ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಎಸ್.ಕೆ. ಬಸವರಾಜನ್, ಕೆ.ಟಿ. ಕುಮಾರಸ್ವಾಮಿ, ರಘುಚಂದನ್, ಎ. ಮುರಳಿ, ವೆಂಕಟೇಶ್ ಯಾದವ್, ಶ್ರೀನಿವಾಸ್, ನಾಗರಾಜ್ ಬೇದ್ರೆ, ರೇಖಾ ರೆಡ್ಡಿ, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್ ಇತರರು ಇದ್ದರು.
- ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
- ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
- ಸಿಬಿಐ ತನಿಖೆ
ಚಿತ್ರದುರ್ಗ:
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಡಳಿತ ವಿ-Àಲವಾಗಿದೆ. ಜನ ವಿರೋಽ ನೀತಿ ಅನುಸರಿಸುತ್ತಿದೆ ಎಂದು ಕಾರ್ಯಕರ್ತರು ಽಕ್ಕಾರ ಕೂಗಿದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ರಾಜ್ಯದಲ್ಲಿ ನೂತನ ಸಂಪುಟ ರಚಿಸಲು ಕಾಂಗ್ರೆಸ್ ಎರಡು ತಿಂಗಳು ಸಮಯ ತೆಗೆದುಕೊಡಿತು. ಭ್ರಷ್ಟಾಚಾರದ ಆರೋಪ ಎದುರಿಸುವವರಿಗೆ ಸಚಿವ ಸ್ಥಾನ ಕಲ್ಪಿಸಿರುವುದು ಖಂಡನೀಯ. ಕೂಡಲೇ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯುವ ಮುಖಂಡ ಎಂ.ಸಿ. ರಘುಚಂದನ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರು ಪಯೋಗ ಪ್ರಕರಣ ಸಂಬAಧ ಸಿಬಿಐ ತನಿಖೆ ಎದುರಿಸುತ್ತಿರುವ ನಾಗೇಂದ್ರ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಸ್ವಾರ್ಥ ರಾಜಕೀಯ, ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದ ನಂತರವೂ ಸಚಿವರು ಅಽಕಾರದಲ್ಲಿ ಮುಂದುವರಿಯುವುದು ದುರದೃಷ್ಟಕರ ಸಂಗತಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿ¯್ಲÁಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ನಿಗಮದಲ್ಲಿ ವಾಲ್ಮೀಕಿ ಸಮುದಾಯದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಈ ಹಿಂದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ೧೮೭ ಕೋಟಿ ರೂ. ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ, ಅನ್ಯ ರಾಜ್ಯದ ಚುನಾವಣಾ ವೆಚ್ಚಕ್ಕೆ ಬಳಸಲಾಗಿದೆ ಎಂಬ ಗಂಭೀರ ಆರೋಪವಿದೆ. ಕೂಡಲೇ ನಾಗೇಂದ್ರ ಅವರನ್ನು ಸಂಪುಟದಿAದ ವಜಾಗೊಳಿಸುವಂತೆ ಒತ್ತಾಯಿಸಿದರು.
ಪದಾಽಕಾರಿಗಳಾದ ಎ. ಮುರಳಿ, ವೆಂಕಟೇಶ್ ಯಾದವ್, ಶ್ರೀನಿವಾಸ್, ರೇಖಾ ರೆಡ್ಡಿ, ಲಿಂಗರಾಜು, ನಾಗರಾಜು, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್, ಚಂದ್ರು, ಅರುಣ್, ಪರಶುರಾಮ್, ಭಾರ್ಗವಿ ದ್ರಾವಿಡ್, ನವೀನ್, ಪ್ರದೀಪ್, ಮಹಾಂತೇಶ್, ವಿರೂಪಾಕ್ಷ, ನಾಗರಾಜ್, ಲೀಲಾವತಿ, ಬಸವೇಶ್, ಸುಮಾ ವಸಂತ್, ಬಸವರಾಜ್, ಕಿರಣ್, ಪ್ರೊ. ನಾಗರಾಜ್ ಇತರರು ಇದ್ದರು.