ಚಿತ್ರದುರ್ಗದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ವಿಜಯವಾಣಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಅವರನ್ನು ಗೌರವಿಸಲಾಯಿತು. ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಪ್ರೊ.ಎಂ.ಆರ್. ಜಯಲಕ್ಷಿ÷್ಮÃ, ಡಾ. ಮುರುಗೇಂದ್ರಪ್ಪ, ಡಾ.ಎಂ.ಕೆ. ಪ್ರಭುದೇವ್ ಮತ್ತಿತರರು ಇದ್ದರು. 
ಚಿತ್ರದುರ್ಗ

ಅನ್ಯಾಯ ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಡಾ. ಮುರಗೇಂದ್ರಪ್ಪ ಸಲಹೆ
  • ಕೆ.ಎಂ.ವೀರೇಶ್,ಪ್ರತಿಭಾವAಥ ವಿದ್ಯಾರ್ಥಿಗಳಿಗೆ ಸನ್ಮಾನ
  • ವಿಜಯವಾಣಿ ವಿಜಯರತ್ನ ಪ್ರಶಸ್ತಿ
ಚಿತ್ರದುರ್ಗ: ಪ್ರಶ್ನಿಸುವ ಮತ್ತು ಹೋರಾಟದ ಮನೋಭಾವ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ ಎಂದು ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ಕುವೆಂಪು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಮುರುಗೇಂದ್ರಪ್ಪ ಹೇಳಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ಬಿ.ಇಡಿ. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅನ್ಯಾಯ ಖಂಡಿಸುವ, ಅದರ ವಿರುದ್ಧ ಹೋರಾಡುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ. ಪ್ರಭುದೇವ್ ಅವರ ತಂದೆ, ತಾಯಿ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿ ಸಲಾಯಿತು. ವೀರೇಶ್, ಎಚ್.ಬನ್ನೆಪ್ಪ, ಸುಹಾನಾ ಹಾಗೂ ಡಿ.ಕೆ. ಶ್ರೇಯಾ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಮುರುಘಾಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ಹಾಗೂ ಪ್ರಭುದೇವ್ ಮಾತನಾಡಿದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅವರು ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ವಿಜಯವಾಣಿ ವಿಜಯರತ್ನ ಪ್ರಶಸ್ತಿ ಪುರಸ್ಕೃತ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯೆ ಪ್ರೊ. ಎಂ.ಆರ್. ಜಯಲಕ್ಷಿ÷್ಮÃ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಪದಾಽಕಾರಿಗಳಿಗೆ ಪ್ರಾಧ್ಯಾಪಕ ಒ. ಮಂಜುನಾಥ್ ಪ್ರತಿಜ್ಞಾವಿಽ ಬೋಽಸಿದರು. ಸಂಸ್ಥೆ ನಿರ್ದೇಶಕ ಕೆ.ಎಂ. ಚೇತನ್, ಉಪ ಪ್ರಾಚಾರ್ಯ ಎಚ್.ಎನ್. ಶಿವಕುಮಾರ್, ಪ್ರಾಧ್ಯಾಪಕ ಡಾ. ಹನುಮಂತರೆಡ್ಡಿ, ಪ್ರೊ.ಎಚ್.ಎನ್. ಶಿವಕುಮಾರ, ವೈ.ಟಿ. ಗೀತಾ ಇತರರು ಇದ್ದರು.