ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಘಟನೆ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಪಂ ಸಿಇಒ ಡಾ. ಆಕಾಶ್ ಅವರಿಗೆ ಮನವಿ ಸಲ್ಲಿಸಿತು. ಗಿರಿಜಮ್ಮ, ಲಕ್ಷಿ÷್ಮÃಬಾಯಿ, ಗುರುಶಾಂತ, ನಾಗವೇಣಿ, ಪುಟ್ಟಮ್ಮ ಇತರರಿದ್ದರು.
- ಜ್ವಲಂತ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ
- ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ
- ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ
ಚಿತ್ರದುರ್ಗ: ಆಶಾ ಕಾರ್ಯಕರ್ತೆಯರ ಬಾಕಿ ಇರುವ ೩-೪ ತಿಂಗಳ ಕೇಂದ್ರದ ಪ್ರೋತ್ಸಾಹಧನ, ೧-೨ ತಿಂಗಳ ಗೌರವಧನ ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿಯ ನೂರಾರು ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಪಂ ಮೂಲಕ ಮನವಿ ರವಾನಿಸಿದರು.
೨೦೨೬ರ ಏಪ್ರಿಲ್ ೨೧ರಂದು ೯ ವಿವಿಧ ಆಶಾ ಸೇವೆಗಳನ್ನು ಆಶಾ ನಿಽ ತಂತ್ರಾAಶದಲ್ಲಿ ನಿಷ್ಕಿçಯಗೊಳಿಸಲಾಗಿದೆ. ಇದರಿಂದ ಪ್ರತಿ ಕಾರ್ಯಕರ್ತೆಗೆ ೫೦೦ ರಿಂದ ೧ ಸಾವಿರ ರೂ. ಪ್ರೋತ್ಸಾಹಧನ ಕಡಿತವಾಗಲಿದೆ. ಅದಕ್ಕಾಗಿ ಹಿಂದಿನAತೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಕೇಂದ್ರದ ಪ್ರೋತ್ಸಾಹಧನ ಬರುತ್ತಿಲ್ಲ. ಇದನ್ನು ತ್ವರಿತವಾಗಿ ಬಗೆ ಹರಿಸಬೇಕು. ಹಲವು ವರ್ಷಗಳಿಂದ ಬಿಡುಗಡೆಯಾಗದ ಟಿಬಿ, ಟಿಬಿಐ ಸೇರಿ ಇನ್ನಿತರೆ ಬಾಕಿ ಇರುವ ವಿವಿಧ ಕಂಪೋನೆAಟ್‌ಗಳ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು. ಮೌಲ್ಯಮಾಪನ ಹೆಸರಲ್ಲಿ ಆಶಾಗಳಿಗೆ ಆಗುತ್ತಿರುವ ಶೋ ಷಣೆ ತಪ್ಪಿಸಬೇಕು. ನಿವೃತ್ತರಾದ ಆಶಾಗಳಿಗೆ ಇಡಿಗಂಟು ನೀಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂ ದುವರಿಸಬೇಕು ಎಂದು ಆಗ್ರಹಿಸಿದರು.
೨೦೨೫ರಲ್ಲಿ ಸಿಎಂ ಘೋಷಿಸಿದ ಕೇಂದ್ರದ ಪ್ರೋತ್ಸಾಹಧನ, ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ಕನಿಷ್ಠ ೧೦ ಸಾವಿರ ರೂ. ಗೌರವಧನ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲ ಆಶಾ ಕಾರ್ಯಕರ್ತೆಯರಿಗೂ ೧ ಸಾವಿರ ರೂ. ಹೆಚ್ಚಿಸುವ ಭರವಸೆ ಈಡೇರಿಸುವಂತೆ ಕೋರಿದರು.
ಎಐಯುಟಿಯುಸಿ ಜಿಲ್ಲಾ ಮುಖಂಡ ರವಿಕುಮಾರ್, ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ, ಲಕ್ಷಿ÷್ಮÃಬಾಯಿ, ಗುರುಶಾಂತ, ನಾಗವೇಣಿ, ಪುಟ್ಟಮ್ಮ, ಸವಿತಾ, ನೇತ್ರಾವತಿ, -Áತೀಮಾ ಇತರರಿದ್ದರು.