ವಿವಿ ಸಾಗರ ಜಲಾಶಯದ ಕೋಡಿ ಬಿದ್ದಿರುವ ಫೈಲ್‌ಪೋಟೊ 
ಚಿತ್ರದುರ್ಗ

೧೪೨ ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ವಿವಿ ಸಾಗರ ಕೋಡಿ ಬಳಿ ೨೫ ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ
  • ಡಿಸಿ ಕಚೇರಿ ನೂತನ ಕಟ್ಟಡ ಪೂರ್ಣಕ್ಕೂ ಕ್ರಮ
  • ಮುಖ್ಯಮಂತ್ರಿ ಮೂಲ ಸೌಕ ರ್ಯಾಭಿವೃದ್ಧಿ ಯೋಜನೆ
ವಿಜಯವಾಣಿ ವಿಶೇಷ ಚಿತ್ರದುರ್ಗ
ಜಿಲ್ಲಾ ಮುಖ್ಯರಸ್ತೆಗಳ(ಎಂಡಿಆರ್)ಅಭಿವೃದ್ಧಿಗೆ ಲೋಕೋಯೋಗಿ ಇಲಾಖೆ ಮುಂದಡಿ ಇಟ್ಟಿದೆ. ಮುಖ್ಯಮಂತ್ರಿ ಮೂಲ ಸೌಕ ರ್ಯಾಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ೧೪೨ ಕೋಟಿ ರೂ. ವೆಚ್ಚದಲ್ಲಿ ೫೨ ರಸ್ತೆ ಡಾಂಬರೀಕರಣ ಕಾ ಮಗಾರಿಗಳ ಅನುಷ್ಠಾನಕ್ಕೆ ಮುಂದಾಗಿದೆ.
೨೦೨೫-೨೬ನೇ ಸಾಲಿನಲ್ಲಿ ಈ ಯೋಜನೆಯಡಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಅಲ್ಲಿ ಕೈಗೊಳ್ಳಬೇಕಾಗಿರುವ ಡಾಂಬ ರೀಕರಣ ಸಹಿತ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವೂ ಬಿಡುಗಡೆಯಾಗಿದೆ. ಈಗಾಗಲೇ ಅನು ಮೋದಿತ ೫೨ ಕಾಮಗಾರಿಗಳ ಪೈಕಿ ೪೨ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ ಇನ್ನುಳಿದ ಕಾಮಗಾರಿಗಳಿಗೆ ಸಂ ಬಂಽಸಿದಂತೆ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೫ ಕೋಟಿ ರೂ.ವೆಚ್ಚದೊಂದಿಗೆ ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿಗೆ ೧೩ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕ್ರಮವಾಗಿ ಚಳ್ಳಕೆರೆ -೨೭ ಕೋಟಿ ರೂ. ವೆಚ್ಚದಲ್ಲಿ ೫ ಕಾಮಗಾರಿಗಳು. ಚಿತ್ರದುರ್ಗ-೩೨.೫೦ ಕೋಟಿ ರೂ.ನಲ್ಲಿ ೧೨ ಕಾಮಗಾರಿಗಳು.
ಹಿರಿಯೂರು-೨೫ ಕೋಟಿ ರೂ.ಗಳಲ್ಲಿ ೬ ಕಾಮಗಾರಿಗಳು. ಹೊಸದುರ್ಗ ೧೨.೫೦ ಕೋಟಿ ರೂ.ಮೊತ್ತದಲ್ಲಿ ೨ ಕಾಮಗಾರಿಗಳು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೫.೦೫ ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿಗೆ ೧೪ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ. ೨೫ ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ
