ಮೆಕ್ಕೆಜೋಳ ಖರೀದಿ ಕೇಂದ್ರಗಳ ಸ್ಥಾಪನೆ ಸೇರಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಬುಧವಾರ ರೈತರು ಪ್ರತಿಭಟನೆ ನಡೆಸಿ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈಚಘಟ್ಟದ ಸಿದ್ದವೀರಪ್ಪ, ಕೆ.ಟಿ. ಸ್ವಾಮಿ, ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಲೋಕೇಶ, ಸಣ್ಣತಿಮ್ಮಪ್ಪ, ಚಿತ್ತಪ್ಪ, ನಿರಂಜನ್, ಎಂ.ಎಸ್. ಸಿದ್ದಯ್ಯ ಇತರರು ಇದ್ದರು.
- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
- ಡಿಸಿ ಕಚೇರಿ ಆವರಣದಲ್ಲಿ ನಿರಶನ
- ಮೆಕ್ಕೆಜೋಳ ಧಾರಣೆ ಕುಸಿತ
ಚಿತ್ರದುರ್ಗ: ಮೆಕ್ಕೆಜೋಳ ಖರೀದಿ ಕೇಂದ್ರಗಳ ಸ್ಥಾಪನೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬುಧವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ಮೆಕ್ಕೆಜೋಳ ಧಾರಣೆ ಕುಸಿತ ಕಂಡಿರುವ ಈ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕು.
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆ ರೈತರು ಗುಬ್ಬಿಗೆ ಮೆಕ್ಕೆಜೋಳವನ್ನು ರೈತರೇ ಸಾಗಿಸಬೇಕೆಂಬ ತೀರ್ಮಾನ ಸರಿಯಲ್ಲ. ಇದರಿಂದ ಸಾಗಾಟ ವೆಚ್ಚ ಅಽಕವಾಗಿ ಬೆಂಬಲ ಬೆಲೆ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಆದ್ದರಿಂದ ಆಯಾಯ ತಾಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದರು.
೨೦೨೨-೨೩ ನೇ ಸಾಲಿನ ಹವಾಮಾನ ಆಧಾರಿತ ಅಡಕೆ ಬೆಳೆಗೆ ವಿಮೆ ಹಣವನ್ನು ರೈತರ ಖಾತೆಗೆ ಜಮಾ ಆಗಬೇಕು. ಜಿಲ್ಲೆಯ ಆರು ತಾಲೂಕುಗಳ ರೈತರಿಗೆ ಅಂದಾಜು ೨೦ ಕೋಟಿ ವಿಮಾ ಪರಿಹಾರ ಮೊತ್ತ ಜಮಾ ಆಗಬೇಕು. ೨೦೨೩-೨೪ನೇ ಸಾಲಿನ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಅಕ್ರಮ ಎಸಗಿರುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರ್ಹರಿಗೆ ಪರಿಹಾರ ವಿತರಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಕೆ.ಟಿ. ಸ್ವಾಮಿ, ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಲೋಕೇಶ, ಸಣ್ಣತಿಮ್ಮಪ್ಪ, ಚಿತ್ತಪ್ಪ, ನಿರಂಜನ್, ಎಂ.ಎಸ್. ಸಿದ್ದಯ್ಯ, ರಂಗಸ್ವಾಮಿ, ಪ್ರಸನ್ನ, ವೀರಭದ್ರಪ್ಪ, ತುಂಗಪ್ಪ ಗಿಲಕೇನಹಳ್ಳಿ ರಾಜಪ್ಪ, ತಿಮ್ಮಣ್ಣ, ಮಲ್ಲಿಕಾರ್ಜುನ್, ಸತೀಶ, ಚಂದ್ರಮೌಳಿ, ತುಳಜಮ್ಮ, ವಿಜಯಪ್ರಕಾಶ್, ನಾಗರಾಜ್, ಸದಾಶಿವಪ್ಪ, ಅನ್ನಪೂರ್ಣ ಇತರರು ಇದ್ದರು.