ಚಿತ್ರದುರ್ಗದಲ್ಲಿ ಮಂಗಳವಾರ ಟಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಪಡೆ ಸಭೆ ನಡೆಯಿತು. ರಂಜಿತ್ ಕುಮಾರ್ ಬಂಡಾರು, ಡಾ.ಎಸ್.ಆಕಾಶ್ ಇತರರು ಇದ್ದರು. 
ಚಿತ್ರದುರ್ಗ

ಹೆಚ್ಚುವರಿ ಅದಿರು ಸಾಗಾಟದ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿ ತಾಕೀತು

ಪ್ರಮುಖ ಮುಖ್ಯಾಂಶಗಳು

  • ನಿಯಮ ಮೀರಿದ ಲಾರಿಗಳ ವಿರುದ್ಧ ಕಾರ್ಯಾಚರಣೆ
  • ವ್ಯವಸಾಯಕ್ಕೆ ಕೆರೆ ಮಣ್ಣು ಬಳಸಲು ಅನುಮತಿ
  • ಮಾರ್ಗಸೂಚಿ ಪಾಲನೆ ಕಡ್ಡಾಯ
ಚಿತ್ರದುರ್ಗ: ನಿಗದಿತ ತೂಕಕ್ಕಿಂತ ಹೆಚ್ಚುವರಿ ಅದಿರು ಸಾಗಿಸುವ ಹಾಗೂ ನಿಯಮ ಮೀರಿ ಸಂಚರಿಸುವ ಅದಿರು ಲಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಽಕಾರಿ ಟಿ. ವೆಂಕಟೇಶ್ ಆರ್‌ಟಿಒ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಗಣಿಗಾರಿಕೆ ಸಂಬAಽಸಿದ ಜಿಲ್ಲಾ ಟಾಸ್ಕ್ -ೆÇÃರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಭೀಮ ಸಮುದ್ರ, ಬೊಮ್ಮೇನಹಳ್ಳಿ ಸೇರಿ ಗಣಿ ಲಾರಿಗಳು ಸಂಚರಿಸುವ ಗ್ರಾಮಗಳ ಜನರು ಅದಿರು ಸಾಗಾಟದಿಂದ ತೊಂದರೆಯಾಗುತ್ತಿ ದೆ ಎಂದು ದೂರು ನೀಡಿದ್ದಾರೆ.
ಗಣಿಲಾರಿಗಳು ನಿಗದಿತ ತೂಕಕ್ಕಿಂತ ಹೆಚ್ಚು ಅದಿರು ಸಾಗಾಟ ಮಾಡುತ್ತಿವೆ. ಅದಿರನ ಮೇಲೆ ನೀರು ಸಿಂಪಡಿಸುವುದಿಲ್ಲ. ತಾಡ ಪಲ್ ಮುಚ್ಚುವುದಿಲ್ಲ. ಗಣಿ ಧೂಳು ಬಿದ್ದು ಬೆಳೆ ನಾಶವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ರೈತರು ಪ್ರತಿಭಟಿಸಿದ್ದಾರೆ ಎಂ ದರು.
ಪ್ರಾದೇಶಿಕ ಸಾರಿಗೆ ಅಽಕಾರಿಗಳು ಹೆಚ್ಚುವರಿಯಾಗಿ ಗಣಿ ಅದಿರು ಸಾಗಿಸುವ ಹಾಗೂ ನಿಯಮ ಪಾಲಿಸದ ಲಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಗಣಿ ಬಾಽತ ಪ್ರದೇಶದಲ್ಲಿ ಸಾಮಾಜಿಕ ಹೊಣÉಗಾರಿಕೆ ನಿಽಯಡಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರ್‌ಒ ಘಟಕಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಗಣಿ ಕಂಪನಿಗಳಿಗೆ ಡಿಸಿ ಸೂಚಿಸಿದರು.
ಗೋಮಾಳ ಮತ್ತು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದನ್ನು ತಡೆಯಲು ಜಿಲ್ಲಾ ಮತ್ತು ತಾಲೂಕು ಹಂತದ ಕಾರ್ಯಪಡೆಗಳು ಕೀಯಾಶೀಲವಾಗಿ ಕೆಲಸ ಮಾಡಬೇಕು. ಅನಽಕೃತ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಜಂಟಿ ಕಾರ್ಯಾಚರಣೆ ನಡೆಸಿ ವಾರಕೊಮ್ಮೆ ವರದಿ ನೀಡುವಂತೆ ಅಽಕಾರಿಗಳಿಗೆ ನಿರ್ದೇಶಿಸಿದರು.
ಅನುಮತಿ ಕಡ್ಡಾಯ:

