ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಡೆಂಘೆ ನಿಯಂತ್ರಣ ಸಂಬAಧ ಆರೋಗ್ಯ ಇಲಾಖೆ ಅಽಕಾರಿಗಳು, ಸಿಬ್ಬಂದಿ
- ಐದು ತಾಲೂಕುಗಳ ನಗರ, ಪಟ್ಟಣ ಪ್ರದೇಶಗಳಲ್ಲಿ ಸೊನ್ನೆ
- ಇಲಾಖೆಯಿಂದ ಜಾಗೃತಿಗೆ ಮತ್ತಷ್ಟು ವೇಗ
- ಮಳೆಗಾಲದಲ್ಲಿ ಕಟ್ಟೆಚ್ಚರ
ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೬ರಲ್ಲಿ ಕಳೆದ ಐದು ತಿಂಗಳ ಅವಽಯಲ್ಲಿ ಡೆಂಘೆ ಪ್ರಕರಣಗಳು ಕಡಿಮೆಯಾಗಿ ದ್ದರೂ ನಿರ್ಲಕ್ಷಿಸದೆ ಮಳೆಗಾಲದಲ್ಲಿ ಕಟ್ಟೆಚ್ಚರ ವಹಿಸುವ ಕಡೆ ಇಲಾಖೆ ಹೆಜ್ಜೆ ಇಟ್ಟಿದೆ.
ಆರೋಗ್ಯ ಇಲಾಖೆ ಅಽಕಾರಿಗಳ ಸೂಚನೆ ಮೇರೆಗೆ ಜಿಲ್ಲಾದ್ಯಂತ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವ ಕೆಲಸ ಚುರುಕು ಪಡೆದಿದೆ. ಅಽಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನಲ್ಲಿ ತಲಾ ೯ ಸೇರಿ ಜಿಲ್ಲಾದ್ಯಂತ ಪ್ರಸಕ್ತ ಜನವರಿಯಿಂದ ಮೇ ತಿಂಗಳವರೆಗೂ ೨೯ ಪ್ರಕರಣ ಕಂಡು ಬಂದಿವೆ. ಉಳಿದಂತೆ ಚಳ್ಳಕೆರೆ ೭, ಹಿರಿಯೂರು, ಹೊಸದುರ್ಗ ತಲಾ ೧, ಹೊಳಲ್ಕೆರೆ ತಾಲೂಕಿನಲ್ಲಿ ೨ ಪ್ರಕರಣ ಬೆಳಕಿಗೆ ಬಂದಿವೆ. ಪ್ರಕರಣ ವರದಿಯಾದ ಕಡೆಗಳಲ್ಲಿ ಹಾಟ್‌ಸ್ಪಾಟ್‌ಗಳನ್ನು ಪತ್ತೆ ಹಚ್ಚಲಾಗಿದೆ.
ನಿಯಂತ್ರಣದಲ್ಲಿದ್ದರೂ ಕೂಡ ಜಿಲ್ಲೆಯ ನಗರ, ಪಟ್ಟಣ ಪ್ರದೇಶದಲ್ಲಿ ಲಾರ್ವಾ ಸಮೀಕ್ಷೆ, ಹೈರಿ¸್ಕï ಪ್ರದೇಶಗಳಲ್ಲಿ ಲಾರ್ವಾಹಾರಿ ಮೀನು ಮರಿಗಳನ್ನು ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಡೆಂಘೆಯಿAದ ಕೆಲ ಜಿಲ್ಲೆಗಳಲ್ಲಿ ಸಾವು-ನೋವು ಸಂಭವಿಸಿರುವ ಕಾರಣ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಹಗಲಿನಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವ ಜಾಗೃತಿ ಸಾರ್ವಜನಿಕರಲ್ಲಿ ಬೆಳೆದಿದೆ.
