ಚಿತ್ರದುರ್ಗದಲ್ಲಿ ಸೋಮವಾರ ಜಿಪಂ ತ್ರೆÊಮಾಸಿಕ ಕೆಡಿಪಿ ಮುಂದುವರಿದ ಸಭೆಯಲ್ಲಿ ಸಚಿವ ಡಿ.ಸುಧಾಕರ್, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಡಾ.ಎಂ. ಚಂದ್ರಪ್ಪ, ಕೆ.ಸಿ. ವಿರೇಂದ್ರಪಪ್ಪಿ ಇತರರು ಇದ್ದರು.
- ಕುಡಿವ ನೀರಿನ ಸಮಸ್ಯೆ ಎದುರಿಸಲು ಸಜ್ಜಾಗಿ
- ತ್ರೆÊಮಾಸಿಕ ಮುಂದುವರಿದ ಕೆಡಿಪಿ ಸಭೆ
- ವಸತಿ ತಂತ್ರಾAಶದಲ್ಲಿ ಬದಲಾವಣೆಗೆ ಮನವಿ
ಚಿತ್ರದುರ್ಗ: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ) ಹಾಗೂ ಮುಖ್ಯಮಂತ್ರಿ ಮೂಲಸೌಕರ್ಯಾಭಿವೃದ್ಧಿ ಯೋಜನೆ (ಸಿಎಂಐಡಿಪಿ)ಅನುದಾನದ ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಽಕಾರಿಗಳಿಗೆ ಸೂಚಿಸಿದರು.
ಜಿಪಂನಲ್ಲಿ ಸೋಮವಾರ ಮುಂದುವರಿದ ತ್ರೆÊಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಂತ್ರಿಕ ಅನುಮೋದನೆ ನೆಪದಲ್ಲಿ ಕಾಮಗಾರಿಗೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಸಿಇಗೆ ದೂರವಾಣಿ ಕರೆ ಮಾಡಿ ಚಿತ್ರದುರ್ಗ ಜಿಲ್ಲೆ ಕಾಮಗಾರಿಗಳಿಗೆ ತಕ್ಷಣ ತಾಂತ್ರಿಕ ಅನುಮೋದನೆ ನೀಡುವಂತೆ ನಿರ್ದೇಶಿಸಿದರು.
ಕೆಎಂಇಆರ್‌ಸಿ ಅನುದಾನದಲ್ಲಿ ಅಂಗನವಾಡಿ, ಹಾಸ್ಟೆಲ್, ಆರೋಗ್ಯ ಕೇಂದ್ರಗಳು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಮಾ.೩೦ ರೊಳಗೆ ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದರು.
ಬೇಸಿಗೆಯಲ್ಲಿ ಕುಡಿವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ತಾಕೀತು ಮಾಡಿದರು. ೧೫ನೇ ಹಣಕಾಸು ಯೋಜನೆ ಅನುದಾನ ಗ್ರಾಪಂಗಳಿಗೆ ಬಂದಿಲ್ಲ. ಹಳ್ಳಿಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಆಗಬಾರದು. ವಿಪತ್ತು ನಿರ್ವಹಣೆ ನಿಽಯನ್ನು ಕುಡಿವ ನೀರಿನ ಕಾಮಗಾರಿಗಳಿಗೆ ಬಳಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ ಟಿ. ವೆಂಕಟೇಶ್ ಅವರಿಗೆ ಸೂಚಿಸಿದರು.
ಚಿತ್ರದುರ್ಗ ತಾಲೂಕು ಅನ್ನೇಹಾಳ್ ಜಂಪಯ್ಯನಹಟ್ಟಿ ಆರ್‌ಒ ದುರಸ್ತಿಗೆ ಕ್ರಮವಹಿಸಬೇಕೆಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು. ಆರ್‌ಒಗಳ ದುರಸ್ತಿಗೆ ೪೬ ಲಕ್ಷ ರೂ.ಅನುದಾನ ಬಂದಿದೆ. ಸರಿಪಡಿಸಿ ಗ್ರಾಪಂಗೆ ಹಸ್ತಾಂತರಿಸುವುದಾಗಿ ಸಿಇಒ ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ೧೦ನೇ ಸ್ಥಾನದೊಳಗೆ ಇರಬೇಕೆಂದು ಸಚಿವರು ನಿರ್ದೇಶಿಸಿ ದರು. ಮಾ. ೧೮ರಿಂದ ಪರೀಕ್ಷೆ ಪ್ರಾರಂಭವಾಗಲಿದೆ. ೮೪ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ್ ವಿವರಿಸಿದರು.
