`ಡೆಸ್ಟಿನಿ-೨೦೨೬ 
ಚಿತ್ರದುರ್ಗ

ಜ.೧೦ರಿಂದ ದೇವರಾಜ್‌ಅರಸ್ ಶಿಕ್ಷಣ ಸಂಸ್ಥೆಯ `ಡೆಸ್ಟಿನಿ' ಚಾಲನೆ

ಪ್ರಮುಖ ಮುಖ್ಯಾಂಶಗಳು

  • ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
  • ಪ್ರಸಿದ್ಧ ಗಾಯಕರು, ಕಲಾವಿದರು ಭಾಗಿ
  • ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
ಚಿತ್ರದುರ್ಗ: ನಗರದ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಯಿAದ `ಡೆಸ್ಟಿನಿ-೨೦೨೬' ಸಮಾರಂಭ ಜ.೧೦ರಿಂದ ೧೩ರವರೆಗೆ ಸಂಸ್ಥೆ ಆವರಣದಲ್ಲಿ ಜರುಗಲಿದೆ.
ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಮನರಂಜನೆಯ ಈ ಅದ್ದೂರಿ ಕಾರ್ಯಕ್ರಮಕ್ಕೆ ೧೦ ರಂದು ಸಂಜೆ ೫ಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಡಿ. ಸುಧಾಕರ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡುವರು. ಸಂಸ್ಥೆ ಸ್ಥಾಪಕ ಕಾರ್ಯದರ್ಶಿ, ಶಾಸಕ ಡಾ.ಎಂ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ತಹಸೀಲ್ದಾರ್ ಬಿ.ಎಂ. ಗೋವಿಂದರಾಜು, ಹಿರಿಯ ಉಪ ನೋಂದಣಾಽಕಾರಿ ತಿಪ್ಪೇರುದ್ರಪ್ಪ, ಸಂಸ್ಥೆ ಆಡಳಿತಾಽಕಾರಿ ಎಚ್. ಚಂದ್ರಕಲಾ, ಅಧ್ಯಕ್ಷೆ ಎಂ.ಸಿ. ಯಶಸ್ವಿನಿ, ಸಿಇಒ ಎಂ.ಸಿ. ರಘುಚಂದನ್, ಡಿಡಿಪಿಐ ಎಂ.ಆರ್. ಮಂಜುನಾಥ್, ಮೈಸೂರು ನೈಋತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಿ.ಎಂ. ಗಿರೀಶ್ ಉಪಸ್ಥಿತರಿರುವರು.
ಸಂಸ್ಥೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಡೀಪ್ ಬ್ಯಾಂಡ್ಸ್ ಅವರಿಂದ ವಾದ್ಯ ಸಂಗೀತ ಸಂಜೆ ಹಾಗೂ ಕಾಮಿಡಿ ಕಿಲಾಡಿಗಳು ತಂಡದಿAದ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
೧೧ರಂದು ಸಂಜೆ ೫ಕ್ಕೆ ಗಾಯಕ ರಾಜೇಶ್‌ಕÊಷ್ಣನ್ ಅವರ ತಂಡದಿAದ ಸಂಗೀತ ರಸದೌತಣ, ೧೨ ರಂದು ಸಂಜೆ ೫ಕ್ಕೆ ಕನ್ನಡ ರಾಪರ್ ಎಂ.ಸಿ. ಬಿಜ್ಜು ಅವರಿಂದ ರಾಪ್‌ರಿಟ್ರೀಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ೧೩ ರಂದು ಸಂಜೆ ೫ಕ್ಕೆ ಗಾಯಕಿ ದಿವ್ಯಾ ರಾಮಚಂದ್ರ ಅವರ ತಂಡದಿAದ ಸಂಗೀತ ಹಾಗೂ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು ಎಲ್‌ಕೆ ಜಿಯಿಂದ ಪದವಿ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.