೨೦೨೩ರ ಮೇ ತಿಂಗಳಲ್ಲಿ ೧೫, ಜೂನ್‌ನಲ್ಲಿ ೩, ೨೦೨೪ರ ಜೂನ್‌ನಲ್ಲಿ ೬೯, ಜುಲೈನ ಅರ್ಧ ತಿಂಗಳಲ್ಲಿ ೬೧ ಪ್ರಕರಣಗಳು ವರದಿಯಾಗುವುದರೊಂದಿಗೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತ್ತು. ೨೦೨೫ರ ಜನವರಿಯಿಂದ ಮೇ ಅಂತ್ಯ ದೊಳಗೆ ೫೭ ಪ್ರಕರಣ ಪತ್ತೆಯಾಗಿದ್ದವು. ಆದರೆ, ಈ ಬಾರಿ ೨೯ ಪ್ರಕರಣ ದಾಖಲಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಎನ್ನುವ ಮಾಹಿತಿ ಇದೆ.
ಸಾಮಾನ್ಯವಾಗಿ ಮಳೆಗಾಲದಲ್ಲೇ ಡೆಂಘೆ ಪ್ರಕರಣಗಳು ಕಾಣಿಸಿಕೊಳ್ಳುವುದು ಹೆಚ್ಚು. ಹೀಗಾಗಿ ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳ ನೋಟಿಸ್‌ಬೋರ್ಡ್, ಕಾಂಪೌAಡ್ ಮುಂಭಾಗದಲ್ಲಿ ಕರಪತ್ರ, ಪತ್ರಿಕಾ ವರದಿಗಳನ್ನು ಅಂಟಿಸುವ ಮೂಲಕ ಶಾಲಾ ಮಕ್ಕಳಲ್ಲಿ, ಪಾಲಕರಲ್ಲಿ ಅರಿವು ಮೂಡಿಸಲು ಇಲಾಖೆ ಸಜ್ಜಾಗಿದೆ. ಈಗಾಗಲೇ ಹಲವೆಡೆ ಜಾಗೃತಿ ಮೂಡಿಸಲಾಗಿದೆ.
*ನಿಯಂತ್ರಣಕ್ಕೆ ಅಬೇಟ್ ದ್ರಾವಣ ಬಳಕೆ: ನಿಂತ ಶುದ್ಧ ನೀರಿನಿಂದ ಲಾರ್ವಾ, ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೆ ಪ್ರಕರಣ ಕಾಣಿಸಿಕೊಳ್ಳುವ ಕಾರಣ ಖಾಲಿ ಕಟ್ಟಡ, ಮನೆ, ನಿವೇಶನಗಳಲ್ಲಿ ನಿಂತ ನೀರಿಗೆ ಅಬೇಟ್ ದ್ರಾವಣ ಹಾಕಲಾಗುತ್ತಿದೆ. ಅಲ್ಲದೆ, ಮನೆಗಳಲ್ಲಿ ಬಕೆಟ್, ಕೊಡಪಾನ, ಡ್ರಮ್, ಖಾಲಿ ಚಿಪ್ಪು, ಬಾಟಲಿಗಳಲ್ಲಿ ಸಂಗ್ರಹಿಸಿದ ನೀರಿನಲ್ಲಿ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ ೯ ವರ್ಷದ ಸರಾಸರಿ ಗಮನಿಸಿದರೆ, ಸಾಮಾನ್ಯವಾಗಿ ಡೆಂಘೆ ಪ್ರಕರಣ ಒಂದು ವರ್ಷ ಹೆಚ್ಚು, ಮತ್ತೊಂದು ವರ್ಷ ಕಡಿಮೆಯಾಗಿರುವುದು ಕಂಡು ಬಂದಿದೆ.