ಹೆಚ್ಚು ಹೆರಿಗೆ ಪ್ರಕರಣ ನಿರ್ವಹಿಸುವ ತಾಲೂಕು ಆಸ್ಪತ್ರೆಗಳಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಡಿಸಿ, ಆರೋಗ್ಯಾಽಕಾರಿಗಳಿಗೆ ತಿಳಿಸಿದರು.
ಮೀಸಲಾತಿ ಮತ್ತು ತಂತ್ರಾAಶದ ಗೊಂದಲದಿAದ ಗ್ರಾಮೀಣ ವಸತಿ ಯೋಜನೆಗಳಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನಿಗದಿ ಪಡಿಸಿದ ಶೇ.೨೪.೧ಮೀಸಲಾತಿ ಹಂಚಿಕೆ ಸವಾಲಾಗಿದೆ. ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ತಂತ್ರಾAಶದಿAದ ಶೇ.೨೪.೧ಕ್ಕಿಂತ ಹೆಚ್ಚಿನ ಮನೆಗಳ ಅಪ್‌ಲೋಡ್‌ಗೆ ಅವಕಾಶವಾಗುತ್ತಿಲ್ಲ. ಈ ತಾಂತ್ರಿಕ ಮಿತಿಯಿಂದ ಅರ್ಹರಿಗೆ ಮನೆಗಳು ಮಂಜೂರಾಗುತ್ತಿಲ್ಲ. ಈ ಬಗ್ಗೆ ವಸತಿ ಸಚಿವರಿಗೆ ಪತ್ರ ಬರೆದು ತಂತ್ರಾAಶದಲ್ಲಿ ಬದಲಾವಣೆ ತರುವಂತೆ ಮನವಿ ಮಾಡಲಾಗಿದೆ ಎಂದು ಅಽಕಾರಿಗಳು ತಿಳಿಸಿದರು.
ಕÊಷಿ ಚಟುವಟಿಕೆಗೆ ಕೆರೆ ಹೂಳು ಬಳಸಲು ಅಡ್ಡಿ ಸಲ್ಲ, ಈ ವಿಚಾರದಲ್ಲಿ ರೈತರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಶಾಸಕರಾದ ಡಾ.ಎಂ. ಚಂದ್ರಪ್ಪ, ಬಿ.ಜಿ. ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿಗೆ ಕೆರೆ ಹೂಳು ಬಳಸಲು ಮಾರ್ಗಸೂಚಿ ರೂಪಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಕುಡಿವ ನೀರು ಯೋಜನೆ ಕಾಮಗಾರಿಗಳಿಗೆ ಅಡ್ಡಿಪಡಿಸುವ ಆರ್‌ಎಫ್‌ಒಗಳ ನಡೆಗೆ ಅಸಮಾಧಾನ ವ್ಯವಕ್ತಪಡಿಸಿದ ಚಂದ್ರಪ್ಪ, ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಸಲ್ಲದು. ಸೂಕ್ತ ನಿರ್ದೇಶನ ಕೊಡುವಂತೆ ಅರಣ್ಯಾಽಕಾರಿಗೆ ತಿಳಿಸಿದರು. ಬಹುಗ್ರಾಮ ಕುಡಿವ ನೀರು ಯೋಜನೆಗಳ ಅನುಷ್ಠಾನ, ನರೇಗಾ ಕಾಮಗಾರಿ ಹಾಗೂ ವಿಬಿಜಿ ರಾಂ ಜಿ ಜಾರಿ ಕುರಿತಂತೆ ಚರ್ಚೆ ನಡೆಯಿತು.
ಶಾಸಕ ಎನ್.ವೈ. ಗೋಪಾಲಕÊಷ್ಣ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಸಿಇಒ ಡಾ.ಎಸ್. ಆಕಾಶ್, ಕೆಡಿಪಿ ಸದಸ್ಯರು, ಅಽಕಾರಿಗಳು ಇದ್ದರು.
ವಿಜಾಪುರದಲ್ಲಿ ಸೋಮವಾರ ಆಯೋಜಿದ್ದ ಜಲ ಅರ್ಪಣ ದಿವಸ ಕಾರ್ಯಕ್ರಮ ಕುರಿತಂತೆ ತಮ್ಮನ್ನು ಸಂಪರ್ಕಿಸದ ಅಽಕಾರಿಗಳ
ನಡೆಗೆ ವೀರೇಂದ್ರಪಪ್ಪಿ ಆಕ್ಷೇಪ ವ್ಯಕ್ತಪಡಿಸಿದರು. ಈಗ ಹೇಳಿದರೆ ಹೇಗೆ, ನಾನು ಡಬಲ್ ಆಕ್ಟಿಂಗ್ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದರು.