ರಸಗೊಬ್ಬರ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಸೋಮವಾರ ಕೆಆರ್‌ಎಸ್ ರಾಜ್ಯ ರೈತ ಘಟಕದ ಪದಾಽಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರವಿಕೃಷ್ಣರೆಡ್ಡಿ, ದೀಪಕ್, ಜೋಗನಹಳ್ಳಿ ಗುರುಮೂರ್ತಿ, ರಘು ಜಾಣಗೆರೆ, ರಾಜಪ್ಪ, ದಾದಾಪೀರ್ ಇತರರಿದ್ದರು.  
ಚಿತ್ರದುರ್ಗ

ನ್ಯಾಯಯುತ ಬೆಲೆಗೆ ರಸಗೊಬ್ಬರ ವಿತರಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಭದ್ರಾ ಮೇಲ್ದಂಡೆ ಅನುಷ್ಠಾನ ಸೇರಿ ಬೇಡಿಕೆ ಈಡೇರಿಕೆಗೆ ಆಗ್ರಹ
  • ಕೆಆರ್‌ಎಸ್ ರಾಜ್ಯ ರೈತ ಘಟಕದಿಂದ ಪ್ರತಿಭಟನೆ
  • ಗುಣಮಟ್ಟದ ವಿದ್ಯುತ್ ಪೂರೈಸಬೇಕು
ಚಿತ್ರದುರ್ಗ: ಮುಂಗಾರು ಮಳೆ ಆರಂಭವಾಗಿದ್ದು, ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿz್ದÁರೆ. ಆದ್ದರಿಂದ ಅರ್ಹರಿಗೆ ನ್ಯಾ ಯಯುತ ಬೆಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ವಿತರಿಸಲು ಕ್ರಮವಹಿಸುವಂತೆ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ರಾಜ್ಯ ರೈತ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ ನಾಲೆಯ ಎಲ್ಲ ಭಾಗಗಳಿಗೂ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಪಂಪ್‌ಸೆಟ್‌ಗಳಿಗೆ ನಿತ್ಯ ಹಗಲು ೭ ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಖಾಸಗೀಕರಣಕ್ಕೆ ಮುಂದಾಗಿರುವುದನ್ನು ಕೈಬಿಡಬೇಕು. ದ್ವಿದಳ ಧಾನ್ಯಗಳು, ಮೆಣಸಿನಕಾಯಿ ಮತ್ತು ಎಣ್ಣೆಕಾಳು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಆಗ್ರಹಿಸಿದರು.
ರೈತರಿಗೆ ನೀಡುವ ಬೆಳೆ ಸಾಲ ದ್ವಿಗುಣಗೊಳಿಸಬೇಕು. ಬಡವರಿಗೆ ಜಾಮೀನು ರಹಿತ ಭದ್ರತೆ ಇಲ್ಲದೆಯೇ ತಲಾ ಒಂದು ಕುಟುಂ ಬಕ್ಕೆ ೧ ಲಕ್ಷ ರೂ. ಸಾಲ ನೀಡಬೇಕು. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಕೂಡಲೇ ಜಮಾ ಮಾಡಬೇಕು. ಮುಂದೆ ಬೆಳೆ ಹಾನಿಯಾದಲ್ಲಿ ತ್ವರಿತವಾಗಿ ಸ್ಪಂದಿಸಬೇಕೆAದು ಒತ್ತಾಯಿಸಿದರು.
ರಾಗಿ, ಮೆಕ್ಕೆಜೋಳ, ಧಾನ್ಯ ಸೇರಿ ಇನ್ನಿತರೆ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರಿಗೆ ಒಂದೇ ವಾರದಲ್ಲಿ ಹಣ ಸಂದಾಯವಾಗಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ಕಮಿಷನ್ ದಂಧೆ ನಿಲ್ಲಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಸರ್ಕಾರಿ ಕಚೇರಿ ಸೇರಿ ಪೊಲೀಸ್ ಠಾಣೆಗಳಲ್ಲಿ ಲಂಚದ ಹಾವಳಿ ತಡೆಯಬೇಕು. ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಒಳಚರಂಡಿ, ಸ್ವಚ್ಛತೆ ಸೇರಿ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಕೋರಿದರು.
ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣರೆಡ್ಡಿ, ರಾಜ್ಯಾಧ್ಯಕ್ಷ ಸಿ.ಎನ್. ದೀಪಕ್, ರೈತ ಘಟಕದ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ಪದಾಽಕಾರಿಗಳಾದ ರಘು ಜಾಣಗೆರೆ, ಸುಂದರ್, ಮಂಜುನಾಥ್, ನಾಗರೆಡ್ಡಿ, ಪ್ರಭುಸ್ವಾಮಿ, ರೇಖಾ, ವಿಶ್ವನಾಥ್, ರಾಜಪ್ಪ, ದಾದಾಪೀರ್, ಪಾಪಯ್ಯ, ಕೃಷ್ಣಮೂರ್ತಿ, ರಂಗೇಶ್ ಇತರರಿದ್ದರು.