ಡಾ.ಎಸ್.ಪಿ. ರವೀಂದ್ರ, ಜಿ¯್ಲÁ ಶಸöಚಿಕಿತ್ಸಕ 
ಚಿತ್ರದುರ್ಗ

ಮತ್ತಷ್ಟು ಆರೋಗ್ಯ ಸೇವೆಗಳ ಸುಧಾರಣೆಗೆ ಸಜ್ಜಾಗುತ್ತಿದೆ ಜಿಲ್ಲಾಸ್ಪತ್ರೆ

ಪ್ರಮುಖ ಮುಖ್ಯಾಂಶಗಳು

  • ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
  • ೩,೯೬,೯೯೭ ಹೊರರೋಗಿ,೪೯,೬೮೨ ಒಳರೋಗಿಗಳಿಗೆ ಶುಶ್ರೂಷೆ
  • ೨೦೨೫-೨೬ನೇ ಸಾಲಿನಲ್ಲಿ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಅಽಕ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಹಲವು ಸೌಲಭ್ಯಗಳೊಂದಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯನ್ನು ಸಜ್ಜುಗೊಳಿಸಲಾಗುತ್ತಿದೆ.
೨೦೨೫-೨೬ನೇ ಸಾಲಿನ ಅಂಕಿ-ಅAಶಗಳ ಪ್ರಕಾರ ೩,೯೬,೯೯೭ ಹೊರರೋಗಿಗಳು, ೪೯,೬೮೨ ಒಳರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪ್ರಯೋಗಾಲಯದಲ್ಲಿ ಒಟ್ಟು ೯,೮೦,೪೧೨ ರೋಗಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಹೊರರೋಗಿ ವಿಭಾಗದಲ್ಲಿ ೨,೬೭,೪೩೮ ಜನ ಚಿಕಿತ್ಸೆ ಪಡೆದಿದ್ದು, ಈ ಪೈಕಿ ೯೭,೯೧೮ ಮಂದಿಗೆ ರಾತ್ರಿ ವೇಳೆ ತುರ್ತು ಸೇವೆ ನೀಡಲಾಗಿದೆ.
ಹೆರಿಗೆ ವಿಭಾಗದಲ್ಲಿ ೧,೭೩೪ ಸಹಜ, ೪,೨೨೫ ಸಿಸೇರಿಯನ್‌ಗಳಾಗಿವೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಕಡಿತಗೊಳಿಸುವ ಆರೋಗ್ಯ ಸಚಿವರ ಸೂಚನೆ ಸರಿಯಾಗಿ ಪಾಲನೆಯದಂತೆ ಕಾಣುತ್ತಿಲ್ಲ. ೧,೯೪೪ ಕಣ್ಣಿನ ಪೊರೆ ಯಶಸ್ವಿ: ಜಿಲ್ಲಾಸ್ಪತ್ರೆಯಲ್ಲಿ ೧,೧೯೬ ಮೇಜರ್ ಶಸö ಚಿಕಿತ್ಸೆಗಳಾಗಿದ್ದು, ೯೭೧ ಮೂಳೆ ಶಸöಚಿಕಿತ್ಸೆ. ೧,೯೪೪ ಕಣ್ಣಿನ ಪೊರೆ ಶಸö ಚಿಕಿತ್ಸೆಗಳು ಯಶಸ್ವಿಯಾಗಿವೆ.
ಕಳೆದ ಸಾಲಿನಲ್ಲಿ ೬೪ ರಕ್ತದಾನ ಶಿಬಿರಗಳನ್ನು ನಡೆಸಿ ೪,೫೦೮ ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ೪,೬೬೭ ಮಂದಿಗೆ ರಕ್ತ ನೀಡಿ ಜೀವ ಉಳಿಸಲಾಗಿದೆ. ಕಿಡ್ನಿ ವೈ-Àಲ್ಯದಿಂದ ಬಳಲುತ್ತಿರುವ ೧೧೦ ರೋಗಿಗಳಿಗೆ ಕಳೆದ ಸಾಲಿನಲ್ಲಿ ಸುಮಾರು ೧೦,೬೧೯ ಸೈಕಲï‌ಗಳಷ್ಟು ಡಯಾಲಿಸಿಸ್ ಚಿಕಿತ್ಸೆ ನೀಡಲಾಗಿದೆ.
