ಚಿತ್ರದುರ್ಗದಲ್ಲಿ ಶನಿವಾರ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ಪ್ರಗತಿ ಪರಿಶೀಲನೆ ನಡೆಸಿದರು. ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ, ಮಂಡಳಿ ಅಧ್ಯಕ್ಷರು, ಅಽಕಾರಿಗಳು ಇದ್ದರು. 
ಚಿತ್ರದುರ್ಗ

ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕಕ್ಕೆ ತಾಕೀತು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸಜ್ಜು
  • ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ
  • ಪ್ರಕೃತಿ ವಿಕೋಪ ಪರಿಶೀಲನಾ ಸಭೆ
ಚಿತ್ರದುರ್ಗ: ಬರಗಾಲ ಹಿನ್ನೆಲೆಯಲ್ಲಿ ಹೊಸದಾಗಿ ಕೊರೆಸುವ ಕೊಳವೆ ಬಾವಿಗಳಿಗೆ ೧೫ದಿನದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸ ಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಬೆಸ್ಕಾಂ ಅಽಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೊಳವೆ ಬಾವಿಗಳಿಗೆ ವಿದ್ಯುತ್ ಸಂ ಪರ್ಕ ನೀಡಿಲ್ಲ, ಮೋಟಾರ್,ಪಂಪ್‌ಗಳಿಲ್ಲವೆAಬ ದೂರುಗಳಿಗೆ ಇನ್ನೂ ಮುಂದೆ ಆಸ್ಪದವಿಲ್ಲ. ಜಿಲ್ಲೆಯಲ್ಲಿ ಜನ-ಜಾನುವಾರು ಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಿದೆ.
ತಾಲೂಕು ನೋಡಲ್ ಅಽಕಾರಿಗಳು ನೀರಿನ ಸಮಸ್ಯೆ ಇತ್ಯಾದಿಗಳ ಬಗ್ಗೆ ಡಿಸಿ, ಸಿಇಒಗಳಿಗೆ ನಿತ್ಯ ವರದಿ ಸಲ್ಲಿಸಬೇಕು. ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಶೇ.೪೨ರಷ್ಟು ಮಳೆ ಕೊರತೆ ಆಗಿದೆ. ಬಿತ್ತನೆ ಪ್ರಮಾಣ ಶೇ.೧೫ ಮೀರಿಲ್ಲ. ಎಲ್ಲ ಅಽಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಇದ್ದು, ಸಮನ್ವಯತೆಯಿಂದ ಕೆಲಸ ಮಾಡಬೇಕು. ಬರ ನಿರ್ವಹಣೆ ಕೆಲಸದಿಂದ ನುಣುಚಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬರ ನಿರ್ವಹಣÉಗೆ ಸರ್ಕಾರ ಸಜ್ಜಾಗಿದೆ. ರಾಜ್ಯದ ಪ್ರತಿ ಡಿಸಿ ಖಾತೆಗೆ ತಲಾ ೫ ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿ ದೆ. ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಕಲುಷಿತ ನೀರು ಸರಬರಾಜು ಆಗದಂತೆ ನಿಗಾ ವಹಿಸಬೇಕು.
ಕಲುಷಿತ ನೀರು ಸೇವನೆಯಿಂದ ಚಿತ್ರದುರ್ಗದ ಕವಾಡಿಗರಹಟ್ಟಿ, ರಾಜ್ಯದ ಇತರ ಪ್ರಕರಣಗಳನ್ನು ಪ್ರಸ್ತಾಪಿಸಿದ ಡಿಸಿಎಂ, ಶುದ್ಧ ಕುಡಿವ ನೀರು ಪೂರೈಕೆಗೆ ಗಮನ ಕೊಡದೆ ಏನಾದರೂ ಅನಾಹುತಗಳಾದರೆ ಅದಕ್ಕೆ ಅಽಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಕಾಯಿಲೆಗಳಿಗೆ ಸಂಬAಽಸಿದAತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಜಿಲ್ಲೆಯ ಮಳೆ ಮಾಪನ ಕೇಂದ್ರಗಳನ್ನು ದುರಸ್ತಿಗೊಳಿಸಬೇಕು ಅಥವಾ ಹೊಸ ಮಾಪನ ಕೇಂದ್ರ ಸಿದ್ಧಪಡಿಸಬೇಕು. ಅಗತ್ಯಕ್ಕೆ ಅ ನುಗುಣವಾಗಿ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಟ್ಟುಕೊಳ್ಳಬೇಕು. ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಆ್ಯಪ್ ಮೂಲಕ ರಸಗೊಬ್ಬರ ಖರೀದಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಡಿಸಿಗೆ ಸೂಚಿಸಿದರು.
ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಕೆ.ಸಿ. ವೀರೇಂದ್ರಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಡಾ.ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಎಂಎಲ್‌ಸಿಗಳಾದ ಕೆ.ಎಸ್. ನವೀನ್, ಡಿ.ಟಿ. ಶ್ರೀನಿವಾಸ್, ರಾಜ್ಯಆದಿಜಾಂಬವ ಅಭಿ ವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್,ದ್ರಾಕ್ಷಾರಸ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಽಕಾರದ ಆಯುಕ್ತೆ ಹೊನ್ನಾಂಭ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದಿತ್ಯ ಅಮ್ಲಾನ್ ಬಿಸ್ವಾಸ್, ಡಿಸಿ ಟಿ. ವೆಂಕಟೇಶ್, ಸಿಇಒ ಡಾ.ಎಸ್. ಆಕಾಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಇತರರು ಇದ್ದರು.
ಕೆಎಂಇಆರ್‌ಸಿ ಅನುದಾನ ಬಳಕೆ
ಕುಡಿವ ನೀರಿಗೆ ಕೆಎಂಇಆರ್‌ಸಿ, ಡಿಎಂಎ-ï ಅನುದಾನಗಳ ಬಳಕೆ ಕುರಿತು ಕೆಎಂಇಆರ್‌ಸಿ ಅಧ್ಯಕ್ಷರ ಜತೆ ಚರ್ಚಿಸುವುದಾಗಿ ಪರಮೇಶ್ವರ್ ಹೇಳಿದರು.
ರೈತರ ಅಲ್ಪಾವಽ ಬೆಳೆಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದು, ಬೆಳೆ ವಿಮೆ ಶೇ.೧೦೦ ಕಂತನ್ನು ರಾಜ್ಯ ಸರ್ಕಾರವೇ ಭರಿಸಲಿ. ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸÀಬೇಕೆಂದು ಕಾರಜೋಳ ಕೋರಿದರು. ಚಿತ್ರದುರ್ಗ ನಗರದ ನಿವಾಸಿ ಆಗಿರುವ ತಮ್ಮ ಮನೆಗೆ ಸರಿಯಾಗಿ ಕುಡಿವ ನೀರು ಪೂರೈಕೆ ಆಗುತ್ತಿಲ್ಲ ಎಂದರು.
ವಿವಿ ಸಾಗರ ನೀರು
ಮಳೆಯನ್ನೇ ನಂಬಿರುವ ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ವಿವಿ ಸಾಗರದಿಂದ ನೀರು ಒದಗಿಸುವಂತೆ ಶಾಸಕ ಎನ್.ವೈ. ಗೋಪಾಲಕೃಷ್ಣ ಕೋರಿದರು. ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಒದಗಿಸಲು ಸಾಧ್ಯವಾಗಲಿದೆ ಎಂದರು.
ಕೊಳವೆಬಾವಿ ಬಿಲ್
ಹೊಳಲ್ಕೆರೆ ತಾಲೂಕು ಮಲೆನಾಡು ಭಾಗಕ್ಕೆ ಹೊಂದಿಕೊAಡಿದ್ದರೂ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ತಾಲೂಕಿನಲ್ಲಿ ಶೇ.೪೫ ಕ್ಕಿಂತಲೂ ಹೆಚ್ಚಿನ ಮಳೆ ಕೊರತೆಯಾಗಿದೆ. ಕಳೆದ ೪ ತಿಂಗಳಿAದ ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನೇ ಆಶ್ರಯಿಸ ಬೇ ಕಾಗಿದೆ. ಕೊರೆಸಿದ ೧೨೭ ಬೋರ್‌ವೆಲ್‌ಗಳ ಪೈಕಿ ೨೯ ವಿ-Àಲವಾಗಿವೆ. ಸರ್ಕಾರ ಮಧ್ಯಪ್ರವೇಶಿಸಿ ಬೋರ್‌ವೆಲ್‌ಗಳ ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದು ಶಾಸಕ ಡಾ.ಎಂ.ಚAದ್ರಪ್ಪ ಹೇಳಿದರು.
