ಚಿತ್ರದುರ್ಗ

ಎಚ್ಚರಿಕೆಯಿಂದ ಜನನ, ಮರಣ ನೋಂದಣಿಗೆ ತಾಕೀತು

ಕಾಲಮಿತಿಯೊಳಗೆ ಬೆಳೆ ಕಟಾವು ಪ್ರಯೋಗ ಪೂರ್ಣಗೊಳಿಸಿ

ಚಿತ್ರದುರ್ಗ: ಜನನ ಮತ್ತು ಮರಣ ನೋಂದಣಿ ಸಂದರ್ಭದಲ್ಲಿ ಆಧಾರ್ ಸಂಖ್ಯೆ, ದಿನಾಂಕ ಹಾಗೂ ಹೆಸರಿನಲ್ಲಿ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಽಕಾರಿ ಎಸ್.ರಮ್ಯಾ ಅಽಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಶನಿವಾರ ನಾಗರಿಕ ನೋಂದಣಿ ಪದ್ಧತಿ ೩ನೇ ತ್ರೆÊಮಾಸಿಕ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನನ ಮತ್ತು ಮರಣ ನೋಂದಣಿ ಸಮಯದಲ್ಲಿನ ಲೋಪಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ತಂದೆಯ ಆಧಾರ್ ಬದಲು ತಾಯಿಯ ಆಧಾರ್ ನಮೂದಿಸುವುದು, ಮರಣ ಹೊಂದಿದ ದಿನಾಂಕದ ವ್ಯತ್ಯಾಸ, ಗಂಡು ಮಗುವಿನ ಬದಲು ಹೆಣ್ಣು ಮಗು ಎಂದು ನಮೂದಿಸುವುದು ಸೇರಿದಂತೆ ಹಲವು ಗಂಭೀರ ತಪ್ಪುಗಳು ಗಮನಕ್ಕೆ ಬಂದಿವೆ. ಜನನ, ಮರಣ ನೋಂದಣಿ ಎಡವಟ್ಟುಗಳಿಂದಾಗಿ ಸಾರ್ವಜನಿಕರಿಗೆ ನಂತರದ ದಿನಗಳಲ್ಲಿ ತಿದ್ದುಪಡಿಗೆ ತೀವ್ರ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ನೋಂದಣಾಽಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಅಽಕಾರಿಗಳಿಗೆ ನಿರ್ದೇಶನ ನೀಡಿದರು.

ಜನಸಂಖ್ಯೆಗೆ ಹೋಲಿಸಿದರೆ ಹೊಳಲ್ಕೆರೆ ಭಾಗದಲ್ಲಿ ನೋಂದಣಿ ಪ್ರಗತಿ ಕುಂಠಿತಗೊAಡಿದೆ. ಗರ್ಭಿಣಿಯರ ನೋಂದಣಿ ಹಾಗೂ ನೈಜ ಜನನ ಸಂಖ್ಯೆಗೂ ವ್ಯತ್ಯಾಸ ಕಂಡುಬರುತ್ತಿದೆ. ಗರ್ಭಿಣಿಯರು ಬೇರೆಡೆ ಹೆರಿಗೆಗೆ ತೆರಳುತ್ತಿದ್ದರೂ ಅಥವಾ ಸ್ಥಳೀಯವಾಗಿ ಹೆರಿಗೆಯಾಗುತ್ತಿದ್ದರೂ ಸರಿಯಾದ ಮಾಹಿತಿ ಕ್ರೋಡೀಕರಿಸಬೇಕು. ತಾಯಿ ಕಾರ್ಡ್ ಹೊಂದಿದ್ದರೂ ನೋಂದಣಿಯಿAದ ಯಾರೂ ಹೊರಗುಳಿಯದಂತೆ ಜಾಗೃತಿ ವಹಿಸಬೇಕು. ಮೊಳಕಾಲ್ಮೂರು ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ನೋಂದಣಿ ಪ್ರಮಾಣ ಉತ್ತಮವಾಗಿದೆ. ಆದರೆ, ಹೆಚ್ಚಿನ ಜನಸಂಖ್ಯೆ ಹೊಂದಿರುವ ತಾಲೂಕುಗಳಲ್ಲಿಯ ಹಿನ್ನಡೆ ಕಾರಣಗಳನ್ನು ಕಂಡುಕೊAಡು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂದರು.

ಜನನ, ಮರಣ ನೋಂದಣಿ ಘಟಕಗಳಲ್ಲಿ ನೋಂದಣಿಯಾಗುತ್ತಿರುವ ಸಂದರ್ಭದಲ್ಲಿ ತಪ್ಪು ನೋಂದಣಿ ಕಂಡುಬAದಿರುತ್ತದೆ ಎಂದು ಸಹಾಯಕ ಸಾಂಖ್ಯಿಕ ಅಽಕಾರಿ ಅಶ್ವತ್ಥಾಮ ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ನಗರಾಭಿವÊದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕÊಷಿ ಇಲಾಖೆ ಜಂಟಿ ಕÊಷಿ ನಿರ್ದೇಶಕ ಮಂಜುನಾಥ್, ಸಾಂಖ್ಯಿಕ ಇಲಾಖೆ ಸಹಾಯಕ ನಿ ರ್ದೇಶಕಿ ಎಚ್.ಶಶಿರೇಖಾ, ಸಹಾಯಕ ಸಾಂಖ್ಯಿಕ ಅಽಕಾರಿಗಳಾದ ವೀಣಾ, ಮಮತಾ, ನಜರೀನ್, ಸಾಂಖ್ಯಿಕ ನಿರೀಕ್ಷಕ ರಾಕೇಶ್ ಇತರರು ಇದ್ದರು.

