ಎಸ್‌ಐಆರ್ ನ್ಯಾಯ ಸಮ್ಮತ ಪ್ರಕ್ರಿಯೆಗೆ ಆಗ್ರಹಿಸಿ ಮತ ಕಾವಲು ಕಾನೂನು ಸಮಿತಿ ಹಾಗೂ ನಾಗರಿಕ ಮತ ಕಾವಲು ಸಮಿತಿಗಳ ಪ್ರಮುಖರು ಡಿಸಿ ಕಚೇರಿಯ ಒಎ ತನುಜಾ ಎಸ್. ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು. ಮಹಮ್ಮದ್ ಸಿರಾಜುದ್ದೀನ್, ಮೆಹಬೂಬ್ ಪಾಷ, ಸಾಽಕ್, ರಾಮಬಾಬು, ಮಹಮ್ಮದ್ ಆತೀಕ್, ಅಶೋಕ್‌ಬೆಳಘಟ್ಟ, ಖಾಸಿಂಆಲಿ, ಮಹಮ್ಮದ್‌ಆಲಿ, ಷಫೀವುಲ್ಲಾ ಇದ್ದರು. 
ಚಿತ್ರದುರ್ಗ

ನ್ಯಾಯ ಸಮ್ಮತ ಎಸ್‌ಐಆರ್ ಪ್ರಕ್ರಿಯೆಗೆ ಆಗ್ರಹ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮತ ಕಾವಲು ಸಮಿತಿಗಳ ಪ್ರಮುಖರಿಂದ ಜಿಲ್ಲಾಡಳಿತಕ್ಕೆ ಮನವಿ
  • ಅರ್ಹರ ಹೆಸರು ಮತಪಟ್ಟಿಯಿಂದ ಕೈ ಬಿಡದಂತೆ ಒತ್ತಾಯ
  • ಸಮರ್ಪಕ ನೋಟಿಸ್

ಚಿತ್ರದುರ್ಗ:

ಮತದಾರರ ಹಕ್ಕುಗಳ ಸಂರಕ್ಷಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ನ್ಯಾ ಯಸಮ್ಮತ ಕ್ರಮಕ್ಕೆ ಆಗ್ರಹಿಸಿ ಮತ ಕಾವಲು ಕಾನೂನು ಸಮಿತಿ ಹಾಗೂ ನಾಗರಿಕ ಮತ ಕಾವಲು ಸಮಿತಿಗಳ ಪ್ರಮುಖರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು.

ಎಸ್‌ಐಆರ್ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗದ ಪ್ರಕಾರ ಮ್ಯಾಪಿಂಗ್ ಆಗದವರ ಸಂಖ್ಯೆ ೩೪ ಲಕ್ಷ ಜನರಿದ್ದಾರೆ. ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ಕಾನೂನುಬಾಹಿರವಾಗಿ ಅಥವಾ ಏಕಪಕ್ಷೀಯವಾಗಿ ತೆಗೆದುಹಾಕದಂತೆ ಕ್ರಮ ಕೈಗೊಳ್ಳಬೇಕು.
ಹೆಸರು ತೆಗೆದುಹಾಕುವ ಮೊದಲು ಸಂಬAಽಸಿದ ಮತದಾರರಿಗೆ ಸಮರ್ಪಕವಾಗಿ ನೋಟಿಸ್ ಕೊಟ್ಟು ಅವರು ಆಕ್ಷೇಪಣೆ ಸಲ್ಲಿ ಸಲು ಅವಕಾಶ ನೀಡಬೇಕು. ಬೂತ್‌ಮಟ್ಟದ ಅಽಕಾರಿಗಳು ಮತ್ತು ಚುನಾವಣಾ ಅಽಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಮತದಾರರಿಗೆ ತಮ್ಮ ಹೆಸರು ಪರಿಶೀಲಿಸಲು ಹಾಗೂ ಅಗತ್ಯವಿದ್ದರೆ ತಿದ್ದುಪಡಿ ಮಾಡಿಸಲು ವಿಶೇಷ ಶಿಬಿರಗಳನ್ನು, ಸಂವಿಧಾ ನಾತ್ಮಕವಾಗಿರುವ ಮತದಾನದ ಹಕ್ಕಿನಿಂದ ಯಾವುದೇ ಅರ್ಹ ಮತದಾರ ವಂಚಿತರಾಗಬಾರದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸಿ ಕಚೇರಿಯ ಆಫೀಸ್ ಅಸಿಸ್ಟೆಂಟ್ ತನುಜಾ ಎಸ್. ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು.
ವಕೀಲರಾದ ಮಹಮ್ಮದ್‌ಸಿರಾಜುದ್ದೀನ್, ಮೆಹಬೂಬ್‌ಪಾಷ, ಸಾಽಕ್, ರಾಮಬಾಬು, ಮಹಮ್ಮದ್‌ಆತೀಕ್, ಅಶೋಕ್‌ಬೆಳಘಟ್ಟ, ಸಮಾಜ ಸೇವಕ ಖಾಸಿಂಆಲಿ, ಮಹಮ್ಮದ್ ಆಲಿ, ಷಫೀವುಲ್ಲಾ ಇದ್ದರು.