ಗೋವನ್ನು ರಾಷ್ಟಿçÃಯ ಪ್ರಾಣಿಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಽಕಾರಿಗಳು, ವಕೀಲರು ಚಿತ್ರದುರ್ಗದಲ್ಲಿ ಸೋಮವಾರ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಬಿ.ಕೆ. ರಹಮತ್‌ವು¯್ಲÁ, ಪ್ರತಾಪ್‌ಜೋಗಿ, ಮನ್ಸೂರ್‌ಭಾಷ, ಅಶೋಕ್ ಬೆಳಗಟ್ಟ, ಪುಷ್ಪಾ, ಎಂ.ಜೆ. ತಿಪ್ಪೇಸ್ವಾಮಿ, ಸೌಮ್ಯಾ ಇತರರಿದ್ದರು. 
ಚಿತ್ರದುರ್ಗ

ಗೋವನ್ನು ರಾಷ್ಟಿçÃಯ ಪ್ರಾಣಿಯಾಗಿ ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ಹಿಂದೂ-ಮುಸ್ಲಿಮರ ಸಂಘರ್ಷ ಕೊನೆಯಾಗಲಿ
  • ಕರ್ನಾಟಕ ನಾಗರಿಕರ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮನವಿ
  • ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವಿ
ಚಿತ್ರದುರ್ಗ : ಗೋವಿನೊಳಗೆ ಕೋಟ್ಯಾನುಕೋಟಿ ದೇವತೆಗಳು ನೆಲೆಸಿz್ದÁರೆಂಬ ಬಲವಾದ ನಂಬಿಕೆ ಹಿಂದೂಗಳದ್ದಾಗಿದೆ. ಆದ್ದ ರಿಂದ ರಾಷ್ಟಿçÃಯ ಪ್ರಾಣಿ ಎಂದು ಘೋಷಿಸುವಂತೆ ಕರ್ನಾಟಕ ನಾಗರಿಕರ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು, ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.
ಅನಾದಿಕಾಲದಿಂದಲೂ ಹಿಂದೂಗಳು ಗೋಮಾತೆ ಎಂದೇ ಪೂಜಿಸಿಕೊಂಡು ಬಂದಿದ್ದಾರೆ. ಅದಕ್ಕಾಗಿ ರಾಷ್ಟಿçÃಯ ಪ್ರಾಣಿಯಾಗಿ ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರಮೋದಿ ಅವರಿಗೆ ಮನವಿ ರವಾನಿಸಿದರು.
ಭಾರತ ಜಾತ್ಯತೀತ ದೇಶ. ಇಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಕೋಮು ಸಂಘರ್ಷಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಗೋ ಹತ್ಯೆ ವಿವಾದ ಅತ್ಯಂತ ಗಂಭೀರವಾದುದು. ಇದನ್ನೇ ಮುಂದಿಟ್ಟುಕೊAಡು ನಿತ್ಯ ಒಂದಿ¯್ಲೆÆAದು ಕಡೆ ಘರ್ಷಣೆ, ಹತ್ಯೆಗಳು, ಅಮಾಯಕರನ್ನು ಕಾನೂನು ಕ್ರಮಕ್ಕೆ ಸಿಲುಕಿಸುವುದು ಸಾಮಾನ್ಯವಾಗಿದೆ. ಆದ್ದರಿಂದ ಇದನ್ನು ತಡೆಯಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.
ಗೋ ಮಾತೆಯನ್ನು ಸಂಪತ್ತು, ಬೆಳಕು, ಬ್ರಹ್ಮವಿದ್ಯೆ ಪಾರಂಗತೆ ಹಾಗೂ ದುಷ್ಟಶಕ್ತಿಗಳ ನಿವಾರಕಿ ಎಂದೇ ನಿತ್ಯ ಪೂಜಿಸಲಾಗು ತ್ತಿದೆ. ಪ್ರತಿ ಹಬ್ಬ, ಯಜ್ಞ ಯಾಗಾದಿ, ಹೋಮ ಹವನಗಳಲ್ಲೂ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಗೋವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಪವಿತ್ರವೆಂದು ಸ್ವೀಕರಿಸಲಾಗುತ್ತಿದೆ.
ಅವುಗಳ ಮಾಂಸ ಸೇವನೆ ಮಹಾ ಪಾಪ, ಪೈಶಾಚಿಕ ಕೃತ್ಯವೆಂಬುದು ಹಿಂದೂಗಳ ಧಾರ್ಮಿಕ ನಂಬಿಕೆಯಾಗಿದೆ. ಸಾಂವಿಧಾನಿಕ ವಾಗಿ ರಾಷ್ಟಿçÃಯ ಪ್ರಾಣಿಯಾಗಿ ಘೋಷಿಸಬೇಕು. ಗೋಹತ್ಯೆ ಸಂಪೂರ್ಣ ನಿಷೇಽಸಿ ಸೌಹಾರ್ದತೆ ಕಾಪಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ವೇದಿಕೆ ಅಧ್ಯಕ್ಷ ಬಿ.ಕೆ. ರಹಮತ್‌ವು¯್ಲÁ, ಕಾರ್ಯದರ್ಶಿ ಓ. ಪ್ರತಾಪ್‌ಜೋಗಿ, ವಕೀಲರಾದ ಮನ್ಸೂರ್‌ಭಾಷ, ಮ¯್ಲÉÃಶಪ್ಪ, ಅಶೋಕ್ ಬೆಳಗಟ್ಟ, ರಮೇಶ್, ಎಂ.ಜೆ. ತಿಪ್ಪೇಸ್ವಾಮಿ, ಗುಪ್ತ, ಪುಷ್ಪಾ, ಗಿರೀಶ, ಗುರುಮೂರ್ತಿ, ಪೃಥ್ವಿ, ಬಿ.ಕೆ. ಇ-Áðನು¯್ಲÁ, ನವಾಜ್, ಸೌಮ್ಯಾ, ಕೀರ್ತಿ ಇತರರಿದ್ದರು.