ಚಿತ್ರದುರ್ಗದಲ್ಲಿ ಮಂಗಳವಾರ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆಯ ಪ್ರತಿಯನ್ನು ಡಿಸಿ ಟಿ. ವೆಂಕಟೇಶ್ ಬಿಡುಗಡೆಗೊಳಿಸಿದರು. ಪ್ರಹ್ಲಾದ್, ಮಂಜುನಾಥ್‌ರೆಡ್ಡಿ ಇದ್ದರು. 
ಚಿತ್ರದುರ್ಗ

ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಅಭಿಯಾನ ಆರಂಭ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ವಿಶ್ವಕ್ಕೆ ಪರಿಚಯಿಸುವ ಉದ್ದೇಶ
  • ಜಿಲ್ಲಾಽಕಾರಿ ಟಿ. ವೆಂಕಟೇಶ್ ಹೇಳಿಕೆ
  • ಹಸ್ತಪ್ರತಿಗಳ ದತ್ತಾಂಶ
ಚಿತ್ರದುರ್ಗ: ಸಂಗ್ರಹಿಸಲಾದ ಹಸ್ತಪ್ರತಿಗಳ ದತ್ತಾಂಶವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಽಕಾರಿ ಟಿ. ವೆಂಕಟೇಶ್ ತಿಳಿಸಿದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ, ಪ್ರವಾಸೋದ್ಯಮ ಇಲಾಖೆ, e್ಞÁನ ಭಾರತಂ ಮಿಷನ್‌ನಿಂದ ಸಂಗ್ರಹಿಸಲಾದ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆಯ ಪ್ರತಿಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆ ಸೇರಿ ರಾಜ್ಯದಾದ್ಯಂತ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಯೋಜನೆ ಕಾರ್ಯಾರಂಭವಾಗಿದೆ ಎಂದು ತಿಳಿಸಿದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಪ್ರಹ್ಲಾದ್ ಮಾತನಾಡಿ, ಶತಮಾನಗಳಷ್ಟು ಹಳೆ ಯ ಕೈ ಬರಹದ ಪಠ್ಯಗಳು, ಹಸ್ತಪ್ರತಿಗಳು,ದಾಖಲೆಗಳನ್ನು ತಂತ್ರe್ಞÁನದೊAದಿಗೆ ಶಾಶ್ವತವಾಗಿ ಉಳಿಸಲು ಸಮೀಕ್ಷೆ, ಸಂ ರ ಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ,ಅನುವಾದದ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಾಷ್ಟಿçÃಯ ವೇದಿಕೆಯಡಿ ತರಲಾಗುವುದು.
ಭವಿಷ್ಯದ ಪೀಳಿಗೆಗೆ ಅವುಗಳ e್ಞÁನ ಸಂಪತ್ತಿನ ಸಂರಕ್ಷಣೆ, ಬ ಳಕೆ ಡಿಜಿಟಲೀಕರಣದ ಉದ್ದೇಶವಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಹಸ್ತ ಪ್ರತಿಗಳ ಸರ್ವೇ ಕಾರ್ಯ ನಡೆದಿದೆ. ಮಠ ಮಾನ್ಯಗಳು, ಸಂಘ-ಸAಸ್ಥೆಗಳು, ವಿಶ್ವವಿದ್ಯಾಲಯಗಳು, ಪರಂಪರಾ ಗತವಾಗಿ ಸಂಗ್ರಹಿಸಿರುವ ಹಸ್ತ ಪ್ರತಿಗಳನ್ನು ಮನೆಯಲ್ಲಿ ಯಾರಾದರೂ ಇಟ್ಟುಕೊಂಡಿದ್ದರೆ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ ಲೋಡ್ ಮಾಡಬಹುದು. ಇಲ್ಲವೇ ಇಲಾಖೆಯ ಗಮನಕ್ಕಾದರೂ ತರಬಹುದು ಎಂದು ತಿಳಿಸಿದರು.
ಮೇ ಅಂತ್ಯದವರೆಗೂ ರಾಜ್ಯದಲ್ಲಿ ದಾಖಲೀಕರಣ ಅಭಿಯಾನ ನಡೆಯಲಿದೆ. ಈ ಯೋಜನೆಯಡಿ ದೇಶದಲ್ಲಿರುವ ಹಸ್ತಪ್ರತಿಗಳ ಮಾಹಿತಿಯನ್ನು ಸಾರ್ವಜನಿಕ ಪ್ರವೇಶದೊಂದಿಗೆ ಒದಗಿಸಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅವರನ್ನು ಸಂಪರ್ಕಿಸಬಹುದು. ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ರೆಡ್ಡಿ ಇದ್ದರು.