ಪ್ರತಿ ಬೆಳೆ ಸಮೀಕ್ಷೆದಾರರಿಗೆ ೩೦ ಲಕ್ಷ ರೂ. ಜೀವ ಮತ್ತು ಅಪಘಾತ ವಿಮಾ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಪದಾಽಕಾರಿಗಳು ಸೋಮವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. 
ಚಿತ್ರದುರ್ಗ

೩೦ ಲಕ್ಷ ರೂ.ಜೀವ, ಅಪಘಾತ ವಿಮೆ ರಕ್ಷಣೆಗೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದಿAದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ
  • ಪರಿಹಾರ ಯೋಜನೆ
  • ಕೃಷಿ ಮತ್ತು ಕಂದಾಯ ಇಲಾಖೆ
ಚಿತ್ರದುರ್ಗ: ಪ್ರತಿ ಬೆಳೆ ಸಮೀಕ್ಷೆದಾರರಿಗೆ ೩೦ ಲಕ್ಷರೂ. ಜೀವ ಮತ್ತು ಅಪಘಾತ ವಿಮಾ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕರ್ನಾ ಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾ ಪದಾಽಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ೨೨ ಸಾವಿರ ಬೆಳೆ ಸಮೀಕ್ಷೆದಾರರಿದ್ದು, ಕಳೆದ ೧೦ ವರ್ಷಗಳಿಂದ ರಾಜ್ಯ ಸರ್ಕಾರದ ಬೆಳೆ ಸಮೀಕ್ಷಾ ಕಾರ್ಯ ವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಆದರೆ, ೨೦೧೪ ರಿಂದ ೨೦೨೪ ರವರೆಗೆ ಜಮೀನೊಂದಕ್ಕೆ ೧೦ ರೂ. ಇದ್ದ ದರವನ್ನು ೧೧ ರೂ.ಗೆ ಏರಿಸಲಾಗಿದೆ. ನಿತ್ಯ ೨೦ ಜಮೀನು ಸಮೀಕ್ಷೆ ಮಾಡಿದರೂ ೨೨೦ ರೂ. ಮಾತ್ರ ದೊರೆಯುತ್ತಿದೆ. ಪೆಟ್ರೋಲï, ಉಪಾಹಾರಕ್ಕೂ ಸಾಕಾಗುತ್ತಿಲ್ಲ. ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರದ ಕೃಷಿ ನೀತಿ, ಬೆಳೆ ವಿಮೆ, ಪರಿಹಾರ ಯೋಜನೆಗಳೆಲ್ಲವೂ ನಮ್ಮಿಂದ ಸಂಗ್ರಹಿಸಿದ ನಿಖರ ದತ್ತಾಂಶದ ಆಧಾರದ ಮೇಲೆ ನಿಂತಿವೆ. ಮಳೆ, ಬಿಸಿಲು ಲೆಕ್ಕಿಸದೆ, ಹಾವು ಕಡಿತ, ವಿದ್ಯುತ್ ಶಾಕ್, ಚಿರತೆ ದಾಳಿ ಇವೆಲ್ಲದರ ನಡುವೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ.
ಆದರೆ, ೧ ರೂ. ಜೀವವಿಮೆ ಇಲ್ಲ. ಸಮೀಕ್ಷೆಗಾಗಿ ಯಾವುದೇ ಮೂಲಸೌಕರ್ಯ ನೀಡಿಲ್ಲ. ವರ್ಷಕ್ಕೆ ಕೇವಲ ೯೦ ದಿನ ಮಾತ್ರ ಕೆಲ ಸವಿದೆ. ಇನ್ನುಳಿದ ದಿನಗಳಲ್ಲಿ ಆರ್ಥಿಕ ಅನಿಶ್ಚಿತತೆಯಿಂದ ಸಾಲ, ಬಡತನದಿಂದ ನರಳುವಂತಾಗಿದೆ ಎಂದು ಅಳಲು ತೋಡಿ ಕೊಂಡರು.
ಗೌರವಯುತ ಕೂಲಿಯಾಗಿ ಜಮೀನಿಗೆ ೧೧ ರೂ. ಬದಲು ಕನಿಷ್ಠ ೩೫ ರೂ. ನಿಗದಿಪಡಿಸಬೇಕು. ನಮಗೆ ಶಾಶ್ವತ ಭದ್ರತೆ ಒದಗಿ ಸಲು ಕೃಷಿ ಮತ್ತು ಕಂದಾಯ ಇಲಾಖೆಯ ಗ್ರಾಮ ಮಟ್ಟದ ಸಹಾಯಕರಾಗಿ ಪರಿಗಣಿಸಿ ವರ್ಷಪೂರ್ತಿ ಕೆಲಸ, ಮಾಸಿಕ ೧೫ ಸಾವಿರದಿಂದ ೧೮ ಸಾವಿರ ರೂ. ವೇತನ ನೀಡಬೇಕೆಂದು ಒತ್ತಾಯಿಸಿದರು.
೨೦೨೬-೨೭ನೇ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗುವ ಮುನ್ನ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜಿ¯್ಲೆಯ ಎಲ್ಲ ಬೆಳೆ ಸಮೀಕ್ಷೆದಾರರು ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ. ನಿರ್ದಿಷ್ಟಾವಽಯ ನಿರಶನಕ್ಕೂ ಸಿದ್ಧವೆಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಸಿ.ಎಚ್. ಶ್ರೀಧರ್, ಅಧ್ಯಕ್ಷ ಎಂ. ಮಹೇಶ್‌ಕುಮಾರ್, ಪದಾಽಕಾರಿಗಳಾದ ಸುರೇಶ್, ಕೆ.ಟಿ. ಉಮಾ ಶಂಕರ್, ಎಚ್. ಕುಮಾರ್, ರ‍್ರಿಸ್ವಾಮಿ, ಆನಂದ್, ರಮೇಶ್, ಸಿದ್ದೇಶ್, ಸತೀಶ್‌ಕುಮಾರ್ ಇತರರಿದ್ದರು.