೫
ಅಜ್ಜಂಪುರ ಪಟ್ಟಣ -೨.೭೭ -೧೬,೪೬೪
ಹೊಸದುರ್ಗ ತಾಲೂಕಿನಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿತದಿಂದ -ೆÇ್ಲÃರೈಡ್ ಸಹಿತ ರಾಸಾಯನಿಕ ಅಂಶಗಳಿರುವ ನೀರು ಜನರ ಆರೋಗ್ಯಕ್ಕೆ ಮಾರಕವಾಗಿತ್ತು. ಶಾಸಕ ಬಿ.ಜಿ. ಗೋವಿಂದಪ್ಪ ಅವರು ಭದ್ರಾ ಜಲಾಶಯದಿಂದ ಶುದ್ಧ ನೀರು ಪೂರೈಸಲು ಮಂಜೂರು ಮಾಡಿಸಿದ್ದ ಎಂವಿಎಸ್‌ಗೆ ಹೊಸದುರ್ಗದಲ್ಲಿ ಸಿಎಂ ಸಿದ್ದರಾಮಯ್ಯ ಅವರು ೨೦೧೭ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಅರಣ್ಯಇಲಾಖೆ ಅನುಮತಿ ಸಹಿತ ಯೋಜನೆ ಅನುಷ್ಠಾನಕ್ಕೆ ತೊಡಕಾಗಿರುವ ಸ್ಥಳಗಳ ಪರಿಶೀಲಿಸಿ ಚಿಕ್ಕಮಗಳೂರು ಜಿಲ್ಲೆಯ ಅಽಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮಳೆಗಾಲ ಆರಂಭವಾಗುವುದರೊಳಗೆ ಹೊಸದುರ್ಗ ಎಂವಿಎಸ್ ಯೋಜನೆ ಪೂರ್ಣಗೊಳಿಸುವ ಗುರಿ ಇದೆ. ಮೊದಲ ಹಂತದ ಶೇ.೭೯, ತರೀಕೆರೆ, ಅಜ್ಜಂಪುರ ಎನ್‌ರೂಟ್‌ನ ಶೇ.೭೬ ಹಾಗೂ ಹೊಸದುರ್ಗ ಹಂತ ೨ನೇ ಶೇ.೭೮ ಕಾಮಗಾರಿ ಮುಕ್ತಾಯವಾಗಿದೆ.