ರೈತ ಭವನದಲ್ಲಿ ಸಭೆ ಸೇರಿದ ರೈತ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ನ. 4 ರಂದು ನಡೆಸಲಾಗುವ ಚಳವಳಿ ಕುರಿತು ಚರ್ಚಿಸಿದರು. ಪದಾಧಿಕಾರಿಗಳಾದ ನವೀನ್‌ಗೌಡ, ಖಾದರ್ ಬಾಷಾ, ದೇವರಾಜು, ಜಯಣ್ಣ, ಪಾಲಾಕ್ಷಪ್ಪ, ಕೇಶವ, ಅಣ್ಣಪ್ಪ ಸ್ವಾಮಿ, ಕೇಶವ, ಈರಣ್ಣ ತಿಪ್ಪೇಸ್ವಾಮಿ ಇತರರು ಇದ್ದರು. Meeting
ಚಿತ್ರದುರ್ಗ

ಪರಶುರಾಮಪುರದಲ್ಲಿ ನ. 4ರಂದು ಚಳವಳಿಗೆ ತೀರ್ಮಾನ

ಜಾನುವಾರು, ಟ್ರ್ಯಾಕ್ಟರ್ ಇನ್ನಿತರ ವಾಹನಗಳೊಂದಿಗೆ ಚಳವಳಿಗೆ ನಿರ್ಧರ

ಪರಶುರಾಮಪುರ: ಶಿಡ್ಲಯ್ಯನಕೋಟೆ ಬ್ಯಾರೇಜ್‌ನಲ್ಲಿ ವಿವಿ ಸಾಗರದ ನೀರು ಸಂಗ್ರಹಿಸಿ ಅಲ್ಲಿಂದ ಟಿಎನ್‌ಕೋಟೆ, ಗೋಸಿಕೆರೆ ಚೌಳೂರು ಹಾಗೂ ಪರಶುರಾಮಪುರದ ಎರಡೂ ಕೆರೆಗಳಿಗೂ ಹರಿಸುವುದೂ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮದಲ್ಲಿ ನ.4 ರಂದು ಜಾನುವಾರು, ಟ್ರ್ಯಾಕ್ಟರ್ ಇನ್ನಿತರ ವಾಹನಗಳೊಂದಿಗೆ ಚಳವಳಿ ನಡೆಸಲು ರೈತರು ನಿರ್ಧರಿಸಿದ್ದಾರೆ.

ಗ್ರಾಮದ ಬೈಪಾಸ್ ರಸ್ತೆ ಬಳಿಯ ರೈತ ಭವನ ದಲ್ಲಿ ಮಂಗಳವಾರ ಸಭೆ ನಡೆಸಿದ ಸಂಟನೆ ಪದಾಧಿಕಾರಿಗಳು ಚಳವಳಿಯ ತೀರ್ಮಾನ ಕೈಗೊಂಡಿದ್ದಾರೆ. ಬೆಳೆ ಸಾಲ ಮನ್ನಾ, ಬರಪರಿಹಾರ, ಬೆಳೆ ವಿಮೆ ಮಂಜೂರು ವಾಡುವಂತೆಯೂ ಈ ಸಂದರ್ಭದಲ್ಲಿ ಹಕ್ಕೊತ್ತಾಯ ಮಾಡಲು ನಿರ್ಧರಿಸಿದ್ದಾರೆ.

ಪರಶುರಾಮಪುರದ ಎರಡೂ ಕೆರೆಗಳು ಬರಿದಾಗಿ ಹಲವು ದಶಕಗಳೇ ಕಳೆದಿವೆ. ಜನ, ಜಾನುವಾರು ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ಪರದಾಡುವ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಸರ್ಕಾರ ಗ್ರಾಮದ ಕೆರೆಗಳನ್ನು ತುಂಬಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಈ ಎಲ್ಲ ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರೂ ಈವರೆಗೂ ಸ್ಪಂದಿಸಿಲ್ಲ ಎಂದು ಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು. ವೇದಾವತಿ ನದಿ ಹರಿದು ಬರುವ ಚೌಳೂರು ಬ್ಯಾರೇಜ್ ಬಳಿ ಪಂಪ್‌ಹೌಸ್ ನಿರ್ಮಿಸಬೇಕು. ಅಲ್ಲಿಂದ ಚೌಳೂರು, ಪರಶುರಾಮಪುರದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂದ ಗ್ರಾಮ ಘಟಕದ ಅಧ್ಯಕ್ಷ ನವೀನ್‌ಗೌಡ ತಿಳಿಸಿದ್ದಾರೆ.

ಸಭೆಯಲ್ಲಿ ರೈತ ಸಂದ ಪದಾಧಿಕಾರಿಗಳಾದ ಖಾದರ್ ಬಾಷಾ, ದೇವರಾಜು, ಜಯಣ್ಣ, ಪಾಲಾಕ್ಷಪ್ಪ, ಕೇಶವ, ಅಣ್ಣಪ್ಪಸ್ವಾಮಿ, ಕೇಶವ, ಈರಣ್ಣ, ತಿಪ್ಪೇಸ್ವಾಮಿ, ಪ್ರಕಾಶ, ರಜಾಕ್‌ಸಾಬ್, ತಿಪ್ಪೇಸ್ವಾಮಿ, ಮೋಹನ್, ನಾಗರಾಜು, ತಿಮ್ಮಯ್ಯ, ರಾಜು, ನಾಗರಾಜು ಸೇರಿ ಹೋಬಳಿ ವ್ಯಾಪ್ತಿಯ ರೈತರು ಭಾಗವಹಿಸಿದ್ದರು.