ಅರೆಸೇನಾ ಮಾಜಿ ಯೋಧರಿಗೆ ಜಮೀನು, ನಿವೇಶನ ನೀಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಗುರುವಾರ ಸಂಘದ ಪದಾಽಕಾರಿಗಳು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ.ಲಿಂಗರಾಜ, ರ‍್ರಿಸ್ವಾಮಿ, ನೀಲಾವತಿ, ಭಾಗ್ಯಮ್ಮ, ದುರ್ಗಮ್ಮ, ಸುನೀತಾ ಇದ್ದರು.
- ಜಿಲ್ಲಾಡಳಿತ ಬೇಡಿಕೆಗೆ ಸ್ಪಂದಿಸಲಿ
- ಅರೆಸೇನಾ ಮಾಜಿ ಯೋಧರ ಸಂಘದ ಮನವಿ
- ನಿವೇಶನ ಅರ್ಜಿ
ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುತ್ತೋಲೆಯಂತೆ ಅರೆಸೇನಾ ಪಡೆಯ ಮಾಜಿ ಯೋಧರಿಗೂ ಜಮೀನು ಮತ್ತು ನಿವೇಶನ ಸೇರಿ ವಿವಿಧ ಸವಲತ್ತುಗಳನ್ನು ಕಲ್ಪಿಸುವಂತೆ ಜಿ¯್ಲÁ ಅರೆಸೇನಾ ಮಾಜಿ ಯೋಧರ ಸಂಘ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಸಂಘದಲ್ಲಿ ೧೭೭ ಹಾಲಿ ಮತ್ತು ನಿವೃತ್ತ ಅರೆಸೇನಾ ಯೋಧರಿದ್ದು, ಸೌಲಭ್ಯಕ್ಕಾಗಿ ಆಯಾ ತಾಲೂಕು ಕಚೇರಿಗಳಲ್ಲಿ ಜಮೀನು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿz್ದÁರೆ. ಅವುಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯಕ್ಕೆ ಕಳುಹಿಸಿದ್ದು, ಇದು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ತಿಳಿಸಿದೆ. ಆದ್ದರಿಂದ ಜಿಲ್ಲಾಡಳಿತವೇ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು.
ಅರ್ಹರ ದಾಖಲಾತಿಗಳನ್ನು ನಮ್ಮ ಸಂಘಕ್ಕೆ ಕಳುಹಿಸಿ, ಪದಾಽಕಾರಿಗಳು ಪರಿಶೀಲಿಸಿ ಜಿ¯್ಲÁಡಳಿತಕ್ಕೆ ಸಲ್ಲಿಸಲಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಜಮೀನು ಮತ್ತು ನಿವೇಶನದ ಅರ್ಜಿಗಳನ್ನು ತುರ್ತಾಗಿ ಮರು ಪರಿಶೀಲಿಸಿ ಅರ್ಹರಿಗೆ ವಿತರಿಸಲು ಆಯಾ ತಾಲೂಕಿನ ತಹಸೀಲ್ದಾರರಿಗೆ ನಿರ್ದೇಶಿಸುವಂತೆ ಕೋರಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿ¯್ಲÁಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಅರೆಸೇನಾ ಮಾಜಿ ಯೋಧರ ಸಂಘದ ಅಧ್ಯಕ್ಷ ಈ. ಲಿಂಗರಾಜ, ಪದಾಽಕಾರಿಗಳಾದ ಡಿ.ಜಯಣ್ಣ, ವಿ.ರವಿಕುಮಾರ್, ಎಚ್.ವೆಂಕಟೇಶ್, ಜಿ.ಆರ್.ಮಂಜುನಾಥ್, ಆರ್.ಶಿವ ಕುಮಾರ್, ರ‍್ರಿಸ್ವಾಮಿ, ನೀಲಾವತಿ, ಭಾಗ್ಯಮ್ಮ, ದುರ್ಗಮ್ಮ, ಸುನೀತಾ ಇತರರಿದ್ದರು.