ಹಳೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕ ಹೆಚ್ಚಳ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಜಿ¯್ಲÁ ಟ್ರಕ್ಕರ್ಸ್ ಅಸೋಸಿಯೇಷನ್‌ನ ಪದಾಽಕಾರಿಗಳು ಚಿತ್ರದುರ್ಗದಲ್ಲಿ ಗುರುವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. 
ಚಿತ್ರದುರ್ಗ

ಸರಕ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕ ಹೆಚ್ಚಳ ಹಿಂತೆಗೆತಕ್ಕೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಟ್ರಕ್ಕರ್ಸ್ ಅಸೋಸಿಯೇಷನ್ ಪ್ರತಿಭಟನೆ
  • ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ
  • ಸಾಂಕೇತಿಕ ಪ್ರತಿಭಟನೆ
ಚಿತ್ರದುರ್ಗ: ಹಳೆ ಸರಕು ಸಾಗಾಣಿಕೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕದಲ್ಲಿ ಭಾರಿ ಹೆಚ್ಚಳ, ಸರಕು ಸಾಗಾಣಿಕೆ ವಾಹನ ಗಳಿಗೆ ವಿಎಲ್‌ಟಿಡಿ ವಿತ್ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಽಸಿ ಜಿಲ್ಲಾ ಟ್ರಕ್ಕರ್ಸ್ ಅಸೋಸಿಯೇಷನ್ ಪದಾಽಕಾರಿಗಳು ಗುರುವಾರ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಡೀಸೆಲï ಒಳಗೊಂಡು ನವೀಕರಣ ಶುಲ್ಕ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು. ಫಿಟ್ನೆಸ್ ನವೀಕರಣ ಶುಲ್ಕ ಭಾರಿ ಹೆಚ್ಚಳವಾಗಿದೆ. ಮಾಲೀಕರ ಮೇಲೆ ಆರ್ಥಿಕ ಹೊರೆ ಜಾಸ್ತಿಯಾಗಿದೆ. ಇದರೊಟ್ಟಿಗೆ ಡೀಸೆಲï ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶುಲ್ಕ ಭರಿಸುವುಸು ಕಷ್ಟವಾಗಿದೆ. ಇದರಿಂದ ಸಾರಿಗೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನೇ ನಂಬಿ ಕೊAಡಿರುವ ಸಾವಿರಾರು ಕುಟುಂಬಗಳ ದೈನಂದಿನ ಬದುಕಿಗೆ ಸಂಚಕಾರ ಬಂದಿದೆ ಎಂದು ಅಳಲು ತೋಡಿಕೊಂಡರು.
ಮಹಿಳೆಯರು ಮತ್ತು ಮಕ್ಕಳ ಸುತಕ್ಷತೆಗೆ ವಿಎಲï‌ಟಿಡಿ ವಿತ್ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಪಬ್ಲಿಕ್ ಸರ್ವಿಸ್ ವಾಹನಗಳಿಗೆ ಮಾತ್ರ ಸರ್ವೋಚ್ಚ ನ್ಯಾಯಾಲಯ ಕಡ್ಡಾಯಗೊಳಿಸಿ ಆದೇಶಿಸಿದೆ.
ಸರಕು ಸಾಗಾಣಿಕೆ ವಾಹನಗಳಲ್ಲಿ ಯಾವ ಪ್ರಯಾಣಿಕರಿಗೂ ಅವಕಾಶವಿಲ್ಲದ ಕಾರಣ ಇದರಿಂದ ವಿನಾಯಿತಿ ನೀಡಬೇಕು. ಫಿಟ್ನೆಸ್ ನವೀಕರಣ ಶುಲ್ಕ ಹೆಚ್ಚಳ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ವಿಶ್ವನಾಥ್, ಸಂತೋಷ್, ಶ್ರೀನಿವಾಸ್, ಲೋಕೇಶ್, ಮನ್ಸೂರ್, ಅಬ್ದುಲï ಸತ್ತಾರ್, ರೆಹಮಾನ್, ವಸೀಂ, ಸಾಽಕ್ ಇತರರಿದ್ದರು.