ಜಿಲ್ಲೆಯಲ್ಲಿ ಕÊಷಿ ಚಟುವಟಿಕೆಗಳಿಗೆ ರೈತರು ಕೆರೆ ಹೂಳು ಬಳಸಿಕೊಳ್ಳಲು ಅನುಮತಿ ಪಡೆಯುವುದು ಕಡ್ಡಾಯ. ಈ ಕುರಿತು ಮಾ ರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೃಷಿ ಉದ್ದೇಶಕ್ಕಾಗಿ ಮಣ್ಣು ಪಡೆಯುವ ಮೊದಲು ಸಣ್ಣ ನೀರಾವರಿ ಇಲಾಖೆ, ಪಂ ಚಾಯತ್ ರಾಜ್ ಇಂಜಿನಿಯರಿAಗ್ ಅಥವಾ ಗ್ರಾಪಂನಿAದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಇದಕ್ಕಾಗಿ ಪಹಣಿ ಮತ್ತು ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಟ್ರಾಕ್ಟರ್‌ಗಳ ಮೂಲಕ ಮಾತ್ರ ಮಣ್ಣು ಸಾಗಿಸಬೇಕು. ಟ್ರಕ್ ಅಥವಾ ಲಾರಿ ಗಳಲ್ಲಿ ಹೂಳು ಸಾಗಿಸುವಂತಿಲ್ಲ. ಮಣ್ಣು ತೆಗೆಯುವಾಗ ಕೆರೆಯ ಒಳಭಾಗದಲ್ಲಿ ಒಂದು ಮೀಟರ್‌ಗಿಂತ ಹೆಚ್ಚು ಆಳದ ಗುಂಡಿ ತೋ ಡುವಂತಿಲ್ಲ, ಕೆರೆಯ ಮೂಲ ವಿನ್ಯಾಸಕ್ಕೆ ಧಕ್ಕೆ ತರಬಾರದು ಎಂದು ಡಿಸಿ ಎಚ್ಚರಿಸಿದರು.
ಕಠಿಣ ಕ್ರಮ:
ವಾಣಿಜ್ಯಉದ್ದೇಶ ಅಥವಾ ಗುತ್ತಿಗೆ ಆಧಾರಿತ ಕಾಮಗಾರಿಗಳಿಗೆ ಕೆರೆ ಮಣ್ಣು ಬಳಸಲು ರಾಜಧನ ಪಾವತಿಸಿ ಗಣಿ ಇಲಾಖೆಯಿಂದ ಅನುಮತಿ ಪಡೆಯಬೇಕು. ನಿಯಮ ಮೀರಿದರೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಽಕಾರಿಗಳಿಗೆ ನಿರ್ದೇಶಿಸಿದರು. ರೈತರು ತಮ್ಮ ತೋಟ ಅಥವಾ ಜಮೀನಿಗೆ ಕೆರೆ ಮಣ್ಣನ್ನು ಸಾಗಿಸುವಾಗ, ಮಣ್ಣಿನಲ್ಲಿರುವ ಖನಿಜಾಂಶಗಳ ಬಗ್ಗೆ ವರದಿ ಕೇಳುವುದು ಅಥವಾ ಪರೀಕ್ಷಿಸುವುದು ಅನಗತ್ಯ. ವಾಣಿಜ್ಯಉದ್ದೇಶಕ್ಕಾದರೆ ಗಣಿ ಇಲಾಖೆ ನಿಯಮಗಳ ಪ್ರಕಾರ ತಪಾಸಣೆ ನಡೆಸಬೇಕು ಎಂದು ಡಿಸಿ ಹೇಳಿದರು. ಗಣಿ, ಮರಳು, ಕ್ರಷರ್ ಪರವಾನಗಿ, ರಾಜಧನ ಸಂಗ್ರಹ ಕುರಿತು ಚರ್ಚಿಸಲಾಯಿತು.
ಜಿಪಂ ಸಿಇಒ ಡಾ.ಎಸ್. ಆಕಾಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಮಹೇಶ್, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಇನ್ನಿತರ ಅಽಕಾರಿಗಳು ಇದ್ದರು.