ಚಿತ್ರದುರ್ಗದಲ್ಲಿ ಗುರುವಾರ ಅಲ್ಪಸಂಖ್ಯಾತರ ಸಹಕಾರ ಸಂಘಗಳ ಪದಾಽಕಾರಿಗಳು, ನಿರ್ದೇಶಕರು, ಮುಖ್ಯಕಾರ್ಯ ನಿರ್ವಹಣಾಽಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಜಿ.ಇ. ಅಜ್ಜಪ್ಪ, ಆರ್. ಮಲ್ಲೇಶಪ್ಪ, ಎಸ್.ಎನ್.ತಿಪ್ಪೇಸ್ವಾಮಿ, ಎಚ್.ಎಂ. ಮಂಜುನಾಥಪ್ಪ, ಎಚ್.ಎಸ್.ನಾಗರಾಜಯ್ಯ, ಎಚ್.ಬಿ. ಮಂಜುನಾಥ್, ಮಹಬೂಬ್‌ಅಲಿ ಮತ್ತಿತರರು ಇದ್ದರು.
- ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಅಜ್ಜಪ್ಪ ಅಭಿಮತ
- ಸಹಕಾರಿಗಳಿಗೆ ದುರ್ಗದಲ್ಲಿ ವಿಶೇಷ ತರಬೇತಿ ಕಾರ್ಯಾಗಾರ
- ಜಿಲ್ಲಾ ಸಹಕಾರ ಯೂನಿಯನ್
ಶಿಸ್ತಿನ ಹಣಕಾಸು ವಹಿವಾಟು ಇದ್ದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಇ. ಅಜ್ಜಪ್ಪ ಹೇಳಿದರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ವಿಭಾಗದ ಆಯ್ದ ಅಲ್ಪಸಂಖ್ಯಾತರ ಸಹಕಾರ ಸಂಘಗಳ ಪದಾಽಕಾರಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಽಕಾರಿಗಳಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂಘಟಿತ ಮನೋಭಾವದಿಂದ ಸಹಕಾರಿಗಳು ಸಹಕಾರ ಸಂಘಗಳು ಹಾಗೂ ಸಹಕಾರಿಗಳ ಅಭಿವೃದ್ಧಿಗೆ ಶ್ರಮಿಸಬೇಕು. ಈ ನಿಟ್ಟಿ ನಲ್ಲಿ ತರಬೇತಿ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್. ಮಲ್ಲೇಶಪ್ಪ, ರಾಜ್ಯ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಸಹಕಾರಿಗಳಿಗೆ ಅಗತ್ಯ ತರಬೇತಿ ಕೊಡುತ್ತಾ ಬಂದಿವೆ. ಈ ತರಬೇತಿ ಸಹಕಾರ ಕಾಯ್ದೆ, ಕಾನೂನುಗಳು ಹಾಗೂ ಅಲ್ಪಸಂಖ್ಯಾತರ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಯಲು ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಸ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಕಾನೂನು ತಿದ್ದುಪಡಿ ಮೂಲಕ ಸಹಕಾರ ಸಂಘಗಳ ಚುನಾವಣೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದರು.
ಜಯಶ್ರೀ ಪಿ. ಹುನಗುಂದ ನಿರೂಪಿಸಿದರು. ನಾಗರಾಜ್‌ಪಾಟೀಲ್ ಸ್ವಾಗತಿಸಿ, ಸೌಮ್ಯ ವಂದಿಸಿದರು.