ಚಿತ್ರದುರ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಹೆಸರಲ್ಲಿ ಶನಿವಾರ ಹಿರಿಯೂರಲ್ಲಿ ಬೊಕ್ಕಸದ ಹಣ ಖರ್ಚು ಮಾಡಿ ಹೋಗಿದ್ದಾರೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಕಿಡಿಕಾರಿದರು.
ಶಿಷ್ಟಾಚಾರ ಪಾಲಿಸದೆ, ಅಭ್ಯರ್ಥಿ ಆಕಾಂಕ್ಷಿಗಳನ್ನು ಕೂರಿಸಿಕೊಂಡು ಸಭೆ ಮಾಡಿದ್ದಾರೆ. ಈ ನಡೆ ಮುಖ್ಯಮಂತ್ರಿಗಳಿಗೆ ಶೋಭೆ ತರದು. ಬೇಕಾದರೆ ಕಾಂಗ್ರೆಸ್ ಸಮಾವೇಶ ಏರ್ಪಡಿಸಿ ಆಕಾಂಕ್ಷಿಗಳ ಮೆರವಣಿಗೆ ಮಾಡಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಪಾಠ ಕಲಿಸಿದ್ದಾರೆ. ಉಪ ಚುನಾವಣೆಯಲ್ಲಿ ಜನ ಯಾರಿಗೆ ಬಹಿಷ್ಕಾರ ಹಾಕುತ್ತಾರೆಂದು ಗೊತ್ತಾಗುತ್ತದೆ. ನಿಮಗೆ ವಿಶ್ವಾಸವಿದ್ದರೆ ಶಾಸನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದರು.
ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲು ಕೊಡುವ ಕುರಿತಂತೆ ಸಂವಿಧಾನದಡಿ, ರಿಜಿಸ್ಟಾರ್ ಜನರಲ್ ಆಫ್ ಇಂಡಿಯಾದ ಮಾನದಂಡಗಳ ಅನುಸಾರ ಕುಲಶಾಸ್ತಿçÃಯ ತ್ವರಿತಗತಿಯಲ್ಲಿ ಅಧ್ಯಯನ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡಿ. ಪ್ರಧಾನಿ ಬಳಿಗೆ ನಾವು, ನೀವು ಹೋಗಿ ಎಸ್ಟಿ ಮೀಸಲು ಕೊಡಿಸೋಣ ಎಂದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಎ. ಮುರಳಿ, ಮೋಹನ್ಕುಮಾರ್, ಮಾಧುರಿಗಿರೀಶ್, ರಾಜಣ್ಣ, ವಿಶ್ವಣ್ಣ, ವೆಂಕಟೇಶ್ ಯಾದವ್, ನಾಗರಾಜ ಬೇದ್ರೆ ಇದ್ದರು.
-----
ನೀವೂ ಪಶ್ಚಾತಾಪ ಪಡುತ್ತೀರಿ
ಒಳ ಮೀಸಲಾತಿ ವಿಚಾರದಲ್ಲಿ ಎಸ್ಸಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪಶ್ಚಾತಾಪ ಪಡುತ್ತಿದ್ದಾರೆ. ಅಽಕಾರ ಕಳೆದುಕೊಂಡ ಬಳಿಕ ಶಿವಕುಮಾರ್ ಕೂಡ ಇದನ್ನೇ ಅನುಭವಿಸುತ್ತಾರೆ. ಮೀಸಲು ಹೆಚ್ಚಳ ವಿಚಾರದಲ್ಲಿ ಕೋರ್ಟ್ಗೆ ಸರಿಯಾಗಿ ಹಾಜರಾಗದೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದೀರಿ. ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ಒಳಮೀಸಲಾತಿ ಸರಿಯಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲವೆಂದು ಟೀಕಿಸಿದರು.
----
ಪೂರ್ಣಿಮಾ ಶ್ರೀನಿವಾಸ್ ಕ್ಷೇತ್ರಕ್ಕೆ ಏನೂ ಮಾಡಿಲ್ಲ
೬೦ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸಿಗೆ ರಾಜ್ಯ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ಅಭಿವೃದ್ಧಿ ಮಾಡಬೇಕು ಎಂದು ಅನ್ನಿಸಿರಲಿಲ್ಲ. ಈಗ ಉಪ ಚುನಾವಣೆ ಬಂದಿದೆ ಎಂದು ಹಿರಿಯೂರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ. ನಾನು ಸಣ್ಣ ನೀರಾವರಿ ಇಲಾಖೆ ಸಚಿವನಾಗಿದ್ದಾಗ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕೋರಿಕೆಯಂತೆ ಧರ್ಮಪುರ ೧೨ ಕೆರೆಗೆ ನೀರೊದಗಿಸುವ ಹಾಗೂ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಾಗಿವೆ. ಆಗ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದರು ಎಂದು ಪೂರ್ಣಿಮಾ ಶ್ರೀನಿವಾಸ್ ಅವರಿಗೆ ನೆನಪಿಸುವುದಾಗಿ ಹೇಳಿದರು.
---
ಭದ್ರಾ ಮೇಲ್ದಂಡೆ ಯೋಜನೆ
ಭದ್ರಾ ಮೇಲ್ದಂಡೆ ಯೋಜನೆಗೆ ಆರಂಭದಿAದ ಈವರೆಗೆ ಬಿಡುಗಡೆಯಾದ ಒಟ್ಟು ೧೬೯೦೪ ಕೋಟಿ ರೂ.ಅನುದಾನದಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರ್ಕಾರಗಳ ಅವಽಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರು ೨೦೧೯-೨೦ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ೭೨೧ ಕೋಟಿ ರೂ.ಬಿಡುಗಡೆ ಮಾಡಿದ್ದರು ಎಂದು ನೆನಪಿಸಿದರು.
----
ಅನುದಾನ ಕಡಿತ ಯಾಕೆ ತಿಳಿಸಿ?
ಬೊಮ್ಮಾಯಿ ಅವರು ೨೦೨೩-೨೪ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ೫೫೦೦ ಕೋಟಿ ರೂ. ಕಾಯ್ದಿರಿಸಿದ್ದರು. ಆದರೆ, ನಂತರದಲ್ಲಿ ಅಽಕಾರಕ್ಕೆ ಬಂದ ನೀವು ಅರ್ಧ ಅನುದಾನ ಕಡಿತಗೊಳಿಸಿದ್ದು ಯಾಕೆ ಎಂಬುದನ್ನು ಜನರಿಗೆ ತಿಳಿಸಬೇಕೆಂದ ಕಾರಜೋಳ, ೨೦೦೭-೦೮ರಿಂದ ೨೦೨೬-೨೭ರವರೆಗೆ ಪ್ರತಿ ವರ್ಷ ಬಿಡುಗಡೆ ಆದ ಅನುದಾನದ ವಿವರ ನೀಡಿದರು. ಕೇಂದ್ರ ೫೩೦೦ ಕೋಟಿ ರೂ.ಕೊಡಲು ಬದ್ಧವಿದೆ, ಪ್ರತ್ಯೇಕ ಖಾತೆಯೊಂದಿಗೆ ನಿಯಮಗಳ ಪಾಲನೆ ಕುರಿತು ರಾಜ್ಯಸರ್ಕಾರ ಕೇಂದ್ರಕ್ಕೆ ತಿಳಿಸಬೇಕೆಂದರು.