ಶಿವಲಿಂಗಪ್ಪ ಹತ್ಯೆಗೈದ ಹಂತಕರ ಬಂಧನಕ್ಕೆ ಒತ್ತಾಯಿಸಿ ಜಿ¯್ಲÁ ಮಡಿವಾಳರ ಸಂಘ, ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಎಎಸ್ಪಿ ಡಾ.ಆರ್. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಡಾ.ವಿ. ಬಸವರಾಜ್, ಬಿ. ರಾಮಜ್ಜ, ಕೆ.ಆರ್. ಮಂಜುನಾಥ್, ಹಿರೇಹಳ್ಳಿ ಮಲ್ಲಿಕಾರ್ಜುನ್, ಪ್ರೊ.ಸಿ.ಕೆ. ಮಹೇಶ್, ಟಿ. ರಾಮು, ರಾಮುಗೋಸಾಯಿ, ಸಿ.ಎ. ಚಿಕ್ಕಣ್ಣ, ವೈ. ಕುಮಾರ್ ಇತರರಿದ್ದರು. 
ಚಿತ್ರದುರ್ಗ

ಶಿವಲಿಂಗಪ್ಪ ಹತ್ಯೆ ಹಂತಕರ ಬಂಧನಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಮಡಿವಾಳ ಸಂಘ
  • ಸಾಮಾಜಿಕ ಸಂಘರ್ಷ ಸಮಿತಿ
  • ಪ್ರತಿಭಟನೆ
ಚಿತ್ರದುರ್ಗ : ರಾಷ್ಟಿçÃಯ ಹೆದ್ದಾರಿಯ ಹೋಟೆಲ್‌ವೊಂದರ ಸಮೀಪ ಶಿವಲಿಂಗಪ್ಪ ಅವರನ್ನು ಹತ್ಯೆಗೈದ ಹಂತಕರನ್ನು ಬಂಽ ಸು ವAತೆ ಆಗ್ರಹಿಸಿ ಜಿ¯್ಲÁ ಮಡಿವಾಳರ ಸಂಘ, ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತನಿಖೆ ಚುರುಕುಗೊಳಿಸಿ ಹಂತಕರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.
ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ. ಬಸವರಾಜ್ ಮಾತನಾಡಿ, ಶಿವಲಿಂಗಪ್ಪ ಅವರ ಸಾವು ಕುಟುಂಬಕ್ಕೆ ಮಾತ್ರವಲ್ಲ. ಇಡೀ ಮಡಿವಾಳ ಸಮುದಾಯಕ್ಕೆ ಅತೀವ ನೋವುಂಟು ಮಾಡಿದೆ. ಇಂತಹ ಹೀನಾಯ ಕೃತ್ಯಗಳಿಗೆ ಕಡಿವಾಣ ಹಾಕಲು ಕೊಲೆ ಗಡುಕರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಏಳಿಗೆ ಸಹಿಸದೆ ಹತ್ಯೆ ಮಾಡಿರುವ ಅನುಮಾನವಿದೆ. ಪೊಲೀಸರ ನ್ಯಾಯಯುತ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದರು.
ಸಾಮಾಜಿಕ ಸಂಘರ್ಷ ಸಮಿತಿಯ ಪ್ರೊ.ಸಿ.ಕೆ. ಮಹೇಶ್ ಮಾತನಾಡಿ, ಶಿವಲಿಂಗಪ್ಪ ಹತ್ಯೆ ಮಡಿವಾಳ ಸಮಾಜ, ಕುಟುಂಬ ದವರಲ್ಲಿ ಭಯ ಮೂಡಿಸಿದೆ. ಇದರ ಹಿಂದೆ ಯಾರ ಕೈವಾಡವಿದ್ದರೂ ಪೊಲೀಸರು ಪತ್ತೆ ಹಚ್ಚುವಂತೆ ಮನವಿ ಮಾಡಿದರು.
ಮಡಿವಾಳರ ಸಂಘದ ಜಿ¯್ಲÁಧ್ಯಕ್ಷ ಬಿ. ರಾಮಜ್ಜ ಮಾತನಾಡಿ, ಆತನಲ್ಲಿ ಅನ್ಯೋನ್ಯತೆಯ ಗುಣವಿತ್ತು. ಕೇವಲ ಮಡಿವಾಳ ಸಮುದಾಯವಲ್ಲದೆ ಇತರ ಜನರೊಟ್ಟಿಗೆ ಸಹೋದರತ್ವ ಹೊಂದಿದ್ದರು. ಇದನ್ನು ಸಹಿಸದವರು ಕೃತ್ಯ ಎಸಗಿರುವ ಶಂಕೆ ಇದೆ. ಆದ್ದರಿಂದ ಸಮುದಾಯ ಹಾಗೂ ಆತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಲ್ಲಿಕಾರ್ಜುನ್, ಮಡಿವಾಳ ಸಂಘದ ಪದಾಽಕಾರಿ ಗಳಾದ ಕೆ.ಆರ್. ಮಂಜುನಾಥ್, ವಿರುಪಾಕ್ಷಪ್ಪ, ಲೋಕೇಶ್ವರಪ್ಪ, ರಾಮಕೃಷ್ಣ, ಧೃವಕುಮಾರ್, ಬಸವರಾಜ್, ನಾಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ರಂಗಮ್ಮ, ಸಾಮಾಜಿಕ ಸಂಘರ್ಷ ಸಮಿತಿಯ ಟಿ. ರಾಮು, ರಾಮುಗೋಸಾಯಿ ಇತರರು ಇದ್ದರು.