ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ರಾಜ್‌ಕುಮಾರ್ ಜಯಂತ್ಯುತ್ಸವದಲ್ಲಿ ಶಾಸಕರಾದ ಟಿ. ರಘುಮೂರ್ತಿ, ಕೆ.ಸಿ. ವೀರೇಂದ್ರಪಪ್ಪಿ, ಗಂಜಿಕಟ್ಟೆ ಶಿವಣ್ಣ, ಡಿ. ಮೈಲಾರಪ್ಪ,ಎಂ.ಕೆ. ತಾಜ್‌ಪೀರ್, ಬಿ.ಟಿ. ಕುಮಾರಸ್ವಾಮಿ, ವಿನಾಯಕ್ ತೊಡರ್‌ನಾಳ್ ಇತರರು ಇದ್ದರು.
- ಶಾಸಕ ಟಿ.ರಘುಮೂರ್ತಿ ಅಭಿಮತ
- ಜಿಲ್ಲಾಡಳಿತದಿಂದ ಜಯಂತ್ಯುತ್ಸವ ಆಚರಣೆ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಚಿತ್ರದುರ್ಗ: ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಮಾನವೀಯ ಗುಣಗಳು ಮತ್ತು ಮೌಲ್ಯಗಳು ಇವತ್ತಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ವಾರ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರ ಯದಲ್ಲಿ ನಗರದ ಪತ್ರಿಕಾಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ರಾಜ್‌ಕುಮಾರ್ ಅಭಿನಯಿಸದೆ ಇರುವ ಪಾತ್ರಗಳು ಯಾವುದೂ ಇಲ್ಲ. ಹಿಂದೆ ಚಲನಚಿತ್ರ ಮತ್ತು ನಾಟಕಗಳಿಂದ ಸೂರ್ತಿ ಪಡೆಯುತ್ತಿದ್ದ ಜನರು ತಮ್ಮ ಬದುಕನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ರಾಜ್ ಅವರ ಪಾತ್ರಗಳು ಮಾರ್ಗದರ್ಶನ ನೀಡಿವೆ ಎಂದು ಅಭಿಪ್ರಾಯಪಟ್ಟರು.
ತಂದೆ ಸಂಸ್ಕಾರವನ್ನು ಪುನೀತ್‌ರಾಜ್‌ಕುಮಾರ್ ಅವರು ಅಕ್ಷರಶಃ ಪಾಲಿಸಿದರು. ರಾಜ್‌ಕುಮಾರ್ ಅವರ ನಡೆನುಡಿ ಅವರ ಮಕ್ಕ ಳಲ್ಲೂ ಪ್ರತಿ-Àಲಿಸುತ್ತಿದೆ. ರಾಜಕುಮಾರ್ ಚಿತ್ರರಂಗ ದ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ರಾಜ್‌ಕುಮಾರ್ ಅವರು ಸಿನಿಮಾಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶ ಮತ್ತು ಅವ ರ ಸರಳ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶಪ್ರಾಯವಾಗಿವೆ. ನಾವಿಂದು ಪ್ರಥಮ ಭಾಷೆಯನ್ನಾಗಿ ಕನ್ನಡ ಕಲಿಯುತ್ತಿದ್ದೇವೆ ಎಂ ದರೆ ಅದಕ್ಕೆ ರಾಜ್ ನೇತೃತ್ವದ ಗೋಕಾಕ್ ಚಳವಳಿ ಕಾರಣ ಎಂದರು.
೮೦ರ ದಶಕದಲ್ಲಿ ರಾಜ್‌ಕುಮಾರ್ ಅವರು ಚಳ್ಳಕೆರೆಯ ಪ್ರೌಢಶಾಲೆಗೆ ಭೇಟಿ ನೀಡಿದ್ದರು. ಅವರಿಗೆ ಹಣದ ವ್ಯಾಮೋಹ ಇರಲಿಲ್ಲ. ಅವರ ಯಶಸ್ಸಿನ ಹಿಂದೆ ಪತ್ನಿ ಪಾರ್ವತಮ್ಮ ಅವರ ಶ್ರಮ ದೊಡ್ಡದಿದೆ. ಅವರಿಬ್ಬರೂ ಆದರ್ಶ ದಂಪತಿಯಾಗಿದ್ದರು. ರಾಜ್ ಅವರ ಸಿನಿಮಾಗಳನ್ನು ನೋಡಿ ಎಷ್ಟೋ ಜನರು ಕÊಷಿಕರಾದರು, ಯೋಗಾಭ್ಯಾಸ ಕಲಿತರು. ಅವರ ಹಾಡುಗಳು ಇಂದಿಗೂ ಜನರ ಮ ನದಲ್ಲಿ ಹಸಿರಾಗಿವೆ ಎಂದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ರಾಜ್‌ಕುಮಾರ್ ಅವರಿಗೂ ಚಿತ್ರದುರ್ಗಕ್ಕೆ ಗಾಢ ಸಂಬಂಧವಿದೆ. ಅವರು ಚಿತ್ರ ರಂಗಕ್ಕೆ ಬರುವ ಮುನ್ನ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಚಿತ್ರದುರ್ಗದ ಎಸ್‌ಎಲ್‌ಎನ್ ಥಿಯೇ ಟರ್ ಬಳಿ ಅನೇಕ ವರ್ಷಗಳ ಕಾಲ ನೆಲೆಸಿದ್ದರು. ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ರಾಜ್ ಕುಮಾರ್ ನೈಟ್ ನಡೆಸಿಕೊಟ್ಟಿದ್ದರು. ಯಾವುದೇ ಸಂಭಾವನೆ ಪಡೆಯದೆ ಕ್ರೀಡಾಂಗಣಕ್ಕೆ ಆರ್ಥಿಕ ಸಹಕಾರ ನೀಡಿದ್ದರು ಎಂದರು.
ಚಿತ್ರದುರ್ಗ ಆಕಾಶವಾಣಿಯ ಡಾ. ನವೀನ್‌ಮಸ್ಕಲ್ ಉಪನ್ಯಾಸ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಽಕಾ ರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಎಡಿಸಿ ಬಿ.ಟಿ. ಕುಮಾರಸ್ವಾಮಿ,ವಾರ್ತಾ ಇಲಾಖೆ ಹಿರಿ ಯ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರು ನಾಥ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ವಿನಾಯಕ ತೊಡರನಾಳ್, ಕುಡಾ ಸದಸ್ಯ ಅಂಜಿನಪ್ಪ ಇತರರು ಇದ್ದರು. ಕೆ. ಗಂಗಾಧರ್ ಸಂಗಡಿಗರು ಡಾ.ರಾಜ್‌ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಸಿಕೊಟ್ಟರು.