ಚಿತ್ರದುರ್ಗಕ್ಕೆ ಆಗಮಿಸಿದ್ದ ಸ್ವದೇಶಿ ವಸ್ತು ಬಳಕೆ ಜಾಗೃತಿ ಜಾಥಾ, ಗುರುವಾರ ಕೋಟೆ ಬಳಿಯಿಂದ ನಗರದ ವಿವಿಧೆಡೆ ಸಂಚರಿಸಿ ಹಿರಿ ಯೂರು ಕಡೆಗೆ ತೆರಳಿತು. ರವಿ ಮುನಿಸ್ವಾಮಿ, ರಮೇಶ್ ಜಾಗತಾಪ್, ನೀಲಕಂಠೇಶ್, ರಮೇಶ್ ನರಸಾಯಿ, ಸಹಸ್ರನಾಮ ಐಯ್ಯರ್, ಕೆ.ಎಸ್.ನವೀನ್ ಇತರರು ಇದ್ದರು.
- ದುರ್ಗದಿಂದ ಬೆಂಗಳೂರು ಕಡೆಗೆ ಪ್ರಯಾಣ
- ೩೫೦೦ ಕಿ.ಮೀ.ದೂರ ಕ್ರಮಿಸುವ ಗುರಿ
- ಸ್ವದೇಶಿ ಸೈಕಲ್ ಜಾಗರಣಾ ಸಮಿತಿ
ಚಿತ್ರದುರ್ಗ: ಸ್ವದೇಶಿ ಉತ್ಪನ್ನಗಳ ಬಳಕೆಯಿಂದ ನಮ್ಮ ರೈತರ, ವ್ಯಾಪಾರಿಗಳ ಆರ್ಥಿಕ ಶಕ್ತಿ ವೃದ್ಧಿಗೊಂಡು ದೇಶದ ಆರ್ಥಿಕ ಪರಿಸ್ಥಿತಿ ಕೂಡ ಉನ್ನತಿ ಹೊಂದಲಿದೆ ಎಂದು ಸ್ವದೇಶಿ ಸೈಕಲ್ ಜಾಗರಣಾ ಸಮಿತಿ ಮುಖಂಡ, ಬ್ರಿಗೇಡಿಯರ್ ರವಿ ಮುನಿಸ್ವಾಮಿ ಹೇಳಿದರು.
ಸ್ವದೇಶಿ ವಸ್ತುಗಳ ಬಳಕೆ ಕುರಿತಂತೆ ಸಮಿತಿ ಹಮ್ಮಿಕೊಂಡಿರುವ ಬೈಸಿಕಲ್ ಜಾಥಾ, ಗುರುವಾರ ಕೋಟೆ ಬಳಿಯಿಂದ ಯಾತ್ರೆ ಮುಂದುವರಿಸುವ ವೇಳೆ ಮಾತನಾಡಿದರು. ಸ್ವದೇಶಿ ವಸ್ತುಗಳ ಬಳಕೆ ಜಾಗÊತಿಗಾಗಿ ಹಮ್ಮಿಕೊಂಡಿರುವ ೩೫ ದಿನಗಳ ಜಾಥಾ, ಸ್ವದೇಶಿ ವಸ್ತು ಬಳಸಿ, ದೇಶ ಬೆಳೆಸಿ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಲ್ಲಿ ೩೫೦೦ ಕಿ.ಮೀ.ದೂರ ಕ್ರಮಿಸುವ ಗುರಿ ಹೊಂದಿದೆ ಎಂದರು.
