ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಜನಗಣತಿಗೆ ಸಂಬAಽಸಿದ ತರಬೇತಿ ಕಾರ್ಯಾಗಾರದಲ್ಲಿ ಕೆ.ಜೆ. ಕಾಂತರಾಜ್, ಸಿ.ಎಸ್. ಗಾಯತ್ರಿ, ಬೀಬಿ -Áತಿಮಾ, ಮಲ್ಲಿಕಾರ್ಜುನ ನಾಯಕ, ರಾಮಚಂದ್ರಪ್ಪ, ರೇವಣ್ಣ ಇತರರು ಇದ್ದರು.
ಏಪ್ರಿಲ್ ೧ರಿಂದ ಜನಗಣತಿ ಪ್ರಕ್ರಿಯೆ ಆರಂಭ| ಉತ್ತಮ ಜನಪರ ಯೋಜನೆಗಳಿಗೆ ಭದ್ರ ಬುನಾದಿ
ಚಿತ್ರದುರ್ಗ: ದೇಶದ ಅಭಿವೃದ್ಧಿ ದೃಷ್ಟಿಯಿಂದ ಜನಗಣತಿ ಅತ್ಯಂತ ಮಹತ್ವದ್ದಾಗಿದೆ ಎಂದು ಉಪವಿಭಾಗಾಽಕಾರಿ ಕೆ.ಜೆ. ಕಾಂತ ರಾಜ್ ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಭಾರತದ ಜನಗಣತಿ-೨೦೨೭ಕ್ಕೆ ಸಂಬAಽಸಿದ ಕ್ಷೇತ್ರಮಟ್ಟದ ತರಬೇತುದಾರರ ೩ ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ತಂತ್ರಾAಶದ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕ್ಷೇತ್ರಮಟ್ಟದ ಅಽಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಕ್ಷೇತ್ರಮಟ್ಟದ ತರಬೇತುದಾರರು ಗಣತಿದಾರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿದರೆ ಜನಗಣತಿ ಕಾರ್ಯ ಯಶಸ್ವಿ ಯಾಗಲಿದೆ. ಈ ಹಿಂದಿದ್ದ ಮ್ಯಾನುಯಲ್ ಜನಗಣತಿ ಬದಲು ಈ ಬಾರಿ ಆ್ಯಪ್ ಮೂಲಕ ಡಿಜಿಟಲ್ ರೂಪದಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. ಇದರಿಂದ ಮಾಹಿತಿಯಲ್ಲಿ ತಪ್ಪುಗಳನ್ನು ತಡೆಯಲು ಸಾಧ್ಯವಾಗಲಿದೆ. ೨೦೨೧ರಲ್ಲಿ ನಡೆಯಬೇಕಿದ್ದ ಈ ಪ್ರಕ್ರಿಯೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ ಎಂದರು.
ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಸ್ವಯಂ ಗಣತಿ ಆಯ್ಕೆ ನೀಡಲಾಗಿದೆ. ಗಣತಿದಾರರು ಇದರ ಬಗ್ಗೆ ಅರಿವು ಮೂಡಿಸಬೇಕು. ಈ ಹಿಂದೆ ನಡೆದ ಸಾಮಾಜಿಕ ಮತ್ತು ಆರ್ಥಿಕ ಗಣತಿಯಲ್ಲಿ ಆದ ಲೋಪದೋಷಗಳು ಈ ಬಾರಿ ಮರುಕಳಿಸ ಬಾರದು. ಗಣತಿದಾರರು ಕಡ್ಡಾಯವಾಗಿ ಮನೆ, ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ ಮಾತನಾಡಿ, ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದು, ಸರ್ಕಾರಕ್ಕೆ ಉತ್ತಮ ಜನಪರ ಯೋಜನೆಗಳನ್ನು ರೂಪಿಸಲು ಜನಗಣತಿ ಬುನಾದಿಯಾಗಲಿದೆ ಎಂದರು.
ಏಪ್ರಿಲ್ ೧ರಿಂದ ೧೫ರವರೆಗೆ ಸ್ವಯಂ ಗಣತಿ ಪ್ರಕ್ರಿಯೆ, ೧೫ ರಿಂದ ಮೇ ೧೫ ರವರೆಗೆ ಮನೆಗಳ ಪಟ್ಟಿ ತಯಾರಿಕೆ ಕಾರ್ಯ ನಡೆಯಲಿದೆ. ನಂತರ ಅಕ್ಟೋಬರ್‌ನಿಂದ ೨ ತಿಂಗಳು ಜನಸಂಖ್ಯೆ ಗಣತಿ ಕಾರ್ಯ ನಡೆಯಲಿದೆ. ಈ ಪ್ರಕ್ರಿಯೆ ಹಂತ ಹಂತವಾಗಿ ೨೦೨೭ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು. ಚುನಾವಣಾ ತಹಸೀಲ್ದಾರ್ ಬೀಬಿ -Áತಿಮಾ, ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ, ಮಾಸ್ಟರ್ ಟ್ರೆÊನರ್‌ಗಳಾದ ರಾಮಚಂದ್ರಪ್ಪ, ರೇವಣ್ಣ ಇತರರು ಇದ್ದರು.