ಕೆರೆ ತುಂಬಿಸುವ ಯೋಜನೆ
ವಿವಿ ಸಾಗರ ನಾಲಾ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಲಿಂಕ್‌ಲೈನ್ ಕೆಳಭಾಗಕ್ಕೆ ಬಿದ್ದು ಜನ ಮತ್ತು ಜಾನುವಾರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ನೂರಾರು ರೈತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ೨೪೪ ಕೋಟಿ ರೂ. ವೆಚ್ಚದಲ್ಲಿ ಐಮಂಗಲ ಹೋಬಳಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿ ದ್ದಾರೆ. ಜವಗೊಂಡನಹಳ್ಳಿ ೧೭ ಕೆರೆಗಳನ್ನು ತುಂಬಿಸುವ ಯೋಜನೆಗೂ ಶೀಘ್ರ ಒಪ್ಪಿಗೆ ಕೊಡಿಸುವಂತೆ ಡಿಸಿಎಂಗೆ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್ ಮನವಿ ಮಾಡಿದರು.
ವಿದ್ಯುತ್ ಸಂಪರ್ಕ ಸಮಸ್ಯೆ
ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕದ ಸಮಸ್ಯೆ ಪ್ರಸ್ತಾಪಿಸಿದ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಭದ್ರಾ ನೀರು ನಂಬಿ ನೆಡಲಾಗಿರುವ ೧೫ಲಕ್ಷ ಅಡಿಕೆ ಸಸಿಗಳ ಪೈಕಿ ಅರ್ಧದಷ್ಟು ಒಣಗಿವೆ. ಬರ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಹಾಗೂ ಚಿತ್ರದುರ್ಗ ತಾಲೂಕಿನ ೮ ಕೆರೆಗಳಿಗೆ ಭದ್ರಾ ನೀರು ತುಂಬಿಸಬೇಕಿದೆ ಎಂದು ಡಿಸಿಎಂ ಗಮನ ಸೆಳೆದರು.
ಕೇಂದ್ರ ಅನುದಾನ ಕೊಡಲಿ
ತುಂಗಾಭದ್ರಾ ಹಿನ್ನೀರಿನಿಂದ ಕುಡಿವ ನೀರು ಪೂರೈಕೆಗೆ ತಾಂತ್ರಿಕ ತೊಡಕು ಉಂಟಾಗಿದೆ. ವಿದ್ಯುತ್ ಬಿಲ್ ಕೂಡ ಪಾವತಿಸಿಲ್ಲ. ಕೊಳವೆ ಬಾವಿ ಕೊರೆಸಲು ಅವಕಾಶ ಮಾಡಿಕೊಡಿ. ಆರ್‌ಒ ಪ್ಲಾಂಟ್‌ಗಳನ್ನು ದುರಸ್ತಿ ಮಾಡಿಸಬೇಕಿದೆ. ಶೇಂಗಾ ಭಿತ್ತನೆ ದರ ಕಡಿಮೆ ಮಾಡಬೇಕು. ಕೇಂದ್ರ ಸರ್ಕಾರ ಭದ್ರಾಕ್ಕೆ ೫೩೦೦ ಕೋಟಿ ರೂ.ಕೊಡಬೇಕೆಂದು ಶಾಸಕ ಕೆ.ಟಿ.ರಘುಮೂರ್ತಿ ಕೋರಿದರು.
ಸಮನ್ವಯತೆ ಇರಲಿ
ಬರ ನಿರ್ವಹಣೆಗೆ ಅಽಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು. ಜಲಾಶಯಗಳಲ್ಲಿ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ವಾಟರ್ ಪಾಲಿಸಿ ಅಗತ್ಯವಿದೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಬಿತ್ತನೆ ಆಗಿಲ್ಲ
ಹೊಸದುರ್ಗ ತಾಲೂಕಿನಲ್ಲಿ ವಾಡಿಕೆ ಮಳೆ ಆಗದೆ ಸಿರಿಧಾನ್ಯಗಳ ಬಿತ್ತನೆ ಆಗಿಲ್ಲ. ಸದ್ಯಕ್ಕೆ ಅಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿವ ನೀರಿಗೆ ತೊಂದರೆ ಆಗಬಹುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಆತಂಕ ವ್ಯಕ್ತಪಡಿಸಿದರು.