ತಾಳ್ಯ ಹೋಬಳಿಯ ನಾನಾ ಕೆರೆಗಳಿಗೆ ಭದ್ರಾ ನೀರು ಹರಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ರೈತರು ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅಽಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.  
ಚಿತ್ರದುರ್ಗ

ಕೆರೆಗಳಿಗೆ ಭದ್ರಾ ನೀರು ಹರಿಸಲು ಒತ್ತಾಯ

ರೈತ ಸಂಘದ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅಽಕಾರಿಗೆ ಮನವಿ ಸಲ್ಲಿಕೆ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ತಾಳ್ಯ ಹೋಬಳಿ ಹೊರಕೆರೆದೇವಪುರ, ಗುಂಡಿಕೆರೆ ಮತ್ತು ಕೆರೆಯಾಗಳಹಳ್ಳಿ ಕೆರೆಗಳಿಗೆ ಭದ್ರಾ ನೀರು ಹರಿಸುವಂತೆ ಹಾಗೂ ಪೈಪ್‌ಲೈನ್‌ಲೋಪ ದೋಷ ಸರಿಪಡಿಸುವಂತೆ ಆಗ್ರಹಿಸಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ವಲಯದ ಮುಖ್ಯಇಂಜಿನಿಯರ್‌ಗೆ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ಮನವಿ ಸಲ್ಲಿಸಿದರು.

ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ನೀರು ಹರಿಸಲು ಆರಂಭಿಸಿ ೪೦ ದಿನಗಳಾದರೂ ಈ ಕೆರೆಗಳಿಗೆ ಈವರೆಗೂ ನೀರು ತಲುಪಿಲ್ಲ. ಹೊಳಲ್ಕೆರೆ ಪಂಪ್‌ಹೌಸ್ ಹಾಗೂ ಟಿ.ಎಮ್ಮಿಗನೂರು ಹತ್ತಿರದ ಗ್ರಾವಿಟಿ ತೊಟ್ಟಿ ಮುಖಾಂತರ ೩೫ ಕಿ.ಮೀ.ದೂರದಲ್ಲಿರುವ ಈ ಕೆರೆಗಳಿಗೆ ನೀರು ಹರಿಯದಿರಲು ಪೈಪ್‌ಲೈನ್‌ನಲ್ಲಿರುವ ಲೋಪದೋಷಗಳು ಕಾರಣವಾಗಿದೆ.

ಅಽಕಾರಿಗಳು ಪರಿಶೀಲಿಸಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ಪೈಪ್‌ಲೈನ್‌ನಿಂದ ನೀರು ತಲುಪಿಸಲು ಸಾಧ್ಯವಾಗದಿದ್ದಲ್ಲಿ ೨ಕಿ.ಮೀ.ದೂರದಲ್ಲಿರುವ ಉಪ್ಪರಿಗೇನಹಳ್ಳಿ ಹಾಗೂ ಗೂಳಿ ಹೊಸಹಳ್ಳಿಗಳಲ್ಲಿ ಹಾದು ಹೋಗಿರುವ ಭದ್ರಾ ಮುಖ್ಯ ಕಾಲುವೆಯಿಂದ ಏತಾ ನೀರಾವರಿ ಯೋಜನೆ ಮೂಲಕ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಉಪ್ಪರಿಗೇನಹಳ್ಳಿ, ಗೊಲ್ಲರಹಳ್ಳಿ, ನಂದನ ಹೊಸೂರು, ಒ. ಗೊಲ್ಲರಹಳ್ಳಿ ಎಂ.ಜಿ. ಕಟ್ಟೆ ಚೌಡಗೊಂಡನಹಳ್ಳಿ, ಹಾಲೇನಹಳ್ಳಿ, ಬೂದಿಪುರ, ಗೂಳಿಹೊಸಹಳ್ಳಿ, ಕಣಿವೆ ಜೋಗಿಹಳ್ಳಿ, ಸಂಗೇನಹಳ್ಳಿ, ಕಸವನಹಳ್ಳಿ, ಮತಿಘಟ್ಟ, ನಲ್ಲಿಕಟ್ಟೆ, ಬೋರೆನಹಳ್ಳಿ, ಬ್ರಹ್ಮಪುರ, ಪಂಪಾಪುರ, ನಗರಘಟ್ಟ, ಈಚಘಟ್ಟ, ತೇಕಲವಟ್ಟಿ, ಕೊಳಾಳು, ಕೋಮಾರನಹಳ್ಳಿ ಭಾಗದ ಕೆರೆ ಹಾಗೂ ಒಡ್ಡುಗಳಿಗೂ ನೀರು ತುಂಬಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು. ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

ರಾಮಸ್ವಾಮಿ ಕೆರೆಯಾಗಹಳ್ಳಿ, ರೈತಬಂಧು ಮಧು, ಚೌಡಗುಡ್ಡನಹಳ್ಳಿ ಹುಲಿಕೆಂಚಪ್ಪ, ಉಪ್ಪೇರಿಗೇನಹಳ್ಳಿ ಗಜೇಂದ್ರ, ಮಂಜುನಾಥ್, ವಿನಯಕುಮಾರ್ ನಂದನ ಹೊಸೂರು, ಶ್ರೀನಿವಾಸ್ ಎಚ್‌ಡಿ ಪುರ, ರಾಮಸ್ವಾಮಿ ಇದ್ದರು.