ಮಾಲತೇಶ್ ಮುದ್ದಜ್ಜಿ,ಶ್ರೀನಿವಾಸ್, ಎ. ಮಲ್ಲಿಕಾರ್ಜುನ, ಎಚ್.ಬಿ. ಪೂಜಾರ್, ಆರ್. ರಮೇಶ್, ಡಾ.ಬಿ.ಟಿ. ಲೋಲಾಕ್ಷಮ್ಮ ಇದ್ದರು.
- `ಸಂಕ್ರಾAತಿ ಸಂಭ್ರಮ ಸುಗ್ಗಿಯ ಸಿರಿ'ಮನರಂಜನೆ ಕಾರ್ಯಕ್ರಮ
- ನೇರ ನೋಂದಣಿಗೆ ಇಲ್ಲ ಅವಕಾಶ
- ರಾಜ್ಯ ಸರ್ಕಾರಿ ನೌಕರರ ಸಂಘ
ಚಿತ್ರದುರ್ಗ: ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿAದ ಜಿಲ್ಲಾ ಮಟ್ಟದ ರಾಜ್ಯ ಸ ರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿ ಸ್ಪರ್ಧೆಗಳನ್ನು ಜ.೨೯ ರಿಂದ ಎರಡು ದಿನಗಳಕಾಲ ನಗರದ ವೀರವನಿತೆ
ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಬಾರಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನೋಂದಣಿಗೆ ಅವಕಾಶ ನೀಡಲಾಗಿತ್ತು.
ಆನ್‌ಲೈನ್‌ನಲ್ಲಿ ನೋಂದಣಿಯಾದವರನ್ನು ಮಾತ್ರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಪರಿಗಣಿಸಲಾಗಿದೆ. ಅಂದಾಜು ೨೦ ೪೫ ಸರ್ಕಾ ರಿ ನೌಕರರು ನೋಂದಾಯಿಸಿದ್ದಾರೆ. ಕ್ರೀಡಾಕೂಟದ ದಿನದಂದು ಬರುವಂತಹ ನೌಕರರಿಗೆ ನೇರ ನೋಂದಣಿಗೆ ಅವಕಾಶ ಇಲ್ಲ ಎಂದರು.
ನೋAದಾಯಿತ ನೌಕರರಿಗೆ ಟೀಶರ್ಟ್, ಕ್ಯಾಪ್ ವಿತರಿಸಲಾಗುವುದು. ನೋಂದಣಿಯಾದವರು ಕಡ್ಡಾಯವಾಗಿ ತಮ್ಮ ಇಲಾಖೆ ಗುರುತಿನ ಚೀಟಿ, ಆಧಾರ್‌ಕಾರ್ಡ್ ತರಬೇಕು. ನೋಂದಾಯಿತ ನೌಕರರಿಗೆ ೨ ದಿನಗಳ ವಿಶೇಷ ರಜೆ ಸೌಲಭ್ಯವಿದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ೨೯ ರಂದು ಸಂಜೆ ೬ಕ್ಕೆ `ಸಂಕ್ರಾAತಿ ಸಂಭ್ರಮ ಸುಗ್ಗಿಯ ಸಿರಿ' ವಿನೂತನ ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಯಕ ಕಂಬದರAಗಯ್ಯ ಸಂಗಡಿಗರಿAದ ಸಂಗೀತ ರಸಮಂಜರಿ ಹಾಗೂ ನÊತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಟ ನೆನಪಿರಲಿ ಪ್ರೇಮ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದಾಜು ೫ ಸಾವಿರ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಗ್ರಾಮೀಣ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ, ಮಂಡಳಿ, ಪ್ರಾಽಕಾರ, ಆಯೋಗ ದ ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಷಡಾಕ್ಷರಿ, ಹಿರಿಯ ಅಽಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿ ದ್ದಾರೆ ಎಂದರು. ಸAಘದ ಪದಾಽಕಾರಿಗಳಾದ ಶ್ರೀನಿವಾಸ್, ಎ. ಮಲ್ಲಿಕಾರ್ಜುನ, ಎಚ್.ಬಿ. ಪೂಜಾರ್, ಆರ್. ರಮೇಶ್, ಡಾ.ಬಿ.ಟಿ. ಲೋಲಾಕ್ಷಮ್ಮ ಇದ್ದರು.