ಬಾಕ್ಸ್

ಜಿಲ್ಲೆಯಲ್ಲಿ ೧,೩೪೭ ನೋಂದಣಿ ಘಟಕ

ಜಿಲ್ಲಾ ಸಾಂಖ್ಯಿಕ ಅಽಕಾರಿ ಎನ್. ರವಿಕುಮಾರ್, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ ಗಳು ಹಾಗೂ ಗ್ರಾಪಂಗಳನ್ನು ಉಪ ನೋಂದಣಿ ಘಟಕಗಳನ್ನಾಗಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ೯೪ ಆರೋಗ್ಯ ಕೇಂದ್ರಗಳು ಹಾಗೂ ೧೮೯ ಗ್ರಾಪಂಗಳ ಸಹಿತ ೧,೩೪೭ ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಘಟನೆ ನಡೆದ ೩೧ ದಿನಗಳ ನಂತರ ಬರುವ ಅರ್ಜಿಗಳನ್ನು ನಿಯಮಾನುಸಾರ ಗ್ರಾಮಾಡಳಿತಾಽಕಾರಿ ಹಾಗೂ ಪಂ. ಕಾರ್ಯದರ್ಶಿ ಲಾಗಿನ್ ಮೂಲಕ ಪರಿಶೀಲಿಸಿ, ನೋಂದಣಿ ಘಟಕಗಳಿಗೆ ಶಿ-Áರಸ್ಸು ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಸುಲಭವಾಗಿ ಪ್ರಮಾಣಪತ್ರ ಸಿಗುವಂತೆ ಕ್ರಮವಹಿಸಲಾಗಿದೆ.

ಎಲ್ಲ ನೋಂದಣಾಽಕಾರಿಗಳು, ಉಪ ನೋಂದಣÁಽಕಾರಿಗಳು ಜನನ ಮರಣ ಪ್ರಮಾಣ ಪತ್ರಗಳನ್ನು ಇ-ಜನ್ಮ ತಂತ್ರಾAಶದಲ್ಲಿ ನೋಂದಾಯಿಸುವಾಗ ತಂದೆ, ತಾಯಿ ಹಾಗೂ ಪತಿ ಅಥವಾ ಪತ್ನಿ ಹಾಗೂ ಪಾಲಕರ ಮೊಬೈಲ್ ಸಂಖ್ಯೆ ಪಡೆದು ವಿತರಿಸಲಾಗುತ್ತಿದೆ. ಜನನ, ಮರಣ ಘಟನೆ ಸಂಭವಿಸಿ ಒಂದು ವರ್ಷದ ನಂತರ ಮಾಹಿತಿ ನೀಡಿದ ಯಾವುದೇ ಜನನ ಅಥವಾ ಮರಣವನ್ನು ಮೊದಲನೇ ವರ್ಗದ ದಂಡಾಽಕಾರಿ ಅಥವಾ ಮಹಾಪ್ರಾಂತ ದಂಡಾಽಕಾರಿಯ ಆದೇಶದೊಂದಿಗೆ ನೋಂದಾಯಿಸಬೇಕಿದೆ ಎಂದರು.

ಬೆಳೆ ಕಟಾವು ಪ್ರಯೋಗ

ಬರಗಾಲದಿಂದಾಗಿ ಕೃಷಿ ಬೆಳೆಗಳು ಒಣಗುತ್ತಿದ್ದು, ಕೃಷಿ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ತಕ್ಷಣವೇ ಕ್ಷೇತ್ರ ಭೇಟಿ ನೀಡಿ ನಿಗದಿತ ಅವಽಯೊಳಗೆ ಬೆಳೆ ಕಟಾವು ಪ್ರಯೋಗ ಪೂರ್ಣಗೊಳಿಸಬೇಕು ಎಂದು ಡಿಸಿ ಅಽಕಾರಿಗಳಿಗೆ ನಿರ್ದೇಶಿಸಿದರು. ಶನಿವಾರ ಜಿಲ್ಲಾಮಟ್ಟದ ಕೃಷಿ ಅಂಕಿಅAಶಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಬೆಳೆ ಕಟಾವು ಪ್ರಯೋಗಗಳಲ್ಲಿ ಲೋಪ ದೋಷಗಳಾಗಬಾರದು. ನಮೂನೆ ೧ ಮತ್ತು ನಮೂನೆ ೨ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಬೇಕು. ನಮೂನೆ ೧ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಾತ್ಕಾಲಿಕ ದಿನಾಂಕಗಳಿಗೆ ಕಾಯದೆ ಒಣಗುತ್ತಿರುವ ಬೆಳೆಗಳ ವಾಸ್ತವ ಸ್ಥಿತಿ ಆಧರಿಸಿ ತಕ್ಷಣವೇ ನಮೂನೆ ೨ ಕಟಾವು ಪ್ರಯೋಗ ನಡೆಸಬೇಕು ಎಂದರು.

ತಾಲೂಕು ಮಟ್ಟದ ಅಽಕಾರಿಗಳು ಬೆಳೆ ಕಟಾವು ಪ್ರಯೋಗಗಳ ಮೇಲ್ವಿಚಾರಣೆ ನಡೆಸಬೇಕು. ತಮ್ಮ ಇಲಾಖೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸ್ವತಃ ಸ್ಥಳಕ್ಕೆ ಭೇಟಿ ನೀಡಿ ನಿಖರವಾದ ಇಳುವರಿ ಮಾಹಿತಿ ದಾಖಲಿಸುವಂತೆ ನೋಡಿಕೊಳ್ಳಬೇಕು. ಬೆಳೆಗಳ ಕಟಾವು ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.