- ಅಡುಗೆ ಅನಿಲ ಸಿಲಿಂಡರ್
- ಮಧ್ಯಪ್ರಾಚ್ಯದಲ್ಲಿನ ಯುದ್ಧ
- ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ
ಚಿತ್ರದುರ್ಗ: ಗÊಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ಗಳು ವಾಣಿಜ್ಯ ವ್ಯವಹಾರಗಳಲ್ಲಿ ದುರ್ಬಳಕೆ ಆಗುತ್ತಿದ್ದು, ಕಾಳ ಸಂತೆ ಯಲ್ಲಿ ಮಾರಾಟ ತಡೆಯುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ಅಧ್ಯಕ್ಷೆ ಪಾರ್ವತಿ, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದ ಉಂಟಾಗಿರುವ ಅಡುಗೆ ಅನಿಲ ಅಭಾವದಂತಹ ಕಠಿಣ ಪರಿಸ್ಥಿತಿಯಲ್ಲಿ ಬ್ಲಾಕ್‌ನಲ್ಲಿ ಅಽಕ ದರದಲ್ಲಿ ಸಿಲಿಂಡರ್ ಮಾರಾಟವಾಗುತ್ತಿ ರುವುದು ಆತಂಕಕಾರಿಯಾಗಿದೆ ಎಂದರು.
ಬುಕ್ಕಿAಗ್ ಅವಽ ನಗರ ಪ್ರದೇಶಕ್ಕೆ ೨೫ ದಿನ ಹಾಗೂ ಗ್ರಾಮೀಣಕ್ಕೆ ೪೫ ದಿನಗಳೆಂದು ನಿಗದಿಪಡಿಸಿರುವುದು ಸರಿಯಲ್ಲ. ಇದರಿಂದ ಜನ ರಿಗೆ ತೊಂದರೆಯಾಗಿದೆ.
ಗ್ಯಾಸ್ ಏಜನ್ಸಿಗಳ ಸೋಗಿನಲ್ಲಿ ಸಿಲಿಂಡರ್ ಬುಕ್ ಮಾಡುತ್ತೇವೆ ಎಂದು ಮೊಬೈಲ್‌ಗಳಿಗೆ ಲಿಂಕ್ ಕಳಿಸಿ ಗ್ರಾಹಕ ರನ್ನು ವಂಚಿಸುತ್ತಿ ರುವ ಪ್ರಕರಣಗಳ ವಿರುದ್ಧವೂ ಪೊಲೀಸರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಎಚ್.ವೈ. ನಾಗಮಣಿ, ಶಬಾನಬಾನು, ಎಸ್. ನೇತ್ರಾವತಿ, ಹೀನಾಕೌಸರ್, ತೇಜೇಶ್ವರಿ ಇದ್ದರು.