ಪ್ರತಿ ವಾರ ತಜ್ಞ ವೈದ್ಯರು: ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ವಾರಕ್ಕೊಮ್ಮೆ ಕರೆಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ಶುಕ್ರವಾರ ನರರೋಗ, ಗುರುವಾರ ಹೃದ್ರೋಗ, ಶನಿವಾರ ಮೂತ್ರಪಿಂಡ,
ತಿಂಗಳಾರAಭದ ಮೊದಲ ಬುಧವಾರ ಮಕ್ಕಳ ಹೃದ್ರೋಗ ಹಾಗೂ ವಾರಕ್ಕೆ ಮೂರು ದಿನ ಕ್ಯಾನ್ಸರ್ ತಜ್ಞರು ಲಭ್ಯವಿರಲಿದ್ದು, ಶಸöಚಿಕಿತ್ಸೆ ಹಾಗೂ ಕೀಮೋಥೆರಪಿಗೆ ಸಲಹೆಗಳನ್ನು ನೀಡುತ್ತಿz್ದÁರೆ. ಈ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಗುರಿ ಜಿಲ್ಲಾಸ್ಪತ್ರೆಯದ್ದಾಗಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೊಠಡಿ, ಆಪರೇಷನ್ ಥಿಯೇಟರ್, ನವಜಾತ ಶಿಶುಗಳ ನಿಗಾಘಟಕ ಹಾಗೂ ಹೈ-ರಿ¸್ಕï ಗರ್ಭಿಣಿಯರ ಆರೈಕೆಗೆ ವಿಶೇಷ ವಾರ್ಡ್ಗಳನ್ನು ಸಜ್ಜುಗೊಳಿಸಲಾಗಿದೆ. ಅಪೌಷ್ಟಿಕ ಮಕ್ಕಳ ಚಿಕಿತ್ಸೆಗೆ ಎನ್‌ಆರ್‌ಸಿ ಕೇಂದ್ರ ಹಾಗೂ ಮಕ್ಕಳಲ್ಲಿನ ಜನ್ಮಜಾತ ದೋಷಗಳನ್ನು ಆರಂಭಿಕ ಹಂತದ¯್ಲೆÃ ಗುರುತಿಸಿ ಚಿಕಿತ್ಸೆ ನೀಡಲು ಜಿ¯್ಲÁ ಮುಂಚಿತ ಹಸ್ತಕ್ಷೇಪ ಕೇಂದ್ರ (ಈಉಐಇ) ಕಾರ್ಯಕ್ಕೆ ವೇಗ ನೀಡಲಾಗಿದೆ.
೩,೦೬೦ ಮಕ್ಕಳ ಆರಂಭಿಕ ರೋಗನಿರ್ಣಯ ಪತ್ತೆ ಮಾಡಲಾಗಿದೆ. ದೃಷ್ಟಿ, ಶ್ರವಣ ದೋಷ ಹಾಗೂ ಬುದ್ಧಿಮಾಂದ್ಯತೆಯAತಹ ಸಮಸ್ಯೆಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ವೈದ್ಯರು ಶ್ರಮಿಸುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ೨೦೬ ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂಬ ಮಾಹಿತಿ ಇದೆ.
ತಾಪಂ ವತಿಯಿಂದ ೮ ಲಕ್ಷ ರೂ. ವೆಚ್ಚದಲ್ಲಿ ನೀಡಲಾಗಿರುವ ಬೆರಾ ಪರೀಕ್ಷಾ ಯಂತ್ರವನ್ನು ಶೀಘ್ರದ¯್ಲÉÃ ಅಳವಡಿಸಲಾಗುತ್ತಿದ್ದು, ಇದು ಶಿಶುಗಳಲ್ಲಿನ ಕಿವುಡುತನ ಪತ್ತೆಹಚ್ಚಲು ಸಹಕಾರಿಯಾಗಲಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಸೌಂಡ್ ಪ್ರೂ-ï ಕೊಠಡಿ ಸಜ್ಜಾಗುತ್ತಿದೆ.
ವೈದ್ಯಕೀಯ ಕಾಲೇಜು ಸೇವೆ ಲಭ್ಯ: ಜಿ¯್ಲÁಸ್ಪತ್ರೆ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿ ರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ಪ್ರಯತ್ನ ನಡೆದಿದೆ. ವಿವಿಧ ವಿಭಾಗಗಳಿಗೆ ೩೦ ಹೊಸ ವೈದ್ಯರು, ೩೦ ನುರಿತ ಶುಶ್ರೂಷಾಽಕಾರಿಗಳು ಹಾಗೂ ೧೪ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಇದರಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಒಂದೇ ಕೊಠಡಿಯಲ್ಲಿ ಮೂವರು ವೈದ್ಯರು ಏಕಕಾಲಕ್ಕೆ ರೋಗಿಗಳನ್ನು ಪರೀಕ್ಷಿಸಲು ಅನುಕೂಲವಾಗುವಂತೆ ವಿಭಜನೆ (ಪಾರ್ಟಿಷನ್) ಮಾಡಲಾಗಿದೆ.
