ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವಕುಮಾರ ಸ್ವಾಮೀಜಿ, ಶಾಸಕ ಡಾ.ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ಎಂ.ಕೆ. ತಾಜ್‌ಪೀರ್, ಡಾ.ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಇತರರು ಇದ್ದರು. 
ಚಿತ್ರದುರ್ಗ

ಪ್ರಕೃತಿ ಮುನಿದರೆ ಮಾನವ ಕುಲಕ್ಕೆ ಆಪತ್ತು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಆತಂಕ
  • ಜೋಗಿಮಟ್ಟಿ ಸಸಿ ನೆಡುವ ಸಪ್ತಾಹ ಕಾರ್ಯಕ್ರಮ
  • ಜೋಗಿಮಟ್ಟಿ ವನ್ಯಜೀವಿಧಾಮ
ಚಿತ್ರದುರ್ಗ: ಪ್ರಕÊತಿ ಮುನಿದರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಚ್ಚರಿಸಿದರು.
ನಗರದ ಜೋಗಿಮಟ್ಟಿ ವನ್ಯಜೀವಿಧಾಮ ಗೇಟ್ ಬಳಿ ಭಾನುವಾರ ಮುರುಘಾಮಠ ಹಾಗೂ ಶ್ರೀ ಮಠದ ವಿವಿಧ ಸಂಸ್ಥೆಗಳ ಆಶ್ರ ಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹದ ೨ನೇ ದಿನದ ಹಾಗೂ`ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ' ವಿಷಯಾವಲೋಕನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದೆ. ಮಳೆ-ಬೆಳೆ ಸಕಾಲಕ್ಕೆ ಆಗುತ್ತಿಲ್ಲ ಎಂದರೆ ಅದಕ್ಕೆ ನಾವು ಮಾಡುತ್ತಿರುವ ಪರಿಸರ ನಾಶವೇ ಕಾರಣ ಎಂದು ಶ್ರೀಗಳು ವಿಷಾದಿಸಿದರು.
ಭಾಷಣಗಳಿಂದ ಪರಿಸರ ರಕ್ಷಣೆ ಸಾಧ್ಯವಿಲ್ಲ. ಪ್ರತಿ ನಾಗರಿಕ ವರ್ಷಕ್ಕೆ ಕನಿಷ್ಠ ಎರಡು ಸಸಿಗಳನ್ನಾದರೂ ನೆಟ್ಟು ಅವುಗಳನ್ನು ಮಕ್ಕ ಳಂತೆ ಪೋಷಿಸಬೇಕು. ಜೋಗಿಮಟ್ಟಿಯಂತಹ ಸುಂದರ ತಾಣವನ್ನು ಮತ್ತಷ್ಟು ಹಸಿರಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀಗಳು ಹೇಳಿದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಗಿಡಮರಗಳೇ ಜೀವಸಂಕುಲದ ನಿಜವಾದ ಆಸ್ತಿ, ನಮ್ಮ ಹಿರಿಯರು ನಮಗೆ ಹಸಿರು ಪರಿಸರ ಉಡುಗೊರೆಯಾಗಿ ನೀಡಿದ್ದಾರೆ. ಪ್ರಕೃತಿಯನ್ನು ಆರಾಽಸುವ ಸಂಸ್ಕೃತಿ ನಮ್ಮ ದಾಗಿದೆ ಎಂದರು.
ಎAಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಪ್ರಸ್ತು ತ ಎದುರಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾವೆಲ್ಲರೂ ಸಜ್ಜಾಗಬೇಕಿದೆ ಎಂ ದರು. ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ ಮಾತ ನಾಡಿದರು.
ಗುರುಮಿಠಕಲ್‌ನ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಶಿರಸಂಗಿ ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಎಸಿಎಫ್ ನಾಗೇಂದ್ರನಾಯಕ್, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಡಾ.ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ನಾನಾ ಸಂಘ ಸಂಸ್ಥೆಗಳ ಹಾಗೂ ಸಮುದಾಯಗಳ ಪ್ರಮುಖರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜ್ ಸ್ವಾಗತಿಸಿ, ಆಕಾಶ್ ನಿರೂಪಿಸಿದರು.
ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕಿದೆ
ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕಿದೆ ಎಂದು ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು. ಸ್ಥಳೀಯ ವಾತಾವರಣಕ್ಕೆ ಪೂರಕ ವಾದ, ಇಲ್ಲಿನ ಮಣ್ಣಿನ ಗುಣಕ್ಕೆ ಹೊಂದುವAತಹ ಸಸಿಗಳನ್ನು ಹೆಚ್ಚಾಗಿ ನೆಡಬೇಕು. ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯ ನೀಡುವಂತಹ ಹಣ್ಣಿನ ಹಾಗೂ ನೆರಳು ಕೊಡುವ ಗಿಡಗಳನ್ನು ಬೆಳೆಸುವುದರಿಂದ ಜೀವವೈವಿಧ್ಯತೆ ಕಾಪಾಡಬೇಕಿದೆ ಎಂದು ಹೇಳಿದರು.