ಚಿತ್ರದುರ್ಗದಲ್ಲಿ ಶನಿವಾರ ಸಚಿವ ಟಿ.ರಘುಮೂರ್ತಿ ಅವರು ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟಿನ್ ವಾಹನ ಗಳನ್ನು ಹಸ್ತಾಂತರಿಸಿದರು. ಕೆ.ಸಿ. ವೀರೇಂದ್ರ ಪಪ್ಪಿ, ಜಿ.ಎಸ್. ಮಂಜುನಾಥ, ಪಿ.ರಘು ಇತರರು ಇದ್ದರು. 
ಚಿತ್ರದುರ್ಗ

ಗ್ರಾಮೀಣ ನೀರು, ಕಸ ವಿಲೇವಾರಿಗೆ ಡಿಜಿಟಲ್ ನಿಗಾ

ಪ್ರಮುಖ ಮುಖ್ಯಾಂಶಗಳು

  • ನೀರ್‌ಲ್ಯಾಬ್ ಅತ್ಯಂತ ಉಪಯುಕ್ತ
  • ೫೫ ಎಲ್‌ಪಿಸಿಡಿ ಪ್ರಮಾಣದ ನೀರು
  • ಮೊಬೈಲ್ ಕ್ಯಾಂಟೀನ್ ವಾಹನಗಳ ವಿತರಣೆ

ಚಿತ್ರದುರ್ಗ:

ಜಿಲ್ಲೆಯ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಸಮರ್ಪಕವಾಗಿ ತಲುಪುತ್ತಿದೆಯೇ? ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯುತ್ತಿದೆಯೇ ಎಂಬುದರ ಕುರಿತಂತೆ ಆನ್‌ಲೈನ್ ಉಸ್ತುವಾರಿಗೆ ನೀರ್‌ಲ್ಯಾಬ್ ಅತ್ಯಂತ ಉಪಯುಕ್ತ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.

ಜಿಪಂ ಕಚೇರಿ ಆವರಣದಲ್ಲಿ ಶನಿವಾರ ನೂತನವಾಗಿ ಸ್ಥಾಪಿಸಲಾಗಿರುವ ನೀರ್‌ಲ್ಯಾಬ್(ಡೇಟಾ ಸೆಂಟರ್)ಉದ್ಘಾಟಿಸಿ ಮಾತ ನಾಡಿ, ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ವ್ಯವಸ್ಥೆ ಕುರಿತಂತೆ ಜನಪ್ರತಿನಿಽಗಳು,ಸಿಇಒ ಹಾಗೂ ಸಂಬAಽಸಿದ ಅಽಕಾರಿಗಳು ಆನ್‌ಲೈನ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ.
ಪ್ರತಿಯೊಬ್ಬರಿಗೂ ನಿಗದಿತ ೫೫ ಎಲ್‌ಪಿಸಿಡಿ ಪ್ರಮಾಣದ ನೀರು ಸಿಗುತ್ತಿದೆ ಯೇ ಅಥವಾ ಯಾವ ಗ್ರಾಮಗಳಲ್ಲಿ ಕೊರತೆ ಎದು ರಾಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಿ ತಕ್ಷಣವೇ ಸಮಸ್ಯೆ ಬಗೆಹರಿಸಲು ಈ ವ್ಯವಸ್ಥೆ ನೆರವಾಗಲಿದೆ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ಸಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ನೈರ್ಮಲ್ಯ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕೂಡ ಲ್ಯಾಬ್ ನೆರವಾಗಲಿದೆ ಎಂದರು.
ಜಿಪA ಸಿಇಒ ಡಾ.ಎಸ್. ಆಕಾಶ್ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ವಲಯದ ಕಾಮಗಾರಿಗಳಿಗೆ ವೇಗ ನೀಡುವ ಉದ್ದೇಶದಿಂದ ಈ ಲ್ಯಾಬ್ ಸ್ಥಾಪಿಸಲಾಗಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ, ರಾಜ್ಯ ಸ-Áಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರ ಅಧ್ಯಕ್ಷ ಆರ್. ಶಿವಣ್ಣ, ಜಿಲ್ಲಾಽಕಾರಿ ಟಿ. ವೆಂಕಟೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅಮರನಾಥ್‌ಜೈನ್ ಇದ್ದರು.

ಮೊಬೈಲ್ ಕ್ಯಾಂಟೀನ್ ವಾಹನಗಳ ವಿತರಣೆ


ನಗರದ ತರಾಸು ರಂಗಮAದಿರದ ಆವರಣದಲ್ಲಿ ಶನಿವಾರ ಪ್ರವಾಸೋದ್ಯಮ ಇಲಾಖೆಯ ೨೦೨೪-೨೫ನೇ ಸಾಲಿನ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ -Àಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ವಿತರಿಸಿದರು.
ಸ್ವಯಂ ಉದ್ಯೋಗ ಕಲ್ಪಿಸಲು ಆಯ್ಕೆಯಾದ -Àಲಾನುಭವಿಗಳಿಗೆ ಒಂದು ತಿಂಗಳ ಕೌಶಲಾಭಿವೃದ್ಧಿ ತರಬೇತಿಯೊಂದಿಗೆ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ತಲಾ ೫ ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ. ಪರಿಶಿಷ್ಟ ಜಾತಿಯ ಐವರು ಹಾಗೂ ಪರಿಶಿಷ್ಟ ಪಂಗಡದ ನಾಲ್ವರ ಸಹಿತ ೯ -Àಲಾನುಭವಿಗಳಿಗೆ ಸಚಿವರು ವಾಹನಗಳನ್ನು ಹಸ್ತಾಂತರಿಸಿದರು.