ಕಳೆದ ವರ್ಷ ೩೯ ಪ್ರಕರಣಗಳೊಂದಿಗೆ ಚಿತ್ರದುರ್ಗ ನಗರ ಜಿಲ್ಲೆಯಲ್ಲೇ ಹಾಟ್ ಸ್ಪಾಟ್ ಆಗಿತ್ತು. ಆದರೆ, ಈ ಬಾರಿ ಕೇವಲ ೨ ಪ್ರಕರಣ ಕಂಡುಬAದಿವೆ. ಇನ್ನುಳಿದ ಐದು ತಾಲೂಕುಗಳ ನಗರ, ಪಟ್ಟಣ ಪ್ರದೇಶಗಳಲ್ಲಿ ೫ ತಿಂಗಳಿAದಲೂ ಸೊನ್ನೆ ಪ್ರಕರಣಗಳಿವೆ. ಈವರೆಗೂ ನಿಯಂತ್ರಣದಲ್ಲಿರುವುದು ಜಿಲ್ಲೆಯಲ್ಲಿ ಆಶಾದಾಯಕ ಬೆಳವಣಿಗೆ ಎಂದೇ ಹೇಳಲಾಗುತ್ತಿದೆ.
೨೦೨೬ರ ತಾಲೂಕುವಾರು ಮಾಹಿತಿ (ಮೇ ೨೮ರೊಳಗೆ)
ತಾಲೂಕು, ಡೆಂಘೆ, ಚಿಕೂನ್‌ಗುನ್ಯಾ ಪ್ರಕರಣ ಮಾಹಿತಿ.
ವರ್ಷವಾರು ಪತ್ತೆಯಾದ ಡೆಂಘೆ ಪ್ರಕರಣ
ಆಸ್ಪತ್ರೆಯಲ್ಲಿ ಪ್ರತಿ ಪ್ರಕರಣ ದಾಖಲಾದ ವೇಳೆ ರೋಗಿಯ ಮನೆ ವ್ಯಾಪ್ತಿಯ ೧೦೦ ಮನೆಗಳಲ್ಲಿ ಲಾರ್ವಾ ಸರ್ವೇ ಮಾಡಲಾಗುತ್ತಿದೆ. ಇದನ್ನು ಸತತ ನಾಲ್ಕು ವಾರವೂ ಮುಂದುವರಿಸಲಾಗುತ್ತಿದೆ. ಪ್ರಕರಣ ಇಲ್ಲದ ವೇಳೆ ೧೫ ದಿನಕ್ಕೊಮ್ಮೆ ಸರ್ವೇ ನಡೆಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ೧,೪೦೦ ಆಶಾ ಕಾರ್ಯಕರ್ತೆಯರು, ಇಲಾಖೆಯ ಅಽಕಾರಿಗಳು, ಸಿಬ್ಬಂದಿ ಸೇರಿ ಒಟ್ಟು ೨ ಸಾವಿರ ಮಂದಿ ಶ್ರಮಿಸುತ್ತಿದ್ದಾರೆ.
"
ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಡೆಂಘೆ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೂ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ನಾಗರಿಕರು ಕೂಡ ಮನೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕು.
— | ಡಾ. ಚಂದ್ರಶೇಖರ ಕಂಬಾಳಿಮಠ, ಜಿಲ್ಲಾ ಸರ್ವೇಕ್ಷಣಾಽಕಾರಿ
"
ಲಾರ್ವಾ ಉತ್ಪತ್ತಿ, ಸೊಳ್ಳೆಗಳ ತಾಣಗಳನ್ನು ನಾಶಪಡಿಸುವ ಕಾರ್ಯ ಪರಿಣಾಮಕಾರಿಯಾಗಿ ನಡೆದಿದೆ. ಸಮೀಕ್ಷೆ ನಿರಂತರವಾಗಿದ್ದು, ಇದರಲ್ಲಿ ವಿವಿಧ ಇಲಾಖೆ, ಸ್ಥಳೀಯ ಸಂಸ್ಥೆಗಳು ಕೈಜೋಡಿಸಿವೆ. ಡೆಂಘೆ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಮಳೆ ಆರಂಭದ ಬಳಿಕ ನೈಜ ಚಿತ್ರಣ ಸಿಗಲಿದೆ.
— | ಡಾ. ಕಾಶಿ, ಜಿ¯್ಲÁ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಽಕಾರಿ