ಚಿತ್ರದುರ್ಗ ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ರಾಜ್ಯ ಮಾದಿಗ ಯುವಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಬಿ.ಒ.ಗಂಗಾಧರಯ್ಯ, ರಾಜಣ್ಣ, ಮಹಾಲಿಂಗಪ್ಪ, ಆರ್.ತಿಪ್ಪೇಸ್ವಾಮಿ, ಮೂರ್ತಿ ಇತರರಿದ್ದರು.
- ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಿ
- ರಾಜ್ಯ ಮಾದಿಗ ಯುವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
- ಚಿತ್ರದುರ್ಗ ನಗರಸಭೆ
ಚಿತ್ರದುರ್ಗ: ನಗರದಲ್ಲಿ ಕುಡಿಯುವ ನೀರು ವಿತರಿಸುವಲ್ಲಿ ನಗರಸಭೆ ವಿ-Àಲವಾಗಿದೆ, ಸಮರ್ಪಕ ಪೂರೈಸಬೇಕೆಂದು ಆಗ್ರಹಿಸಿ ರಾಜ್ಯ ಮಾದಿಗ ಯುವಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಹಲವೆಡೆ ಮೂಲಸೌಕರ್ಯ ಇಲ್ಲದೆ, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿರ್ಲಕ್ಷ್ಯ ತೋರುತ್ತಿರುವ ಚಿತ್ರದುರ್ಗ ನಗರಸಭೆಯ ಅಽಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ರಾಜ್ಯಪಾಲರು, ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ನಗರದಲ್ಲಿ ನೀರಿನ ಅಭಾವ ಉಂಟಾಗುವ ವಾರ್ಡ್ಗಳಿಗೆ ಪೌರಾಯುಕ್ತರು ಭೇಟಿ ನೀಡುತ್ತಿಲ್ಲ. ಶಾಂತಿಸಾಗರ ಮತ್ತು ವಿ.ವಿ. ಸಾಗರ ಮಾರ್ಗದ ನೀರಿನ ಪೈಪ್‌ಲೈನ್, ಯಂತ್ರೋಪಕರಣ ದುರಸ್ತಿ ಸಂಬAಧ ಕ್ರಮವಾಗಿ ೧೭-೧೮ ಸೇರಿ ೩೫ ಲಕ್ಷ ರೂ. ಸಮರ್ಪಕವಾಗಿ ಬಳಕೆ ಆಗಿದೆಯೋ, ಇಲ್ಲವೋ ಎಂಬ ಕುರಿತು ಸಿಒಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಣ ಕೊಟ್ಟವರಿಗೆ ಒಂದು ದಿನದಲ್ಲಿ ಇ-ಸ್ವತ್ತು ನೀಡುತ್ತಾರೆ. ಲಂಚ ನೀಡದಿದ್ದರೆ, ೩ರಿಂದ ೬ ತಿಂಗಳು ಕಾಯಬೇಕಿದೆ. ಎಸ್ಸಿ, ಎಸ್ಟಿ ಸಮುದಾಯದವರ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ. ಇಲ್ಲಿಯೂ ಜಾತಿ ತಾರತಮ್ಯ ಹೆಚ್ಚಾಗಿದೆ. ಯಾವ ಅಽಕಾರಿಗಳು ಜನಪರ ಕಾರ್ಯನಿರ್ವಹಿಸುವಲ್ಲಿ ವಿ-Àಲರಾಗಿದ್ದಾರೋ ಅವರನ್ನು ಅಮಾನತುಗೊಳಿಸಿ ಎಂದು ಕೋರಿದರು. ಸೇನೆಯ ಅಧ್ಯಕ್ಷ ಬಿ.ಒ. ಗಂಗಾಧರಯ್ಯ, ರಾಜಣ್ಣ, ಮಹಾಲಿಂಗಪ್ಪ, ಆರ್.ತಿಪ್ಪೇಸ್ವಾಮಿ, ಮೂರ್ತಿ ಇತರರಿದ್ದರು.