ಹಿರಿಯೂರು ತಾಲೂಕು ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಸಮೀಪ(ಹೊಸದುರ್ಗ-ಹಾರನಕಣಿವೆ ಶ್ರೀರಂಗನಾಥ ಸ್ವಾ ಮಿ ದೇವಾಲಯದ ಬಳಿ)ಅಂದಾಜು ೨೫ ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ೧೬೪ ಮೀಟರ್ ಉದ್ದ, ೧೨ ಮೀಟರ್ ಅಗಲ ಹಾಗೂ ೪ ಮೀಟರ್ ಎತ್ತರದ ಸೇತುವೆ ನಿರ್ಮಾಣಕ್ಕೆ ಇಲಾಖೆ ರಾಜ್ಯ ಎಸ್ಟಿಮೇಟ್ ಕಮಿಟಿ ಒಕೆ ಮಾಡಿದೆ. ಜಲಾಶಯ ಕೋಡಿ ಬಿದ್ದಂಥ ಸಂದರ್ಭದಲ್ಲಿ ಅಂದಾಜು ಒಂದು ತಿಂಗಳ ಕಾಲ ಲಕ್ಕಿಹಳ್ಳಿ-ಮಾರಿಣಿಕವೆ ನಡುವಿನ ಸಂಚಾರಕ್ಕೆ ಅಡ್ಡಿ ಆಗುತ್ತಿತ್ತು. ಸೇತುವೆ ನಿರ್ಮಾಣದಿಂದ ಅದು ತಪ್ಪಲಿದೆ.
ಡಿಸಿ ಕಚೇರಿ ನೂತನ ಕಟ್ಟಡ
ಚಿತ್ರದುರ್ಗ ಹೊರವಲಯದ ಇಂಗದಾಳ್ ಬಳಿ ನಿರ್ಮಿಸುತ್ತಿರುವ ಚಿತ್ರದುರ್ಗ ಡಿಸಿ ಕಚೇರಿ ನೂತನ ಕಟ್ಟಡಗಳಲ್ಲಿ ಕೆಲವು ಕಾಮ ಗಾರಿಗಳು ಬಾಕಿ ಉಳಿದಿವೆ. ವಾಹನಗಳ ನಿಲುಗಡೆಗೆ ಅಗತ್ಯವಿರುವ ರಸ್ತೆ ನಿರ್ಮಾಣ ಸಹಿತ ಬಾಕಿ ಕಾಮಗಾರಿಗಳನ್ನು ತ್ವರಿತ ವಾಗಿ ಪೂರ್ಣಗೊಳಿಸಬೇಕಿದೆ. ಆದರೆ, ಗುತ್ತಿಗೆದಾರನಿಗೆ ಬಿಲ್ ಬಾಕಿ ಇರುವುದು ಕಾಮಗಾರಿ ಪೂರ್ಣಗೊಳಿಸಲು ತೊಡಕಾಗಿದೆಯಂತೆ. ಜಿಲ್ಲಾಡಳಿತಕ್ಕೆ ಕಟ್ಟಡವನ್ನು ಇನ್ನೂ ಹಸ್ತಾಂತರಿಸದೆ ಇರುವುದಕ್ಕೆ ಇದು ಕೂಡ ಕಾರಣವಾಗಿದೆ.
"

ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮೀಣ ರಸ್ತೆಗಳ ಸಂಚಾರ ವ್ಯವಸ್ಥೆ ಸುಗಮವಾಗಲಿದೆ. ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಗುರುತಿಸಿರುವ ಆಕ್ಸಿಡೆಂಟ್‌ಸಾಟ್‌ಗಳನ್ನು ಗಮನದಲ್ಲಿ ಇಟ್ಟು ಕೊಂಡು ಅವುಗಳನ್ನು ಸರಿಪಡಿಸುವುದು, ಸೈನ್ ಬೋರ್ಡ್ಗಳನ್ನು ಅಳವಡಿಸುವುದು ಸೇರಿ ಅಪಘಾತಗಳ ನಿಯಂತ್ರಣ ನಿಟ್ಟಿನಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

— ಆರ್. ನಾಗರಾಜ್, ಇಇ ಲೋಕೋಪಯೋಗಿ ಇಲಾಖೆ ,ಚಿತ್ರದುರ್ಗ