ಜನರಲ್ ಸರ್ಜರಿ, ಆರ್ಥೋಪೆಡಿಕ್, ಚರ್ಮದ ವಿಭಾಗ, ಇಎನ್‌ಟಿ, ಫಿಸಿಯೋಥೆರಪಿ ಹಾಗೂ ಮೆದುಳು ಸಂಬAಽ ವಿಭಾಗಗಳಲ್ಲಿ ರೋಗಿಗಳಿಗೆ ಶೀಘ್ರ ಚಿಕಿತ್ಸೆ ದೊರೆಯಲಿದೆ ಎಂದು ಹೇಳುತ್ತಾರೆ ಜಿ¯್ಲÁ ಶಸöಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ.
*ಬಾಕ್ಸ್*
೪ ಕೋಟಿ ರೂ. ವೆಚ್ಚದಲ್ಲಿ ನವೀಕರಣ
ಜಿ¯್ಲÁಸ್ಪತ್ರೆಯ ಒಳ ಹಾಗೂ ಹೊರಾಂಗಣವನ್ನು ಸುಂದರಗೊಳಿಸಲು ೪ ಕೋಟಿ ರೂ. ವೆಚ್ಚದಲ್ಲಿ ನವೀಕರಣ ನಡೆಯುತ್ತಿದೆ. ವಾರ್ಡ್ಗಳಿಗೆ ಬಣ್ಣ ಬಳಿಯುವುದು, ಬ್ಲಡ್ ಬ್ಯಾಂಕ್ ನವೀಕರಣ ಹಾಗೂ ಒಪಿಡಿ ಬ್ಲಾಕ್ ಹೊರಗಡೆ ನೋಂದಣಿ ಕೌಂಟರ್ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿವೆ. ಹೊರರೋಗಿ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ.
* ಸಿಎಸ್‌ಆರ್ ನಿಽಯಡಿ ೭ ಲಕ್ಷ ರೂ. ವೆಚ್ಚದಲ್ಲಿ ವಿಶಾಲವಾದ ತಂಗುದಾಣ.
* ಬೇಸಿಗೆ, ಮಳೆಗಾಲದಲ್ಲಿ ರೋಗಿಗಳ ಸಂಬAಽಕರಿಗೆ ವಿಶ್ರಾಂತಿ ಪಡೆಯಲು ಸಹಕಾರಿ.
* ೫೦ ರಿಂದ ೧೦೦ ಮಂದಿ ಕುಳಿತುಕೊಳ್ಳಲು ಅವಕಾಶ.
* ಸಂಸದರ ನಿಽಯಡಿ ೧೦ ಲಕ್ಷ ರೂ. ವೆಚ್ಚದಲ್ಲಿ ಮೃತದೇಹಗಳ ಸಂರಕ್ಷಿಸಿಡಲು ಹೊಸದಾಗಿ ನಾಲ್ಕು ಹೈಕೋಲ್ಡï ಬಾP್ಸï ಅಳವಡಿಕೆ.
* ಆಸ್ಪತ್ರೆಯ ಲಾಂಡ್ರಿ ವಿಭಾಗಕ್ಕೆ ಹೊಸದಾಗಿ ಒಂದು ಟಂಬಲ್ ಡ್ರೆÊಯರ್, ಮೂರು ಸೆಮಿ ಡ್ರೆÊಯರ್ ಯಂತ್ರಗಳ ಅಳವಡಿಕೆ.
* ಐರನ್ ಮೆಷಿನ್ ದುರಸ್ತಿ, ಟೈಲ್ಸï‌ಗಳ ಅಳವಡಿಕೆ.
"

ಕಳೆದ ಸಾಲಿನಲ್ಲಿ ೧೧೩೪೩ ಎಂಆರ್‌ಐ, ೬೬೩೨ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಲಾಗಿದೆ. ಈ ಸೌಲಭ್ಯ ಪಡೆಯಲು ರೋಗಿಗಳು ದಿನಗಟ್ಟಲೇ ಕಾಯಬೇಕಿತ್ತು. ಆದರೀಗ ವ್ಯವಸ್ಥೆ ಸುಧಾರಿಸಿದೆ. ನೋಂದಣಿ ದಿನವೇ ಸ್ಕ್ಯಾನಿಂಗ್ ಸೌಲಭ್ಯ ದೊರೆಯುತ್ತಿದೆ. ಹಾವು ಕಡಿತದ ೬೫೮ ಪ್ರಕರಣಗಳಲ್ಲಿ ಇಬ್ಬರನ್ನು ಹೊರತುಪಡಿಸಿ ೬೫೬ ಮಂದಿಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.