ಚಿತ್ರದುರ್ಗದಲ್ಲಿ ಶುಕ್ರವಾರ ಎಸ್‌ಜೆಎಂಐಟಿಯಲ್ಲಿ ಕೃತಕಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ನೂತನ ವಿಭಾಗವನ್ನು ಶ್ರೀ ಮುರುಘಾ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಉದ್ಘಾಟಿಸಿದರು. ಡಾ.ಬಸವಕುಮಾರ ಸ್ವಾಮೀಜಿ, ಎಸ್.ಎನ್.ಚಂದ್ರ ಶೇಖರ್,ಡಾ.ಕೆ.ಬಿ.ಗುಡಸಿ,ಪಿ.ಬಿ.ಡಾ.ಭರತ್,ಡಾ.ಟಿ.ವಿ.ಅರವಿಂದ್ ಇತರರು ಇದ್ದರು.
- ಮುರುಘಾಮಠದ ಆಡಳಿತ ಅಧ್ಯಕ್ಷ ಕಳಸದ ಸಲಹೆ
- ಎಸ್‌ಜೆಎಐಟಿಯಲ್ಲಿ ಎಐಎಂಎಲ್
- ಕೌಶಲ ಕಾಯಕ ಉದ್ಘಾಟನೆ
ಚಿತ್ರದುರ್ಗ: ವೇಗವಾಗಿ ಬೆಳೆಯುತ್ತಿರುವ ಕÊತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ ಎಂದು ಮುರುಘಾ ಮಠ ದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂದಾಜು ಒಂದು ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್(ಎಐಎAಎಲ್)ನೂತನ ವಿಭಾಗ ಹಾಗೂ ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದು ನಿಜವಾದರೂ ಮನುಷ್ಯ ಕೃತಕ ಬುದ್ಧಿಮತ್ತೆ -Àಲಿ ತಾಂಶಗಳ ಮೇಲೆ ಸಂಪೂರ್ಣ ಅವಲಂಬಿತರಾಗಬಾರದು. ತನ್ನ ಸ್ವಸಾಮರ್ಥ್ಯ ಹಾಗೂ ಬುದ್ಧಿಶಕ್ತಿಗೂ ಕೆಲಸ ಕೊಡಬೇಕು.
ಇದರಿಂದ ನಿ ಖರ -Àಲಿತಾಂಶ ಪಡೆಯಲು ಸಾಧ್ಯ. ಕÊತಕ ಬುದ್ಧಿಮತ್ತೆ ಜತೆಗೆ ಹೊಂದಾಣಿಕೆ ಮಾಡಿಕೊಂಡು ನಮ್ಮ ಬುದ್ಧಿಗೂ ಕೆಲಸ ನೀಡಿ ಸಾಗಬೇಕಿದೆ ಎಂದ ಅವರು, ಕೌಶಲತೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದಲ್ಲಿ ಕೌಶಲಾಭಿವೃದ್ಧಿ ಕೇಂದ್ರ `ಕೌಶಲ ಕಾಯಕ'ವನ್ನು ಸ್ಥಾಪಿಸಲಾಗಿದೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಎಸ್.ಎನ್.ಚಂದ್ರಶೇಖರ್, ಎಸ್‌ಜೆಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ, ಪ್ರಾಚರ‍್ಯ ಪಿ.ಬಿ.ಡಾ.ಭರತ್, ಮಹಾವಿದ್ಯಾಲಯದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥ ಡಾ.ಟಿ.ವಿ.ಅರವಿಂದ್, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.