ಜಾಗತೀಕರಣದಿAದಾಗಿ ಜನರಲ್ಲಿ ಬೆಳೆದಿರುವ ವಿದೇಶಿ ವಸ್ತುಗಳ ಮೋಹವನ್ನು ಹೋಗಲಾಡಿಸುವ ಉದ್ದೇಶದ ಜಾಥಾಕ್ಕೆ ಬೆಂಗ ಳೂರಲ್ಲಿ ಕಳೆದ ಡಿಸೆಂಬರ್ ೧೩ರಂದು ಚಾಲನೆ ದೊರಕಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ತಲುಪಲಿದೆ. ಈಗಾಗಲೇ ಅಂದಾಜು ೩೦೦೦ ಕಿ.ಮೀ.ದೂರ ಕ್ರಮಿಸಿದ್ದು, ಹಿರಿಯೂರು, ಶಿರಾ, ತುಮಕೂರು, ಕೋಲಾರ ಮೂಲಕ ಬೆಂಗಳೂರಿನಲ್ಲಿ ಜ.೧೯ ರಂದು ಜಾಥಾ ಸಮಾಪನಗೊಳ್ಳಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ನಮ್ಮ ದೇಶ ಈಗ ಸ್ವಾವಲಂಬಿಯಾಗಿದೆ. ಈ ಮುಂಚೆ ನಮಗೆ ಬೇ ಕಾದ ವಿವಿಧ ವಸ್ತುಗಳಿಗೆ ಹೊರ ದೇಶಗಳನ್ನು ಅವಲಂಬಿಸಬೇಕಿತ್ತು. ಆದರೆ ಈಗ ನಮ್ಮಲ್ಲೇ ಎಲ್ಲ ಉತ್ಪನ್ನಗಳು ತಯಾರಾಗು ತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವದೇಶಿ ವಸ್ತುಗಳ ಉತ್ಪನ್ನ ಹಾಗೂ ಬಳಕೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಜಾಥಾದಲ್ಲಿ ಸೇನೆ ಉನ್ನತ ಮಟ್ಟದ ನಿವÊತ್ತ ಅಽಕಾರಿಗಳಿದ್ದಾರೆ ಎಂದರು.
ಸುಬೇದಾರ್ ರಮೇಶ್ ಜಾಗತಾಪ್, ಕಮಾಂಡರ್ ನೀಲಕಂಠೇಶ್, ರಮೇಶ್ ನರಸಾಯಿ, ಸಹಸ್ರನಾಮ ಐಯ್ಯರ್, ಬಿಜೆಪಿ ಮುಖಂಡರಾದ ಎ.ಮುರಳಿ, ಸಂಪತ್‌ಕುಮಾರ್, ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ವಿಎಚ್‌ಪಿಯ ರುದ್ರೇಶ್, ಕ್ರೀಡಾಪಟುಗಳಾದ ಚೇತನ್, ಪ್ರಶಾಂತ, ಲೀಲಾಧರ್ ಠಾಕೂರ್, ಕೋಟ್ಲ ದೇವರಾಜ್ ಇತರರು ಇದ್ದರು.
ಕೋಟೆ ಬಳಿಯಿಂದ ಪ್ರಾರಂಭವಾದ ತರಾಸು ಬೀದಿ, ಉಚ್ಚಂಗಿ ಯಲ್ಲಮ್ಮ ದೇವಾಲಯ ರಸ್ತೆ, ಚಿಕ್ಕಪೇಟೆ, ಆನೆಬಾಗಿಲು, ಸಂತೇ ಪೇಟೆ ವÊತ್ತ, ಬಿ.ಡಿ.ರಸ್ತೆ, ಎಸ್‌ಬಿಎಂ ಸರ್ಕಲ್, ಮಹಾವೀರ ವÊತ್ತ, ಡಾ.ಬಿ.ಆರ್.ಅಂಬೇಡ್ಕರ್ ವÊತ್ತ, ಮದಕರಿ ನಾಯಕ ವ Êತ್ತ, ಜಿಲ್ಲಾಸ್ಪತ್ರೆ ಮುಂಭಾಗ, ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ರಸ್ತೆ, ಪಂಚಾಚಾರ್ಯ ಕಲ್ಯಾಣ ಮಂಟಪ ರಸ್ತೆ, ಚಳ್ಳಕೆರೆ ಗೇಟ್ ಮೂಲಕ ದೇವರಾಜ ಅರಸು ಶಿಕ್ಷಣ ಸಂಸ್ಥೆ ಬಳಿಯ ಸೈನಿಕ ಉದ್ಯಾನದಿಂದ ಹಿರಿಯೂರಿನತ್ತ ತೆರಳಿತು.