ಚಿತ್ರದುರ್ಗದಲ್ಲಿ ಮಂಗಳವಾರ ಚಿತ್ರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಜಿಲ್ಲಾಡಳಿತವನ್ನು ಒತ್ತಾ ಯಿಸಿದರು. ಮೀಸೆ ಮಹಾಲಿಂಗಪ್ಪ, ಕಾಟಲಿಂಗಪ್ಪ, ವೆಂಕಟೇಶಪ್ಪ, ಚಿತ್ತಪ್ಪ, ಚಿತ್ರಶೇಖರ್, ರಮೇಶ್, ಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಸೌರ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಪಿ.ಎಂ. ಕುಸುಮ್ ಫೀಡರ್ ಸೋಲರೈಸೇಶನ್ ಯೋಜನೆ
  • ವಿದ್ಯುತ್ ವಿತರಣಾ ಕೇಂದ್ರ
  • ಸೌರ ಘಟಕ ಸ್ಥಾಪನೆ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಘಟ್ಟ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ರೈತರು ಮಂಗಳವಾರ ಚಿತ್ರದುರ್ಗದಲ್ಲಿ ಜಿ¯್ಲÁಽಕಾರಿಗಳಿಗೆ ಮನವಿ ಸಲ್ಲಿಸಿದರು.
ಈಚಘಟ್ಟ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಈಚೆಗೆ ವಿದ್ಯುತ್ ಅಭಾವ ತೀವ್ರವಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು, ಅತಿ ಯಾದ ಲೋಡ್ ಶೆಡ್ಡಿಂಗ್‌ನಿAದ ಕೃಷಿಗೆ ತುಂಬ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾ ಗುತ್ತಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಈಚಘಟ್ಟದಲ್ಲಿ ಪಿ.ಎಂ. ಕುಸುಮ್ ಫೀಡರ್ ಸೋಲರೈಸೇಶನ್ ಯೋಜನೆಯಡಿ ಸೌರ ಘಟಕ ಸ್ಥಾಪನೆಗೆ ಆದೇಶವಾಗಿದ್ದು, ಕೂಡಲೇ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಕಾಟಲಿಂಗಪ್ಪ, ವೆಂಕಟೇಶಪ್ಪ, ಚಿತ್ತಪ್ಪ, ಚಿತ್ರಶೇಖರ್, ರಮೇಶ್, ಕುಮಾರ್ ಸೇರಿದಂತೆ ನಾನಾ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.