ಚಿತ್ರದುರ್ಗದಲ್ಲಿ ಮಂಗಳವಾರ ತಮ್ಮ ಜನ್ಮದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಕೆ.ಸಿ.ವೀರೇಂದ್ರಪಪ್ಪಿ ಸನ್ಮಾನಿಸಿದರು. ಸಿ.ಟಿ.ಕೃಷ್ಣಮೂರ್ತಿ, ಮಂಜುನಾಥ ಗೊಪ್ಪೆ, ಸೂರಪ್ಪ, ಆರ್.ಶಿವಣ್ಣ, ಎಚ್.ಅಂಜಿನಪ್ಪ, ಎಚ್.ಸಿ.ನಿರಂಜನಮೂರ್ತಿ, ಸುರೇಶ್‌ಬಾಬು, ಮಹಾಂತೇಶ್, ಮಾಲತೇಶ್ ಮುದ್ದಜ್ಜಿ ಇತರರಿದ್ದರು.
- ಪೌರಕಾರ್ಮಿಕರ ಕಾಯಕ ಅತ್ಯಂತ ಮಹತ್ವದ್ದು
- ಶಾಸಕ ವೀರೇಂದ್ರಪಪ್ಪಿ ಹೇಳಿಕೆ
- ಕೆಸಿವಿ ಪ್ರಕೃತಿ ಸಂರಕ್ಷಣಾ ವೇದಿಕೆ
ಚಿತ್ರದುರ್ಗ: ವರ್ಣಮಯ ಕೇಕ್‌ಗಳನ್ನು ಕತ್ತರಿಸಿ ಅದ್ದೂರಿಯಾಗಿ ಆಚರಿಸುವ ಬದಲು, ಸಮಾಜಮುಖಿ ಕಾರ್ಯಗಳ ಮೂಲಕ ಅರ್ಥಪೂರ್ಣ ಜನ್ಮದಿನ ಮೀಸಲಿರಿಸಿ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಸಲಹೆ ನೀಡಿದರು.
ಚಳ್ಳಕೆರೆ ಗೇಟ್ ಸಮೀಪ ಮಂಗಳವಾರ ತಮ್ಮ ಜನ್ಮದಿನದ ಅಂಗವಾಗಿ ಕೆಸಿವಿ ಪ್ರಕೃತಿ ಸಂರಕ್ಷಣಾ ವೇದಿಕೆ ಉದ್ಘಾಟಿಸಿ, ಮುಖಂಡರಿಗೆ ಸಸಿಗಳನ್ನು ವಿತರಿಸಿ, ನಗರಸಭೆ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ನಿತ್ಯವೂ ಬಿಸಿಲು, ಚಳಿ, ಮಳೆ, ಗಾಳಿ ಲೆಕ್ಕಿಸದೆ ನಗರ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಒಂದು ದಿನ ಅವರೆಲ್ಲ ಕೆಲಸ ಸ್ಥಗಿತಗೊಳಿಸಿದರೆ, ಸಾರ್ವಜನಿಕರು ಪರದಾಡಬೇಕಾಗುತ್ತದೆ. ಅವರ ಕಾಯಕ ಅತ್ಯಂತ ಮಹತ್ವದ್ದು ಎಂದು ಪ್ರಶಂಸಿದರು.
ಜೀವ ಉಳಿಸುವ ರಕ್ತದಾನ ಭಗವಂತ ಮೆಚ್ಚುವ ಶ್ರೇಷ್ಠ ಕಾರ್ಯವಾಗಿದೆ. ದೇಹದ ರಕ್ತ ಶುದ್ಧಿಗೂ ಸಹಕಾರಿಯಾಗಿದೆ. ಹೀಗಾಗಿ ಯುವಸಮೂಹ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ನಗರದ ವಿವಿಧ ಭಾಗಗಳಲ್ಲೂ ಶಾಸಕರ ಅಭಿಮಾನಿಗಳು ಜನ್ಮದಿನ ಆಚರಿಸಿದರು. ಇದೇ ವೇಳೆ ದಿಲೀಪ್ ಗೆಳೆಯರ ಬಳಗದ ೨೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಚಿತ್ರದುರ್ಗದಲ್ಲಿ ೧೫ ಸಾವಿರ ಸಸಿಗಳನ್ನು ನೆಟ್ಟಿರುವ ಟಾರ್ಗೆಟ್ ಟೆನ್ ಥೌ ಸೆಂಡ್‌ನ ಸಿದ್ದರಾಜು ಮತ್ತು ತಂಡದವರನ್ನು ಕೆಸಿವಿ ಸಂರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
ನಗರಸಭೆ ಮುಂಭಾಗ ಪೌರಕಾರ್ಮಿಕರಿಗೆ ಸಮವಸö, ಅಂಗವಿಕಲರಿಗೆ ಮೊಪೈಡ್ ಬೈಕ್, ಮಿನಿ ಹಿಟಾಚಿ ವಿತರಿಸಲಾಯಿತು. ಕಾರ್ಮಿಕರೊಟ್ಟಿಗೆ ಶಾಸಕರು ಭೋಜನ ಮಾಡಿದರು. ನಗರದ ಗಾಂಽ ಸರ್ಕಲï ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರ ಮಿಸಿದರು.
ಸಿ.ಟಿ.ಕೃಷ್ಣಮೂರ್ತಿ, ಮಂಜುನಾಥ ಗೊಪ್ಪೆ, ಸೂರಪ್ಪ, ಆರ್.ಶಿವಣ್ಣ, ಎಚ್. ಅಂಜಿನಪ್ಪ, ಎಚ್.ಸಿ.ನಿರಂಜನಮೂರ್ತಿ, ಸುರೇಶ್ ಬಾಬು, ಮಹಾಂತೇಶ್, ಬಿ.ಟಿ.ಲೋಲಾಕ್ಷಮ್ಮ, ಮಾಲತೇಶ್ ಮುದ್ದಜ್ಜಿ, ಎಂ.ಕೆ.ತಾಜ್‌ಪೀರ್, ಕೆ.ಎಂ.ಹಾಲಸ್ವಾಮಿ, ಗೀತಾ ನಂದಿನಿಗೌಡ, ಸೈಯದ್ ಖುದ್ದೂಸ್, ಪ್ರಕಾಶ್ ರಾಮನಾಯ್ಕ್, ನಾಗರಾಜ್, ಅಬ್ದು¯್ಲÁ, ಸುದರ್ಶನ್, ಬೀಸ್ನಳ್ಳಿ ಜಯಣ್ಣ, ರವಿ, ಶರಣಪ್ಪ ಇತರರಿದ್ದರು.